ಇನ್ ಸ್ಟಾಗ್ರಾಮ್ ನಲ್ಲಿ 200 ಮಿಲಿಯನ್ ಫಾಲೋವರ್ಸ್ ಮೈಲುಗಲ್ಲು: ರೊನಾಲ್ಡೊ ವಾರ್ಷಿಕ ಆದಾಯ ಎಷ್ಟು ಗೊತ್ತಾ?

ವಿಶ್ವ ಶ್ರೇಷ್ಟ ಪುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಮ್ ನಲ್ಲಿ 200 ಮಿಲಿಯನ್ ಫಾಲೋವರ್ಸ್ ಪಡೆದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ
ಕ್ರಿಸ್ಟಿಯಾನೊ ರೊನಾಲ್ಡೊ
ಕ್ರಿಸ್ಟಿಯಾನೊ ರೊನಾಲ್ಡೊ

ನವದೆಹಲಿ: ವಿಶ್ವ ಶ್ರೇಷ್ಟ ಪುಟ್ಬಾಲ್ ಆಟಗಾರ  ಕ್ರಿಸ್ಟಿಯಾನೊ ರೊನಾಲ್ಡೊ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಮ್ ನಲ್ಲಿ 200 ಮಿಲಿಯನ್ ಫಾಲೋವರ್ಸ್ ಪಡೆದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಮೈಲುಗಲ್ಲು ತಲುಪಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ರೊನಾಲ್ಡ್, ಅಭಿಮಾನಿಗಳು ಹಾಗೂ ಫಾಲೋವರ್ಸ್ ಗೆ ಧನ್ಯವಾದ ಆರ್ಪಿಸಿದ್ದಾರೆ.ಪ್ರತಿದಿನ ಈ ಪ್ರಯಾಣವನ್ನು ಹಂಚಿಕೊಂಡಿದ್ದಕ್ಕೆ ಪ್ರತಿಯೊಬ್ಬರಿಗೂ ಧನ್ಯವಾದ ಹೇಳುವುದಾಗಿ ಅವರು ತಿಳಿಸಿದ್ದಾರೆ.

ಇನ್ಸಾಟಾಗ್ರಾಮ್ ಮಾರ್ಕೆಟಿಂಗ್ ಕಂಪನಿ ಹೊಪರ್  ಹೆಚ್ ಕ್ಯೂನ ಇತ್ತೀಚಿನ ಅಧ್ಯಯನದ ಪ್ರಕಾರ ಪೊರ್ಚಗಲ್ ರಾಷ್ಟ್ರೀಯ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ, ಪ್ರತಿಯೊಂದು ಪೋಸ್ಟ್ ಗೂ 90 ಸಾವಿರ ಯುರೋ ಗಳಿಸುತ್ತಿದ್ದಾರೆ ಎನ್ನಲಾಗಿದೆ. 

ರೊನಾಲ್ಡ್  ಕ್ಲಬ್ ಕಡೆಯಿಂದ ಗಳಿಸುವ ಅಂದಾಜು 34 ಮಿಲಿಯನ್ ಯುರೋ ಆದಾಯಕ್ಕಿಂತ ಹೆಚ್ಚು ಅಂದರೆ ವಾರ್ಷಿಕ 48 ಮಿಲಿಯನ್ ಯುರೋದಷ್ಟು ಆದಾಯವನ್ನು ಇನ್ಸಾಗ್ರಾಮ್ ತಂದುಕೊಡುತ್ತಿದೆ. ಉಳಿದಂತೆ ಮೆಸ್ಸಿ ಇನ್ಸಾಟಾಗ್ರಾಮ್ ನಲ್ಲಿ ಅಂದಾಜು 23. 3 ಮಿಲಿಯನ್ ಯುರೋ ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.

ರೊನಾಲ್ಡ್ ಹೊರತುಪಡಿಸಿದಂತೆ  ಅರಿಯಾನ ಗ್ರಾಂಡೆ, 173 ಮಿಲಿಯನ್, ಡ್ವೇನ್ ಜಾನ್ಸನ್ 170 ಮಿಲಿಯನ್ , ಲಿಯೊನೆಲ್ ಮೆಸ್ಸಿ ಇನ್ಸಾಟಾಗ್ರಾಮ್ ನಲ್ಲಿ  148 ಮಿಲಿಯನ್ ಫಾರ್ಲೊವರ್ಸ್ ಹೊಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com