ನಾಲ್ಕು ತಿಂಗಳಲ್ಲಿ 26 ಕೆಜಿ ತೂಕ ಇಳಿದ ಸಾನಿಯಾ.! ಸೋಶಿಯಲ್ ಮಿಡಿಯಾದಲ್ಲಿ ಹೊಸ ಫೋಟೋಗಳು ವೈರಲ್  

ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ನಾಲ್ಕು ತಿಂಗಳಲ್ಲಿ 26 ಕೆಜಿ ತೂಕ ಇಳಿಕೆಯಾಗುವ ಮೂಲಕ ಧೀರ್ಘ ಕಾಲದ ನಂತರ ಮತ್ತೆ ಸೋಶಿಯಲ್ ಮಿಡಿಯಾಗಳಲ್ಲಿ ಬಂದಿದ್ದು, ಅವರ ಅಭಿಮಾನಿಗಳನ್ನು ಆಶ್ಚರ್ಯಚಕಿತಗೊಳಿಸಿದ್ದಾರೆ.

Published: 10th February 2020 06:29 PM  |   Last Updated: 10th February 2020 07:12 PM   |  A+A-


SaniaMirza1

ಸಾನಿಯಾ ಮಿರ್ಜಾ

Posted By : Nagaraja AB
Source : The New Indian Express

ಮುಂಬೈ: ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ನಾಲ್ಕು ತಿಂಗಳಲ್ಲಿ 26 ಕೆಜಿ ತೂಕ ಇಳಿಕೆಯಾಗುವ ಮೂಲಕ ಧೀರ್ಘ ಕಾಲದ ನಂತರ ಮತ್ತೆ ಸೋಶಿಯಲ್ ಮಿಡಿಯಾಗಳಲ್ಲಿ ಬಂದಿದ್ದು, ಅವರ ಅಭಿಮಾನಿಗಳನ್ನು ಆಶ್ಚರ್ಯಚಕಿತಗೊಳಿಸಿದ್ದಾರೆ.

89 ಕಿಲೋ ವರ್ಸಸ್ 63. ನಾವೆಲ್ಲರೂ ಗುರಿಗಳನ್ನು ಹೊಂದಿದ್ದೇವೆ. ದೈನಂದಿನ ಗುರಿಗಳು ಮತ್ತು ದೀರ್ಘಾವಧಿಯ ಗುರಿಗಳು .. ಪ್ರತಿಯೊಂದರಲ್ಲೂ ಹೆಮ್ಮೆ ಪಡುತ್ತೇನೆ . ನನ್ನ ಈ ಗುರಿಯನ್ನು ಸಾಧಿಸಲು ನನಗೆ 4 ತಿಂಗಳು ಬೇಕಾಯಿತು. ಮಗು ಹೊಂದಿದ್ದ ಬಳಿಕ ಆರೋಗ್ಯಕರವಾಗಿ ಮತ್ತೆ ಕಂಬ್ಯಾಕ್ ಆಗಿರುವುದಾಗಿ ಇನ್ಸಾಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

 

ಜನವರಿಯಲ್ಲಿ ನಡೆದ ಫೈನಲ್ ನಲ್ಲಿ  ಎರಡನೇ ಶ್ರೇಯಾಂಕಿತ ಚೀನಾದ ಜೋಡಿ ಪೆಂಗ್ ಶೂಯಿ ಮತ್ತು ಜಾಂಗ್ ಶೂಯಿ ಅವರನ್ನು 6-4, 6-4 ಸೆಟ್‌ಗಳಿಂದ ಸೋಲಿಸಿದ ನಂತರ  ಹೊಬಾರ್ಟ್ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಸಾನಿಯಾ ಸ್ಪರ್ಧಾತ್ಮಕ ಟೆನಿಸ್‌ಗೆ ಮರಳಿದರು.

ಮೂರು ಬಾರಿ ಡಬಲ್ಸ್ ಗ್ರ್ಯಾಂಡ್ ಸ್ಲ್ಯಾಮ್ ವಿಜೇತ ಸಾನಿಯಾ ಎರಡು ವರ್ಷಗಳ ವಿರಾಮದ ನಂತರ ಮತ್ತೆ ಮೈದಾನಕ್ಕೆ ಇಳಿದಿದ್ದಾರೆ.ಆರಂಭದಲ್ಲಿ ಗಾಯ ತದ ನಂತರ 2018 ರ ಅಕ್ಟೋಬರ್‌ನಲ್ಲಿ ತನ್ನ ಮಗುವಿನ ಜನನ ಹಿನ್ನೆಲೆಯಲ್ಲಿ ವಿರಾಮ ಪಡೆದಿದ್ದರು.ಆಸ್ಟ್ರೇಲಿಯನ್ ಓಪನ್‌ನ ಮಹಿಳಾ ಡಬಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದಾಗಿ ಅವರು ಪಂದ್ಯದ ಮಧ್ಯದಲ್ಲಿಯೇ ಹೊರನಡೆದಿದ್ದರು.

Stay up to date on all the latest ಕ್ರೀಡೆ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp