2019ರ ವಿಶ್ವ ಕ್ರೀಡಾಪಟು ಪ್ರಶಸ್ತಿಗೆ ರಾಣಿ ರಾಂಪಾಲ್ ಹೆಸರು ಶಿಫಾರಸ್ಸು

ಕಳೆದ ಹಲವು ಒಲಿಂಪಿಕ್ಸ್ ಕ್ರೀಡಾಕೂಟಗಳಿಗೆ ಭಾರತ ಮಹಿಳಾ ಹಾಕಿ ತಂಡ ಅರ್ಹತೆ ಪಡೆಯಲು ಶ್ರಮಿಸುತ್ತಿರುವ ನಾಯಕಿ ರಾಣಿ ರಾಂಪಾಲ್ ಅವರನ್ನು 2019ರ ವರ್ಷದ ವಿಶ್ವ ಕ್ರೀಡಾಪಟು ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲಾಗಿದೆ.

Published: 10th January 2020 02:58 PM  |   Last Updated: 10th January 2020 02:58 PM   |  A+A-


International Hockey Federation

ಸಂಗ್ರಹ ಚಿತ್ರ

Posted By : srinivasamurthy
Source : UNI

ನವದೆಹಲಿ: ಕಳೆದ ಹಲವು ಒಲಿಂಪಿಕ್ಸ್ ಕ್ರೀಡಾಕೂಟಗಳಿಗೆ ಭಾರತ ಮಹಿಳಾ ಹಾಕಿ ತಂಡ ಅರ್ಹತೆ ಪಡೆಯಲು ಶ್ರಮಿಸುತ್ತಿರುವ ನಾಯಕಿ ರಾಣಿ ರಾಂಪಾಲ್ ಅವರನ್ನು 2019ರ ವರ್ಷದ ವಿಶ್ವ ಕ್ರೀಡಾಪಟು ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲಾಗಿದೆ.

25 ಕ್ರೀಡೆಗಳಿಂದ ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡ 25 ಕ್ರೀಡಾಪಟುಗಳನ್ನು ಅವರ ಅಂತರರಾಷ್ಟ್ರೀಯ ಫೆಡರೇಷನ್‌ಗಳು ಶಿಫಾರಸು ಮಾಡಿವೆ ಮತ್ತು ಹಾಕಿ ಕ್ರೀಡೆಯಲ್ಲಿ ರಾಣಿ ರಾಂಪಾಲ್ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಎಫ್‌ಐಹೆಚ್ ಭಾರತ ತಂಡದ ನಾಯಕಿಯನ್ನು ಶಿಫಾರಸ್ಸು ಮಾಡಿದೆ. "ರಾಣಿ ಅವರ ಹೆಸರನ್ನು 2019 ರ ವಿಶ್ವ ಕ್ರೀಡಾಕೂಟಕ್ಕೆ ನಾಮ ನಿರ್ದೇಶನ ಮಾಡಿರುವ ಸುದ್ದಿ ಕೇಳಿ ನಿಜಕ್ಕೂ ಹಾಕಿ ಇಂಡಿಯಾ ಹರ್ಷಿಸುತ್ತಿದೆ. ಅವರು ನಿಜಕ್ಕೂ ದೇಶದ ಅನೇಕರಿಗೆ ದೊಡ್ಡ ಸ್ಫೂರ್ತಿ ಮತ್ತು ಕ್ರೀಡೆಯಲ್ಲಿ ತಮ್ಮದೇ ಆದ  ಮೈಲುಗಲ್ಲು ಸೃಷ್ಟಿಸಿದ್ದಾರೆ.  ಅವರ ಸಾಧನೆಗಳಿಂದ ಮತ್ತು ಭಾರತದ ಮಹಿಳಾ ಹಾಕಿಗೆ  ಅವರು ನೀಡಿದ ಕೊಡುಗೆ ಅದ್ಭುತವಾದದ್ದು, " ಎಂದಿರುವ ಹಾಕಿ ಇಂಡಿಯಾ ಅಧ್ಯಕ್ಷ  ಮೊಹಮ್ಮದ್ ಮುಷ್ತಾಕ್ ಅಹ್ಮದ್  ಅವರು ರಾಣಿ ರಾಂಪಾಲ್ ಗೆ ಅಭಿನಂದಿಸಿದ್ದಾರೆ.

"ಈ ನಾಮನಿರ್ದೇಶನವು ರಾಣಿಯ ಯಶಸ್ಸನ್ನು ಅನುಕರಿಸಲು ಬಯಸುವ ಇತರ ಅನೇಕ ಮಹತ್ವಾಕಾಂಕ್ಷಿ ಆಟಗಾರರಿಗೆ ಸ್ಫೂರ್ತಿಯಾಗಿದೆ ಎಂದು ನಾವು ಭಾವಿಸುತ್ತೇವೆ. ಎಲ್ಲಾ ಹಾಕಿ ಅಭಿಮಾನಿಗಳು ರಾಣಿಗೆ ಮತ ಚಲಾಯಿಸುವಂತೆ ನಾವು ಕೋರುತ್ತೇವೆ ಮತ್ತು 2020 ರ ಟೋಕಿಯೊ ಒಲಿಂಪಿಕ್ಸ್‌ಗಾಗಿ  ರಾಣಿ ಮತ್ತು ಭಾರತೀಯ ಮಹಿಳಾ ತಂಡವನ್ನು  ಬೆಂಬಲಿಸುತ್ತಲೇ ಇರುತ್ತೇವೆ," ಎಂದು ಅವರು ಹೇಳಿದರು.

Stay up to date on all the latest ಕ್ರೀಡೆ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp