
ಸತ್ನಾಮ್ ಸಿಂಗ್ ಭಮರಾ
ನವದೆಹಲಿ: ಡೋಪಿಂಗ್ ಆರೋಪದ ಮೇಲೆ ಭಾರತದ ಬಾಸ್ಕೆಟ್ ಬಾಲ್ ಆಟಗಾರ ಸತ್ನಾಮ್ ಸಿಂಗ್ ಭಮರ ಅವರನ್ನು ಎರಡು ವರ್ಷಗಳ ನಿಷೇಧ ಹೇರಲಾಗಿದೆ.
2015ರಲ್ಲಿ ಎನ್ ಬಿಎ ಕರಡಿನಲ್ಲಿ ಸ್ಥಾನ ಪಡೆಯವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ ಎಂಬ ಇತಿಹಾಸ ಸೃಷ್ಟಿಸಿದ್ದರು.
ನಿಷೇಧಿತ ಪದಾರ್ಥ ಸೇವಿಸಿರುವುದು ಪರೀಕ್ಷೆಯಲ್ಲಿ ಸಾಬೀತಾದ ನಂತರ ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಘಟಕ (ನಾಡಾ)ದ ಉದ್ದೀಪನ ನಿಷೇಧ ಶಿಸ್ತು ಸಮಿತಿ ಸತ್ನಾಮ್ ವಿರುದ್ಧ ಈ ನಿಷೇಧ ಹೇರಿದೆ.
Satnam Singh Bhamara ,Basketball Player tested positive for Higenamine Beta-2-Agonist. Anti Doping Discpilinary Panel has imposed 2 years Ineligbility on him.@YASMinistry @BFI_basketball
— NADA India (@NADAIndiaOffice) December 24, 2020
ಬಾಸ್ಕೆಟ್ ಬಾಲ್ ಆಟಗಾರ ಸತ್ನಾಮ್ ಸಿಂಗ್ ಭಮರಾ ಅವರ ಪರೀಕ್ಷೆಯಲ್ಲಿ ನಿಷೇಧಿತ ಪದಾರ್ಥ ಸೇವಿಸಿರುವುದ ಸಾಬೀತಾದ ಹಿನ್ನೆಲೆಯಲ್ಲಿ ಉದ್ದೀಪನಾ ಮದ್ದು ನಿಗ್ರಹ ಶಿಸ್ತು ಸಮಿತಿ ಅವರಿಗೆ ಎರಡು ವರ್ಷ ನಿಷೇಧ ಹೇರಿದೆ ಎಂದು ನಾಡಾ ಗುರುವಾರ ಟ್ವೀಟ್ ಮಾಡಿದೆ. ಹೈಜೆನಮೈನ್ ಎಂಬ ಪದಾರ್ಥವನ್ನು 2017ರಲ್ಲೇ ವಾಡಾ ನಿಷೇಧಿಸಿದೆ.