ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್: ಫೈನಲ್ ತಲುಪಿದ ಸುನೀಲ್ ಕುಮಾರ್

 ಗ್ರೀಕೋ ರೋಮನ್ 87 ಕೆಜಿ ವಿಭಾಗದಲ್ಲಿ ಭಾರತದ ಸುನೀಲ್ ಕುಮಾರ್ 12-8ರಿಂದ ಕಜಕಿಸ್ತಾನದ ಅಜಮತ್ ಕುಸ್ತುಬಾಯೆವ್ ಅವರನ್ನು ಸೋಲಿಸಿ, ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಪ್ರವೇಶಿಸಿದ್ದಾರೆ.

Published: 18th February 2020 06:21 PM  |   Last Updated: 18th February 2020 06:21 PM   |  A+A-


ಸುನಿಲ್ ಕುಮಾರ್

Posted By : Raghavendra Adiga
Source : UNI

ನವದೆಹಲಿ:  ಗ್ರೀಕೋ ರೋಮನ್ 87 ಕೆಜಿ ವಿಭಾಗದಲ್ಲಿ ಭಾರತದ ಸುನೀಲ್ ಕುಮಾರ್ 12-8ರಿಂದ ಕಜಕಿಸ್ತಾನದ ಅಜಮತ್ ಕುಸ್ತುಬಾಯೆವ್ ಅವರನ್ನು ಸೋಲಿಸಿ, ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಮಂಗಳವಾರ ಇಂದಿರಾ ಗಾಂಧಿ ಕ್ರೀಡಾಂಗಣದ ನಡೆದ ಚಾಂಪಿಯನ್‌ಶಿಪ್‌ನ ಮೊದಲ ದಿನದ ಪಂದ್ಯದಲ್ಲಿ ಸುನಿಲ್ ಅವರು 87 ಕೆಜಿ ವಿಭಾಗದ ಸೆಮಿಫೈನಲ್ಸ್ ಪಂದ್ಯದಲ್ಲಿ 1-8 ಅಂತರದಲ್ಲಿ ಹಿನ್ನಡೆ ಅನುಭವಿಸಿದ ಬಳಿಕ, ಭರ್ಜರಿ ಪ್ರದರ್ಶನ ನೀಡಿ ಅಂಕಗಳನ್ನು ಕಲೆ ಹಾಕಿ 11–8 ರಿಂದ ಪಂದ್ಯ ಗೆದ್ದರು. 

ನಾನು ಈ ಮುನ್ನ ಅಜಮತ್ ಜತೆ ಅಭ್ಯಾಸ ಮಾಡಿದ್ದು ಅವರ ದೌರ್ಬಲ್ಯಗಳನ್ನು ತಿಳಿದಿದ್ದೆನು.ಪಂದ್ಯದ ಕೊನೆಯಲ್ಲಿ, ಅವರು ಶಕ್ತಿ ಕಳೆದುಕೊಳ್ಳುತ್ತಿದ್ದರು. ಆದರೆ ನಾನು ಶಕ್ತಿಯುತವಾಗಿ ಹೊಡೆತ ನೀಡಿದ್ದೆ,ಅದುವೇ ನನ್ನ ಗೆಲುವಿಗೆ ಕಾರಣವಾಗಿದೆ. ನಾನು ಮೊದಲು ನನ್ನ ಎದುರಾಳಿಯನ್ನು ದಣಿಯುವಂತೆ ಮಾಡಿ ಬಳಿಕ ಸೂಕ್ತ ಪಟ್ಟುಗಳನ್ನು ಬಳಸಲು ಯೋಜಿಸಿದ್ದೆ. ನಾನು ಆರಂಭದಲ್ಲಿ ಕೆಲವು ತಪ್ಪುಗಳನ್ನು ಮಾಡಿದ್ದೇನೆ ಆದರೆ ನನ್ನಪಂದ್ಯವನ್ನು ಗೆಲ್ಲಲು ನನಗೆ ಅದರಿಂದ ತೊಂದರೆಯಾಗಿಲ್ಲ ಎಂದು ಸುನೀ;ಲ್ ಹೇಳಿದರು.

ಕಳೆದ ವರ್ಷ, ಸುನಿಲ್ ಫೈನಲ್ ಪ್ರವೇಶಿಸಿದರೂ ಬೆಳ್ಳಿ ಪದಕಕ್ಕೆ ತೃಪ್ತಿ ಪಡಬೇಕಾಯಿತು. ಈ ಬಾರಿ ಫೈನಲ್‌ನಲ್ಲಿ ಸುನಿಲ್ ಕಿರ್ಗಿಸ್ತಾನ್‌ನ ಅಜತ್ ಸಾಲಿಡಿನೋವ್ ಅವರನ್ನು ಎದುರಿಸಲಿದ್ದಾರೆ.

Stay up to date on all the latest ಕ್ರೀಡೆ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp