ಟೇಬಲ್ ಟೆನಿಸ್ ಶ್ರೇಯಾಂಕ: ಅಗ್ರ ಸ್ಥಾನಕ್ಕೇರಿದ ಮಾನವ್ ಠಕ್ಕರ್

ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಒಕ್ಕೂಟ ಬಿಡುಗಡೆ ಮಾಡಿರುವ 21 ವಯೋಮಿತಿ ಶ್ರೇಯಾಂಕದಲ್ಲಿ ಭಾರತದ ಯುವ ಆಟಗಾರ ಮಾನವ್ ಠಕ್ಕರ್ ಅವರು ಒಂಬತ್ತು ಸ್ಥಾನಗಳಲ್ಲಿ ಜಿಗಿದು ಅಗ್ರ ಸ್ಥಾನ ಅಲಂಕರಿಸಿದ್ದಾರೆ. 
ಮಾನವ್ ಠಕ್ಕರ್
ಮಾನವ್ ಠಕ್ಕರ್

ನವದೆಹಲಿ" ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಒಕ್ಕೂಟ ಬಿಡುಗಡೆ ಮಾಡಿರುವ 21 ವಯೋಮಿತಿ ಶ್ರೇಯಾಂಕದಲ್ಲಿ ಭಾರತದ ಯುವ ಆಟಗಾರ ಮಾನವ್ ಠಕ್ಕರ್ ಅವರು ಒಂಬತ್ತು ಸ್ಥಾನಗಳಲ್ಲಿ ಜಿಗಿದು ಅಗ್ರ ಸ್ಥಾನ ಅಲಂಕರಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೆನಡಾದ ಐಟಿಟಿಎಫ್ ಚಾಲೆಂಜ್ ಪ್ಲಸ್ ಬೆನೆಮ್ಯಾಕ್ಸ್‌-ವರ್ಗೋ ನಾರ್ಥ್ ಅಮೆರಿಕನ್ ಓಪನ್ 21 ವಯೋಮಿತಿ ಸಿಂಗಲ್ಸ್‌ ವಿಭಾಗದಲ್ಲಿ 19ರ ಪ್ರಾಯದ ಮಾನವ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಇವರು ಫೈನಲ್ ಹಣಾಹಣಿಯಲ್ಲಿ ಮಾರ್ಟಿನ್ ವಿರುದ್ಧ 11-3, 11-5, 11-6 ಅಂತರದಲ್ಲಿ ಗೆಲುವು ಸಾಧಿಸಿದ್ದರು. ಹರ್ಮೀತ್ ದೇಸಾಯಿ, ಜಿ. ಸತ್ಯಯಿನ್ ಹಾಗೂ ಸೌಮ್ಯಜಿತ್ ಘೋಷ್ ಬಳಿಕ ಈ ಸಾಧನೆ ಮಾಡಿದ ನಾಲ್ಕನೇ ಟೇಬಲ್ ಟೆನಿಸ್ ಆಟಗಾರ ಎಂಬ ಹಿರಿಮೆಗೆ ಮಾನವ್ ಬಾಜನರಾಗಿದ್ದಾರೆ.

2018ರ ಫೆಬ್ರುವರಿಯಲ್ಲಿಯೂ ಠಕ್ಕರ್ ಅವರು 18 ವಯೋಮಿತಿ ಶ್ರೇಯಾಂಕದಲ್ಲೂ ಅಗ್ರ ಸ್ಥಾನ ಪಡೆದಿದ್ದರು. ಜಕಾರ್ತದಲ್ಲಿ ನಡೆದಿದ್ದ 2018ರ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತ ಪುರುಷರ ತಂಡದಲ್ಲಿ ಜುನೇದ್ ಸ್ಥಾನ ಪಡೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com