ದೃಷ್ಟಿ ವಿಶೇಷಚೇತನನ ಈಜು ಸಾಹಸ! 45 ನಿಮಿಷಗಳಲ್ಲಿ ಪೆರಿಯಾರ್ ನದಿ ದಾಟಿದ 11ರ ಬಾಲಕ

 ಇಂದು ಮುಂಜಾನೆ ಕೇರಳದ ಮಲಪ್ಪುರಂನಲ್ಲಿ ಸಂಭ್ರಮದ ವಾತಾವರಣ, ಮಲಪ್ಪುರಂನ ಅಳುವಾ ಎಂಬಲ್ಲಿ ಸಾಜಿ ವಾಲಸೇರಿಲ್ ಎಂಬ ಯುವಕ ನಡೆಸಿಕೊಡುವ ಈಜು ತರಗತಿಗೆ ಹಾಜರಾಗಲು ಅನೇಕ ಮಂದಿ ಸೇರಿದ್ದರು. ಜತೆಗೆ 11 ವರ್ಷದ ದೃಷ್ಟಿ ವಿಶೇಷಚೇತನ ಬಾಲಕನ ಈಜು ಸಾಹಸ ನೋಡುವುದು ಅವರ ಮನೋಭಿಲಾಷೆಯಾಗಿತ್ತು.
ಆರ್ ಮನೋಜ್
ಆರ್ ಮನೋಜ್

ಕೊಚ್ಚಿನ್: ಇಂದು ಮುಂಜಾನೆ ಕೇರಳದ ಮಲಪ್ಪುರಂನಲ್ಲಿ ಸಂಭ್ರಮದ ವಾತಾವರಣ, ಮಲಪ್ಪುರಂನ ಅಳುವಾ ಎಂಬಲ್ಲಿ ಸಾಜಿ ವಾಲಸೇರಿಲ್ ಎಂಬ ಯುವಕ ನಡೆಸಿಕೊಡುವ ಈಜು ತರಗತಿಗೆ ಹಾಜರಾಗಲು ಅನೇಕ ಮಂದಿ ಸೇರಿದ್ದರು. ಜತೆಗೆ 11 ವರ್ಷದ ದೃಷ್ಟಿ ವಿಶೇಷಚೇತನ ಬಾಲಕನ ಈಜು ಸಾಹಸ ನೋಡುವುದು ಅವರ ಮನೋಭಿಲಾಷೆಯಾಗಿತ್ತು.

ಸ್ಕೂಲ್ ಫಾರ್ ದಿ ಬ್ಲೈಂಡ್‌ನ ವಿದ್ಯಾರ್ಥಿ 11ರ ಹರೆಯದ ಆರ್ ಮನೋಜ್ ಅದೇನು ಮಾಡಹೊರಟಿದ್ದು ಅದೇನೂ ಸುಲಭದ ಸಾಧನೆಯಲ್ಲ.

ಹುಟ್ಟುವಾಗಲೇ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದ ನೋಜ್ ಅದ್ವೈತ ಆಶ್ರಮದಿಂದ ಅಳುವಾ ಮಲಪ್ಪುರಂ ವರೆಗೆ ಪೆರಿಯಾರ್ ನದಿಯಲ್ಲಿ ಈಜಲು ತಯಾರಾಗಿದ್ದರು.ಮನೋಜ್ ತಮ್ಮ ಸಾಹಸದ ಬಗ್ಗೆ ಆತ್ಮವಿಶ್ವಾಸ ಹೊಂದಿದ್ದರು.ಅಲ್ಲದೆ ನಮ್ಮ ಹಿರಿಯರಲ್ಲಿ ಒಬ್ಬರಾದ ನವನೀತ್ ಪ್ರೆರಿಯಾರ್ ನದಿಯಾದ್ಯಂತ ಈಜಿ ಸಾಹಸ ಮೆರೆದ ಮೊದಲ ದೃಶ್ಃಟಿವಿಶೇಷಚೇತನ ವ್ಯಕ್ತಿ  ಅವರೇ ನನಗೆ ಈಜನ್ನು ಕಲಿಯಲು ಸ್ಪೂರ್ತಿ ಎಂದು ಮನೋಜ್ ಹೇಳಿದ್ದಾರೆ.

ನವನೀತ್ ಕೂಡ ಸಾಜಿ ಅವರ ವಿದ್ಯಾರ್ಥಿಯಾಗಿದ್ದು ಮನೋಜ್ ಅವರ ಕೈಕೆಳಗೆ ಒಂದು ತಿಂಗಳಿನಿಂದ ತರಬೇತಿ ಪಡೆಯುತ್ತಿದ್ದಾರೆ.

ಬೆಳಿಗ್ಗೆ 8.00 ರ ಸುಮಾರಿಗೆ ಅದ್ವೈತ ಆಶ್ರಮದ ಮುಖ್ಯಸ್ಥ ಸ್ವಾಮಿ ಸ್ವರೂಪಾನಂದ ಸ್ವಾಮಿಯವರು ಮನೋಜ್ ನ ಈ ಸಾಹಸಕ್ಕೆ ಶುಭಹಾರೈಸುವ ಮೂಲಕ ಹುರಿದುಂಬಿಸಿದ್ದರು. ಮನೋಜ್ ಅವರ ಶಾಲಾ ಶಿಕ್ಷಕರು ಹಾಗೂ ಸ್ನೇಹಿತರು ಸೇರಿ ಅವರ ಈಜುವ ಸಾಹಸಕ್ಕೆ ಹುರಿದುಂಬಿಸಿದ್ದರು.ಅಲ್ಲದೆ ಮನೋಜ್ ಅವರನ್ನು ಆಚೆಯ ದಡದವರೆಗೆ ಯಶಸ್ವಿಯಾಗಿ ಕಳಿಸಿಕೊಡಲು ಅವರ ಶಾಲೆಯ ಬ್ಯಾಂಡ್ ತಂಡ ಸಹ ಆಗಮಿಸಿತ್ತು.

ಮನೋಜ್ 8.45 ರ ಸುಮಾರಿಗೆ ಗಮ್ಯಸ್ಥಾನವನ್ನು ತಲುಪಿದರು ಮತ್ತು ಆ ದಡದಲ್ಲಿ ಅವರಿಗೆ ಅಭೂತಪೂರ್ವ ಚಪ್ಪಾಳೆ ಹಾಗೂ ಸ್ವಾಗತ ದೊರಕಿತು.

"ನೀರಲ್ಲಿ ಮುಳುಗಿ ಸಾವನ್ನಪ್ಪುವ ಅನೇಕ ಪ್ರಕರಣಗಳು ಇತ್ತೀಚೆಗೆ ವರದಿಯಾಗುತ್ತಿದೆ. ಹಾಗಾಗಿ  ಪ್ರತಿಯೊಬ್ಬರೂ ಈಜು ಕಲಿಯಬೇಕು.ಇದರಿಂದ ಅಂತಹ ಸಾವುನೋವುಗಳನ್ನು ತಪ್ಪಿಸಬಹುದು. ಈ ಬಗ್ಗೆ ಜನರಿಗೆ ಅರಿವು ಮೂಡಿಸುವುದು ನನ್ನ ಉದ್ದೇಶವಾಗಿದೆ"ದು ಮನೋಜ್ ಹೇಳಿದರು. ಕಳೆದ 11 ವರ್ಷಗಳಲ್ಲಿ ಜನರಿಗೆ ಉಚಿತವಾಗಿ ತರಬೇತಿ ನೀಡುತ್ತಿರುವ ಅವರ ತರಬೇತುದಾರ ಸಾಜಿ, ಮನೋಜ್ ಸಾಧನೆಯ ಬಗ್ಗೆ ಹೆಮ್ಮೆಪಡುತ್ತೇನೆ ಎಂದು ಹೇಳಿದರು.

"ಮನೋಜ್ ಗೆ  ತರಬೇತಿ ನೀಡುವುದು ತುಂಬಾ ಸುಲಭ. ಈಜು ಶಾಲಾ ಪಠ್ಯಕ್ರಮದ ಭಾಗವಾಗಬೇಕು.ಪೋಷಕರು ಯಾವಾಗಲೂ ತಮ್ಮ ಮಕ್ಕಳನ್ನು ಈಜು  ಕಲಿಯುವುದಕ್ಕೆ ಪ್ರೋತ್ಸಾಹ ಕೊಡಬೇಕು, '' ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com