ಧ್ಯಾನ್ ಚಂದ್ ಪ್ರಶಸ್ತಿ ವಿಜೇತ ಫುಟ್ಬಾಲಿಗ ಎಸ್.ಎಸ್. ಹಕೀಮ್ ಗೆ ಕೊರೋನಾ ಸೋಂಕು ದೃಢ

ಮಾಜಿ ಒಲಿಂಪಿಕ್ ಫುಟ್ಬಾಲ್ ಆಟಗಾರ ಮತ್ತು ಮಾಜಿ ರಾಷ್ಟ್ರೀಯ ಫುಟ್ಬಾಲ್ ತರಬೇತುದಾರ ಸೈಯದ್ ಶಾಹಿದ್ ಹಕೀಮ್ ಅವರಿಗೆ ಕೊರೋನಾ ಸೋಂಕು ತಗುಲಿದೆ. ಇದೀಗ ಕೋವಿಡ್ ಚಿಕಿತ್ಸೆಗಾಗಿ ಮಿಲಿಟರಿ ಆಸ್ಪತ್ರೆಯಲ್ಲಿ ಹಾಸಿಗೆ ಸಿಗದ ಕಾರಣ 81 ವರ್ಷದ ಹಕೀಮ್ ಹೈದರಾಬಾದ್ ಹೋಟೆಲ್ ನಲ್ಲಿ ಕ್ವಾರಂಟೈನ್ ಆಗಿದ್ದಾರೆ. 
ಎಸ್.ಎಸ್. ಹಕೀಮ್
ಎಸ್.ಎಸ್. ಹಕೀಮ್

ಮಾಜಿ ಒಲಿಂಪಿಕ್ ಫುಟ್ಬಾಲ್ ಆಟಗಾರ ಮತ್ತು ಮಾಜಿ ರಾಷ್ಟ್ರೀಯ ಫುಟ್ಬಾಲ್ ತರಬೇತುದಾರ ಸೈಯದ್ ಶಾಹಿದ್ ಹಕೀಮ್ ಅವರಿಗೆ ಕೊರೋನಾ ಸೋಂಕು ತಗುಲಿದೆ. ಇದೀಗ ಕೋವಿಡ್ ಚಿಕಿತ್ಸೆಗಾಗಿ ಮಿಲಿಟರಿ ಆಸ್ಪತ್ರೆಯಲ್ಲಿ ಹಾಸಿಗೆ ಸಿಗದ ಕಾರಣ 81 ವರ್ಷದ ಹಕೀಮ್ ಹೈದರಾಬಾದ್ ಹೋಟೆಲ್ ನಲ್ಲಿ ಕ್ವಾರಂಟೈನ್ ಆಗಿದ್ದಾರೆ. ಅವರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಲು ಪ್ರಯತ್ನಿಸಿದ್ದರು, ಆದರೆ ಸೌಲಭ್ಯಗಳು ಸಾಕಷ್ಟು ಇಲ್ಲ ಎಂದು ನಿರಾಕರಿಸಿದ್ದಾರೆ.

 1960 ರ ರೋಮ್ ಒಲಿಂಪಿಕ್ ಫುಟ್ಬಾಲ್ ತಂಡದ ಭಾಗವಾಗಿದ್ದ ಹಕೀಮ್ ತನ್ನ ಇಡೀ ಜೀವನವನ್ನು ಕ್ರೀಡೆಗೆ ಅರ್ಪಿಸಿದರೂ, ಸರ್ಕಾರದಿಂದ ಯಾವುದೇ ಸಹಾಯ ಸಿಕ್ಕಲಿಲ್ಲ ಎಂದು ನಿರಾಶೆ ವ್ಯಕ್ತಪಡಿಸಿದ್ದಾರೆ.

"ಉಸಿರಾಟದ ಸಮಸ್ಯೆಗಳ ನಂತರ ನಾನು ಒಂದೆರಡು ದಿನಗಳ ಹಿಂದೆ ಕೋವಿಡ್ ಧನಾತ್ಮಕ ವರದಿ ಪಡೆದೆ. ಸರ್ಕಾರಿ ಆಸ್ಪತ್ರೆಗೆ ನನ್ನನ್ನು ಕರೆದೊಯ್ಯಲಾಗಿತ್ತು, ಅಲ್ಲಿ ಸೌಲಭ್ಯ ಗುರುತಿಸಲಾಗಲಿಲ್ಲ. ಮಿಲಿಟರಿ ಆಸ್ಪತ್ರೆಯಲ್ಲಿ, ಹಾಸಿಗೆ ಲಭ್ಯವಿಲ್ಲ. ನನ್ನ ಸೋದರಳಿಯ ನನ್ನನ್ನು ಹೈದರಾಬಾದ್‌ನ ಖಾಸಗಿ ಹೋಟೆಲ್‌ವೊಂದರಲ್ಲಿ ಕ್ವಾರಂಟೈನ್ ನಲ್ಲಿರಲು ಸೂಚಿಸಿದ. ನಾನು ಈಗ ಉತ್ತಮವಾಗಿದ್ದೇನೆ ”ಎಂದು ಹಕೀಮ್ ಹೇಳಿದರು.

ಹಕೀಮ್ ಇದೀಗ ನಮ್ಮ ನಡುವಿರುವ ಏಕೈಕ ಫುಟ್ಬಾಲ್ ಒಲಿಂಪಿಯನ್ ಆಗಿದ್ದು ರಾಷ್ಟ್ರೀಯ ತರಬೇತುದಾರ ಮತ್ತು ಕ್ರೀಡಾ ನಿರ್ವಾಹಕರಾಗಿ ಸಹ ಅವರು ಸೇವೆ ಸಲ್ಲಿಸಿದ್ದಾರೆ.  2017 ರಲ್ಲಿ ಕ್ರೀಡಾಕ್ಷೇತ್ರದ  ಜೀವಮಾನ ಸಾಧನೆಗಾಗಿ ಪ್ರತಿಷ್ಠಿತ ಧ್ಯಾನ್ ಚಂದ್ ಪ್ರಶಸ್ತಿಯನ್ನು ಗೆದ್ದ ಎರಡನೇ ಫುಟ್ಬಾಲ್ ಆಟಗಾರ ಹಕೀಮ್ ಆಗಿದ್ದಾರೆ. ಒಂದು ದಶಕದಿಂದ ಭಾರತದ ಕ್ರೀಡಾ ಪ್ರಾಧಿಕಾರದ (ಎಸ್‌ಎಐ) ಮುಖ್ಯ ಯೋಜನಾ ನಿರ್ದೇಶಕರಾಗಿಯೂ ಹಕೀಮ್ ಗುರುತಿಸಿಕೊಂಡಿದ್ದಾರೆ.

ಸುಮಾರು 25 ವರ್ಷಗಳ ವೃತ್ತಿಜೀವನದಲ್ಲಿ, ಹಕೀಮ್ 1970 ರಲ್ಲಿ ತೀರ್ಪುಗಾರ ವೃತ್ತಿ ಪ್ರಾರಂಭಿಸಿದ್ದರು. ಕತಾರ್‌ನಲ್ಲಿ ನಡೆದ 1988 ರ ಎಎಫ್‌ಸಿ ಏಷ್ಯನ್ ಕಪ್ ಸೇರಿದಂತೆ 1989 ರವರೆಗೆ 33 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದರು. ಹಕೀಮ್ ಭಾರತದ ಆಧುನಿಕ ಫುಟ್‌ಬಾಲ್‌ನ ಪ್ರವರ್ತಕರೆಂದು ಪರಿಗಣಿಸಲ್ಪಟ್ಟಫುಟ್‌ಬಾಲ್ ತರಬೇತುದಾರ ಸೈಯದ್ ಅಬ್ದುಲ್ ರಹೀಂ ಅವರ ಪುತ್ರ. ರಹೀಂ ನೇತೃತ್ವದಲ್ಲಿ, ದೇಶವು 1951 ಮತ್ತು 1962 ರಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕಗಳನ್ನು ಗೆದ್ದಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com