ಖೇಲೋ ಇಂಡಿಯಾ: ಬಾಲಕಿಗೆ ಚುಚ್ಚಿದ ಬಾಣ, ಪ್ರಾಣಾಪಾಯದಿಂದ ಪಾರು

ಬಿಲ್ಲುಗಾರಿಕೆ ಅಭ್ಯಾಸ ನಡೆಸುತ್ತಿರುವ ವೇಳೆ ಬಾಲಕಿಯ ಭುಜಕ್ಕೆ ಬಾಣ ಚುಚ್ಚಿರುವ ಆಘಾತಕಾರಿ ಘಟನೆ ಅಸ್ಸಾಂನಲ್ಲಿ ನಡೆದಿದ್ದು, ಅದೃಷ್ಟವಶಾತ್ ಯುವ ಆರ್ಚರಿ ಪಟು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Published: 10th January 2020 03:48 PM  |   Last Updated: 10th January 2020 03:48 PM   |  A+A-


Archer shivangini

ಬಾಲಕಿಗೆ ಚುಚ್ಚಿದ ಬಾಣ

Posted By : Srinivasamurthy VN
Source : UNI

ನವದೆಹಲಿ: ಬಿಲ್ಲುಗಾರಿಕೆ ಅಭ್ಯಾಸ ನಡೆಸುತ್ತಿರುವ ವೇಳೆ ಬಾಲಕಿಯ ಭುಜಕ್ಕೆ ಬಾಣ ಚುಚ್ಚಿರುವ ಆಘಾತಕಾರಿ ಘಟನೆ ಅಸ್ಸಾಂನಲ್ಲಿ ನಡೆದಿದ್ದು, ಅದೃಷ್ಟವಶಾತ್ ಯುವ ಆರ್ಚರಿ ಪಟು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗುವಾಹಟಿಯ ದಿಬ್ರುಗರ್‌ ಜಿಲ್ಲೆಯ ಚಬುವಾದಲ್ಲಿ ಆರ್ಚರಿ ಅಭ್ಯಾಸ ನಡೆಸುತ್ತಿದ್ದ ವೇಳೆ 12ರ ಹರೆಯದ ಬಾಲಕಿ ಶಿವಾಂಗಿನಿ ಗೋಹೈನ್ ಭುಜಕ್ಕೆ ತೀಕ್ಷ್ಣವಾದ ಬಾಣ ಚುಚ್ಚಿಕೊಂಡಿದೆ. ಆರಂಭದಲ್ಲಿ ಖೇಲೋ ಇಂಡಿಯಾ ಗೇಮ್ಸ್‌ನಲ್ಲಿ ಅನಾಹುತ ಸಂಭವಿಸಿದೆ ಎಂಬ ವರದಿಗಳು ಬಂದಿತ್ತು. ಬಳಿಕ ಅಸ್ಸಾಂ ಆರ್ಚರಿ ಅಸೋಸಿಯೇಷನ್ ಘಟನೆ ಬಗ್ಗೆ ಸ್ಪಷ್ಟನೆ ನೀಡಿದೆ.

ಶಿವಾಂಗಿನಿ ಖೇಲೋ ಇಂಡಿಯಾ ಟೂರ್ನಿಯಲ್ಲಿ ಭಾಗವಹಿಸಲು ಅಭ್ಯಾಸ ನಡೆಸುತ್ತಿದ್ದರು ಎನ್ನಲಾಗಿದೆ. ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್) ಕೇಂದ್ರದಲ್ಲಿ ಘಟನೆ ನಡೆದಿದ್ದು, ತಕ್ಷಣ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಬಾಲಕಿ ಈಗ ಚೇತರಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. 

ಬಾಲಕಿಯ ಬೇಕಾಗಿರುವ ಚಿಕಿತ್ಸೆಯ ಎಲ್ಲ ವೆಚ್ಚವನ್ನು ಭರಿಸುವುದಾಗಿ ಭಾರತೀಯ ಕ್ರೀಡಾ ಪ್ರಾಧಿಕಾರ ಘೋಷಿಸಿದೆ. ಖೆಲೋ ಇಂಡಿಯಾ ಯೂತ್ ಗೇಮ್ಸ್, ಅಸ್ಸಾಂನ ಗುವಾಹಟಿಯಲ್ಲಿ ಜನವರಿ 10 ರಿಂದ 22ರ ವರೆಗೆ ನಡೆಯುತ್ತಿದೆ.
ಒಂಬತ್ತರ ಹರೆಯದಿಂದಲೇ ಬಿಲ್ಲುಗಾರಿಕೆಯಲ್ಲಿ ಪ್ರವೀಣೆಯಾಗಿರುವ ಶಿವಾಂಗಿನಿ ಈಗಾಗಲೇ ಅನೇಕ ಪದಕಗಳನ್ನು ಗೆದಿದ್ದಾರೆ. ಆಂಧ್ರ ಪ್ರದೇಶದಲ್ಲಿ ನಡೆದ 65ನೇ ರಾಷ್ಟ್ರೀಯ ಶಾಲಾ ಕ್ರೀಡಾ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲೂ ಭಾಗವಹಿಸಿದ್ದರು.

Stay up to date on all the latest ಕ್ರೀಡೆ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp