ಆಸ್ಟ್ರೇಲಿಯಾ ಓಪನ್: ಅಗ್ರ ಶ್ರೇಯಾಂಕಿತೆ ಆ್ಯಶ್ಲೆ ಬಾರ್ಟಿಗೆ ಆಘಾತ ನೀಡಿದ ಸೋಫಿಯಾ ಫೈನಲ್ ಗೆ

ಅಮೆರಿಕಾ ಟೆನಿಸ್ ಆಟಗಾರ್ತಿ ಸೋಫಿಯಾ ಕೆನಿನ್ ಗುರುವಾರ ವೃತ್ತಿ ಜೀವನದ ಮೊಟ್ಟ ಮೊದಲ ಬಾರಿ ಗ್ರ್ಯಾನ್ ಸ್ಲ್ಯಾಮ್ ಫೈನಲ್ ತಲುಪಿದ್ದಾರೆ.
ಸೋಫಿಯಾ ಕೆನಿನ್
ಸೋಫಿಯಾ ಕೆನಿನ್

ಮೆಲ್ಬೋರ್ನ್: ಅಮೆರಿಕಾ ಟೆನಿಸ್ ಆಟಗಾರ್ತಿ ಸೋಫಿಯಾ ಕೆನಿನ್ ಗುರುವಾರ ವೃತ್ತಿ ಜೀವನದ ಮೊಟ್ಟ ಮೊದಲ ಬಾರಿ ಗ್ರ್ಯಾನ್ ಸ್ಲ್ಯಾಮ್ ಫೈನಲ್ ತಲುಪಿದ್ದಾರೆ.

ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ಹಣಾಹಣಿಯ ಸೆಮಿಫೈನಲ್ ಹಣಾಹಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಸೋಫಿಯಾ ಕೆನಿನ್ ಅವರು ವಿಶ್ವದ ಅಗ್ರ ಶ್ರೇಯಾಂಕಿತೆ ಆ್ಯಶ್ಲೆ ಬಾರ್ಟಿ ಅವರ ವಿರುದ್ಧ  7-6 (6), 7-5 ಅಂತರದಲ್ಲಿ ಗೆದ್ದು ಆಸ್ಟ್ರೇಲಿಯಾ ಓಪನ್ ಪೈನಲ್ ಪ್ರವೇಶಿಸಿದ್ದಾರೆ.

ಗೆಲುವಿನ ಬಳಿಕ ಮಾತನಾಡಿದ ಸೋಫಿಯಾ "ಇದು ನಿಜವಾಗಿಯೂ ಸುಲಭವಾಗಿರಲಿಲ್ಲ" ಎಂದಿದ್ದಾರೆ. ವಿಶೇಷವೆಂದರೆ ಸೋಫಿಯಾ ಇದುವರೆಗೆ ಯಾವ ಪ್ರಮುಖ ಪಂದ್ಯಾವಳಿಯಲ್ಲಿಯೂ ನಾಲ್ಕನೇ ಹಂತವನ್ನು ದಾಟಿರಲಿಲ್ಲ.

ರಷ್ಯಾದಲ್ಲಿ ಜನಿಸಿ ಚಿಕ್ಕ ವಯಸ್ಸಿನಲ್ಲೇ ಫ್ಲೋರಿಡಾಕ್ಕೆ ಬಂದಿದ್ದ ಸೋಫಿಯಾ 2019 ರಲ್ಲಿ ಮೂರು ಸಿಂಗಲ್ಸ್ ಪ್ರಶಸ್ತಿಗಳನ್ನು  ಗೆದ್ದಿದ್ದರು ಅಲ್ಲದೆ ಫ್ರೆಂಚ್ ಓಪನ್‌ನ ಮೂರನೇ ಸುತ್ತಿನಲ್ಲಿ ಸೆರೆನಾ ವಿಲಿಯಮ್ಸ್ ಅವರನ್ನು ಮಣಿಸುವ ಮೂಲಕ ಸುದ್ದಿಯಾಗಿದ್ದರು.

ಶನಿವಾರ ನಡೆಯುವ ಮಹಿಳೆಯರ ಫೈನಲ್ಸ್ ನಲ್ಲಿ ಸೋಫಿಯಾ ಕೆನಿನ್ ನಂ. 4ನೇ ಸಿಮೋನಾ ಹ್ಯಾಲೆಪ್ ಅಥವಾ ಶ್ರೇಯಾಂಕ ರಹಿತ ಗಾರ್ಬೀಸ್ ಮುಗುರುಜಾ ವಿರುದ್ಧ ಸೆಣಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com