ಅಂತರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸಿದ ಸುನೀತಾ ಲಕ್ರಾ

ಭಾರತದ ಮಹಿಳಾ ಹಾಕಿ ತಂಡದ ಸ್ಟಾರ್ ಆಟಗಾರ್ತಿ ಸುನೀತಾ ಲಕ್ರಾ ಅವರು ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ಗುರುವಾರ ನಿವೃತ್ತಿ ಘೋಷಿಸಿದ್ದಾರೆ.
ಸುನೀತಾ ಲಕ್ರಾ
ಸುನೀತಾ ಲಕ್ರಾ

ನವದೆಹಲಿ: ಭಾರತದ ಮಹಿಳಾ ಹಾಕಿ ತಂಡದ ಸ್ಟಾರ್ ಆಟಗಾರ್ತಿ ಸುನೀತಾ ಲಕ್ರಾ ಅವರು ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ಗುರುವಾರ ನಿವೃತ್ತಿ ಘೋಷಿಸಿದ್ದಾರೆ.

2018 ರ ಏಷ್ಯನ್ ಗೇಮ್ಸ್ ಬೆಳ್ಳಿ ವಿಜೇತ ತಂಡದ ಸದಸ್ಯೆ ಸುನೀತಾ ಅವರಿಗೆ ಮೊಣಕಾಲಿನ ಗಾಯದಿಂದ ಚೇತರಿಸಿಕೊಳ್ಳಲು ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಸುನೀತಾ, "ಇಂದು ನನಗೆ ಬಹಳ ಭಾವನಾತ್ಮಕ ದಿನವಾಗಿದೆ ಮತ್ತು ನಾನು ಅಂತರರಾಷ್ಟ್ರೀಯ ಹಾಕಿಯಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ" ಎಂದು ಅವರು ಹೇಳಿದ್ದಾರೆ.

2008 ರಿಂದ ರಾಷ್ಟ್ರೀಯ ತಂಡದ ಭಾಗವಾಗಿದ್ದ ಲಕ್ರಾ ತಮ್ಮ ವೃತ್ತಿಜೀವನದಲ್ಲಿ ಅವರು ಭಾರತಕ್ಕಾಗಿ 139 ಪಂದ್ಯಗಳನ್ನು ಆಡಿದ್ದಾರೆ.2014ರ ಏಷ್ಯನ್ ಗೇಮ್ಸ್ ನಲ್ಲಿ  ಭಾರತೀಯ ಮಹಿಳಾ ಹಾಕಿ ಪಡೆ ಕಂಚು ಗೆದ್ದಿದ್ದು ಆ ತಂಡದ ಸದಸ್ಯರಾಗಿ ಸಹ ಇವರು ಗುರುತಿಸಿಕೊಂಡಿದ್ದರು.

2016 ರಲ್ಲಿ ನಡೆದ ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಆಟಗಾರ್ತಿ ಮುಂದಿನ ಟೋಕಿಯೋ ಒಲಂಪಿಕ್ಸ್ ಗೆ ಮುನ್ನ ಮೊಣಕಾಲಿನ ಗಾಯದಿಂದ ನಿವೃತ್ತಿ ಘೋಷಿಸುವಂತಾಗಿದೆ. 

"ಟೋಕಿಯೋ ಒಲಿಂಪಿಕ್ಸ್‌ಭಾರತೀಯ ತಂಡದ ಭಾಗವಾಗಬೇಕೆಂದು ನಾನು ಬಯಸಿದ್ದೆ, ಮೊಣಕಾಲಿನ ಗಾಯಗಳು ನನ್ನ ಕನಸನ್ನು ಚೂರಾಗಿಸಿದೆ. ಮೊಣಕಾಲಿನ ಶಸ್ತ್ರಚಿಕಿತ್ಸೆ ನಡೆಯಬೇಕಿದೆ. ನಾನು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ನನಗೆ ಖಚಿತವಿಲ್ಲ. ಒಮ್ಮೆ ಚೇತರಿಸಿಕೊಂಡ ನಂತರ ದೇಶೀಯ ಹಾಕಿಯಲ್ಲಿ ಮುಂದುವರಿಯುವೆ" ಲಕ್ರಾ ಹೇಳಿದರು.

ತಮ್ಮ ಬೆಂಬಲಿಸಿದ ತಂಡದ ಸದಸ್ಯರು, ಕೋಚ್, ಪ್ರಾಯೋಜಕರು ಸೇರಿ ಎಲ್ಲರಿಗೆ ಲಕ್ರಾ ಧನ್ಯವಾದ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com