ಲಿಯೋನೆಲ್ ಮೆಸ್ಸಿ ಮತ್ತೊಂದು ಮೈಲುಗಲ್ಲು

ಬಾರ್ಸಿಲೋನಾದ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಮಂಗಳವಾರ ತಮ್ಮ ವೃತ್ತಿ ಬದುಕಿನ 700ನೇ ಗೋಲಿನ ಸಂಭ್ರಮವನ್ನು ಆಚರಿಸುವ ಮೂಲಕ ಮತ್ತೊಂದು ಮೈಲುಗಲ್ಲು ಸಾಧಿಸಿದ್ದಾರೆ.

Published: 01st July 2020 06:15 PM  |   Last Updated: 01st July 2020 06:15 PM   |  A+A-


superstar Lionel Messi Sees Russia as Last Chance for World Cup Glory

ಲಿಯೋನೆಲ್ ಮೆಸ್ಸಿ (ಸಂಗ್ರಹ ಚಿತ್ರ)

Posted By : Lingaraj Badiger
Source : UNI

ಬಾರ್ಸಿಲೋನಾ: ಬಾರ್ಸಿಲೋನಾದ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಮಂಗಳವಾರ ತಮ್ಮ ವೃತ್ತಿ ಬದುಕಿನ 700ನೇ ಗೋಲಿನ ಸಂಭ್ರಮವನ್ನು ಆಚರಿಸುವ ಮೂಲಕ ಮತ್ತೊಂದು ಮೈಲುಗಲ್ಲು ಸಾಧಿಸಿದ್ದಾರೆ.

ಸ್ಪಾನಿಸ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಬಾರ್ಸಿಲೋನಾ ಪರ ಆಟ್ಲೆಟಿಕೊ ಮ್ಯಾಡ್ರಿಡ್ ವಿರುದ್ಧ ಗೋಲ್ ಗಳಿಸುವ ಮೂಲಕ ಮೆಸ್ಸಿ ತಮ್ಮ 700ನೇ ಗೋಲನ್ನು ಪೂರೈಸಿಕೊಂಡರು. ಆದರೆ ಪಂದ್ಯ 2-2 ಗೋಲ್ ಗಳಿಂದ ಡ್ರಾಗೊಂಡಿದ್ದು, ಬಾರ್ಸಿಲೋನಾ ತಂಡದ ಪ್ರಶಸ್ತಿ ಗೆಲುವಿನ ಕನಸಿಗೆ ಹಿನ್ನಡೆಯಾಗಿದೆ.

ಬಾರ್ಸಿಲೋನಾ ತಂಡ 11ನೇ ನಿಮಿಷದಲ್ಲಿ ಉಡುಗೊರೆ ಗೋಲಿನ ಮೂಲಕ ಖಾತೆ ತೆರೆಯಿತು. ಅಟ್ಲೆಟಿಕೊ ಸ್ಟ್ರೈಕರ್ ಡಿಗೊ ಕೋಸ್ಟಾ ತಮ್ಮದೇ ಗೋಲ್ ಪೆಟ್ಟಿಗೆಯೊಳಗೆ ಚೆಂಡು ಸೇರಿಸುವ ಮೂಲಕ ಪ್ರಮಾದ ಮಾಡಿದರು.

19ನೇ ನಿಮಿಷದಲ್ಲಿ ಈ ತಪ್ಪು ತಿದ್ದುವಂತೆ ಆಡಿದ ಸಾಲ್ ನಿಗ್ವೇಜ್ ಅವರು ಅಟ್ಲೆಟಿಕೊ ಪರ ಪೆನಾಲ್ಟಿ ಅವಕಾಶದಲ್ಲಿ ಗೋಲ್ ಬಾರಿಸಿದರು. 56ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶದಲ್ಲಿ ಮೆಸ್ಸಿ ಮೋಡಿ ಮಾಡಿದರು. ಎದುರಾಳಿ ಗೋಲ್ ಕೀಪರ್ ಅವರನ್ನು ವಂಚಿದ ಅವರು ಚೆಂಡನ್ನು ಗೋಲ್ ಪೆಟ್ಟಿಗೆಗೆ ಸೇರಿಸುವಲ್ಲಿ ತಪ್ಪು ಮಾಡಲಿಲ್ಲ. ಹೀಗಾಗಿ ಬಾರ್ಸಿಲೋನಾಗ 2-1ರ ಮುನ್ನಡೆ ಸಿಕ್ಕಿತು. ಆದರೆ ಅಟ್ಲೆಟಿಕೊ ಮತ್ತೊಂದು ಗೋಲ್ ಬಾರಿಸಿ 2-2ರಲ್ಲಿ ಸಮಬಲದ ಹೋರಾಟ ಪ್ರದರ್ಶಿಸಿ ಪಂದ್ಯ ಡ್ರಾಗೊಳ್ಳುವಂತೆ ನೋಡಿಕೊಂಡಿತು.

Stay up to date on all the latest ಕ್ರೀಡೆ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp