ಆಸ್ಟ್ರೇಲಿಯಾ ಓಪನ್: ಫೆಡರರ್ ಮಣಿಸಿ 8ನೇ ಬಾರಿ ಫೈನಲ್‌ಗೇರಿದ ಜೊಕೊವಿಚ್

ಅತಿ ಹೆಚ್ಚು ಗ್ರ್ಯಾನ್ ಸ್ಲ್ಯಾಮ್ ವಿಜೇತ ರೋಜರ್ ಫೆಡರರ್ ಅವರನ್ನು ಮಣಿಸಿದ ವಿಶ್ವದ ಎರಡನೇ ಶ್ರೇಯಾಂಕಿತ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ದಾಖಲೆಯ ಎಂಟನೇ ಬಾರಿ ಫೈನಲ್ ಪ್ರವೇಶಿಸಿದ್ದಾರೆ.

Published: 30th January 2020 07:19 PM  |   Last Updated: 30th January 2020 07:19 PM   |  A+A-


novk1

ನೊವಾಕ್ ಜೊಕೊವಿಚ್

Posted By : Lingaraj Badiger
Source : UNI

ಮೆಲ್ಬೋರ್ನ್: ಅತಿ ಹೆಚ್ಚು ಗ್ರ್ಯಾನ್ ಸ್ಲ್ಯಾಮ್ ವಿಜೇತ ರೋಜರ್ ಫೆಡರರ್ ಅವರನ್ನು ಮಣಿಸಿದ ವಿಶ್ವದ ಎರಡನೇ ಶ್ರೇಯಾಂಕಿತ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ದಾಖಲೆಯ ಎಂಟನೇ ಬಾರಿ ಫೈನಲ್ ಪ್ರವೇಶಿಸಿದ್ದಾರೆ. ಜತೆಗೆ, ವೃತ್ತಿ ಜೀವನದ 17ನೇ ಗ್ರ್ಯಾನ್  ಸ್ಲ್ಯಾಮ್ ಗೆಲುವಿನ ಸಮೀಪ ತಲುಪಿದ್ದಾರೆ.

ವಿಶ್ವದ ಅತ್ಯಂತ ಶ್ರೇಷ್ಠ ಆಟಗಾರರಾದ ಸ್ವಿಜರ್‌ಲೆಂಡ್‌ನ ರೋಜರ್ ಫೆಡರರ್ ಹಾಗೂ ನೊವಾಕ್ ಜೊಕೊವಿಚ್ ಅವರ ನಡುವಿನ ಪಂದ್ಯವನ್ನು ಕಣ್ತುಂಬಿಕೊಳ್ಳಲು ಗುರುವಾರ ಸಾವಿರಾರು ಅಭಿಮಾನಿಗಳು ಅಂಗಳಕ್ಕೆ ಧಾವಿಸಿದ್ದರು. ಅದರಂತೆ ಪಂದ್ಯ ರೋಚಕತೆ ಕೆರಳಿಸಿತ್ತು. ಪಂದ್ಯದ ಮೇಲೆ ಹಿಡಿತ ಸಾಧಿಸಿದ ಜೊಕೊವಿಚ್ ಅವರು  7-6 (7/1), 6-4, 6-3 ಅಂತರದಲ್ಲಿ ಸ್ವಿಸ್ ದಂತಕತೆಯನ್ನು ಸೋಲಿಸಿದರು. 

ಭಾನುವಾರ ನಡೆಯುವ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಐದನೇ ಶ್ರೇಯಾಂಕಿತ ಡೊಮಿನಿಚ್ ಥೀಮ್ ಅಥವಾ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ ಸರ್ಬಿಯಾ ಆಟಗಾರ ಸೆಣಸಲಿದ್ದಾರೆ.

ಬುಧವಾರ ನಡೆದಿದ್ದ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಸ್ಪೇನ್ ರಫೆಲ್ ನಡಾಲ್ ಅವರು ಥೀಮ್ ವಿರುದ್ಧ ಸೋಲು ಅನುಭವಿಸಿ ಟೂರ್ನಿಯಿಂದ ನಿರ್ಗಮಿಸಿದ್ದರು. 

ಇದಕ್ಕೂ ಮುನ್ನ ಮಹಿಳೆಯರ ವಿಭಾಗದ ಸೆಮಿಪೈನಲ್ ಹಣಾಹಣಿಯಲ್ಲಿ ವಿಶ್ವದ ಅಗ್ರ ಶ್ರೇಯಾಂಕಿತೆ ಆ್ಯಶ್ಲೆ ಬಾರ್ಟಿ ಅವರನ್ನು ಅಮೆರಿಕದ 21ರ ಪ್ರಾಯದ ಸೋಫಿಯಾ ಕೆನಿನ್ ಅವರು ಸೋಲುಣಿಸಿದ್ದರು. 2008ರ ಬಳಿಕ ಆಸ್ಟ್ರೇಲಿಯಾ ಓಪನ್ ಫೈನಲ್ ಪ್ರವೇಶಿಸಿದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹಿರಿಮೆಗೆ ಕೆನಿನ್ ಭಾಜನರಾಗಿದ್ದಾರೆ.

Stay up to date on all the latest ಕ್ರೀಡೆ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp