ಆಸ್ಟ್ರೇಲಿಯಾ ಓಪನ್: ಜೊಕೊವಿಚ್ ವಿರುದ್ಧ ಸೆಣಸುವ ಸುವರ್ಣಾವಕಾಶ ಕಳೆದುಕೊಂಡ ಪ್ರಜ್ಞೇಶ್ ಗುಣೇಶ್ವರನ್

ಭಾರತದ ಅಗ್ರ ಶ್ರೇಯಾಂಕಿತ ಟೆನಿಸ್ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ ಅವರು ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಪುರುಷರ ಸಿಂಗಲ್ಸ್ ಮೊದಲನೇ ಸುತ್ತಿನಲ್ಲಿ ಸೋಲು ಅನುಭವಿಸಿದ್ದಾರೆ. 

Published: 21st January 2020 01:48 PM  |   Last Updated: 21st January 2020 01:48 PM   |  A+A-


Indian tennis: Prajnesh Gunneswaran out of Australian Open after straight-sets loss in first round

ಆಸ್ಟ್ರೇಲಿಯಾ ಓಪನ್: ಜೊಕೊವಿಚ್ ವಿರುದ್ಧ ಸೆಣಸುವ ಸುವರ್ಣಾವಕಾಶ ಕಳೆದುಕೊಂಡ ಪ್ರಜ್ಞೇಶ್ ಗುಣೇಶ್ವರನ್

Posted By : Srinivas Rao BV
Source : UNI

ಮೆಲ್ಬೋರ್ನ್: ಭಾರತದ ಅಗ್ರ ಶ್ರೇಯಾಂಕಿತ ಟೆನಿಸ್ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ ಅವರು ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಪುರುಷರ ಸಿಂಗಲ್ಸ್ ಮೊದಲನೇ ಸುತ್ತಿನಲ್ಲಿ ಸೋಲು ಅನುಭವಿಸಿದ್ದಾರೆ. 

ಆ ಮೂಲಕ ವಿಶ್ವದ ಎರಡನೇ ಶ್ರೇಯಾಂಕಿತ ನೊವಾಕ್ ಜೊಕೊವಿಚ್ ವಿರುದ್ಧ ಸೆಣಸುವ ಅವಕಾಶವನ್ನು ಕಳೆದುಕೊಂಡರು. ಟೂರ್ನಿಯ ಅರ್ಹತಾ ಸುತ್ತಿನ ಕೊನೆಯ ಪಂದ್ಯದಲ್ಲಿ ಸೋಲಿನ ಹೊರತಾಗಿಯೂ 122ನೇ ಶ್ರೇಯಾಂಕಿತ ಪ್ರಜ್ಞೇಶ್ ಗುಣೇಶ್ವರನ್ ಅವರು ಅದೃಷ್ಟದಿಂದ ಪ್ರಧಾನ ಸುತ್ತಿಗೆ ಲಗ್ಗೆ ಇಟ್ಟಿದ್ದರು.  

ಆದರೆ, ವೇಳಾಪಟ್ಟಿಯ ಪರಿಷ್ಕರಿಸಿದ ಪರಿಣಾಮ ಮಂಗಳವಾರ ಬೆಳಗ್ಗೆ ಆಡಿದ್ದ ಮೊದಲ ಸುತ್ತಿನ ಹಣಾಹಣಿಯಲ್ಲಿ ಜಪಾನ್ ನ ವೈಲ್ಡ್ ಕಾರ್ಡ್ ತಾತ್ಸುಮ ಇಟೋ ವಿರುದ್ಧ 4-6, 2-6, 5-7 ಅಂತರದಲ್ಲಿ ಸೋಲು ಅನುಭವಿಸಿದರು. ಒಟ್ಟಾರೆ, ಎರಡು ಗಂಟೆ ಒಂದು ನಿಮಿಷಗಳ ಕಾಲ ನಡೆದ ಸುದೀರ್ಘ ಕಾಳಗದಲ್ಲಿ ಭಾರತದ ಆಟಗಾರನಿಗೆ ನಿರಾಸೆ ಆಯಿತು.

Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp