ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಸಮಿತಿಗೆ ಸೆಹ್ವಾಗ್, ಸರ್ದಾರ್

ಪ್ರಸಕ್ತ ವರ್ಷದ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ  ಆಯ್ಕೆ ಮಾಡಲು ಕ್ರೀಡಾ ಸಚಿವಾಲಯ ರಚಿಸಿರುವ  12 ಸದಸ್ಯರ ಸಮಿತಿಗೆ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮತ್ತು ಹಾಕಿ ಆಟಗಾರ ಸರ್ದಾರ್ ಸಿಂಗ್ ಅವರನ್ನು ಶುಕ್ರವಾರ ಸೇರ್ಪಡೆಗೊಳಿಸಲಾಗಿದೆ.
ವೀರೇಂದ್ರ  ಸೆಹ್ವಾಗ್
ವೀರೇಂದ್ರ ಸೆಹ್ವಾಗ್

ನವದೆಹಲಿ: ಪ್ರಸಕ್ತ ವರ್ಷದ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ  ಆಯ್ಕೆ ಮಾಡಲು ಕ್ರೀಡಾ ಸಚಿವಾಲಯ ರಚಿಸಿರುವ  12 ಸದಸ್ಯರ ಸಮಿತಿಗೆ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮತ್ತು ಹಾಕಿ ಆಟಗಾರ ಸರ್ದಾರ್ ಸಿಂಗ್ ಅವರನ್ನು ಶುಕ್ರವಾರ ಸೇರ್ಪಡೆಗೊಳಿಸಲಾಗಿದೆ.

ಕಳೆದ ವರ್ಷದಂತೆಯೇ ಈ ಬಾರಿಯೂ ಸಚಿವಾಲಯ ಕ್ರೀಡಾಪಟುಗಳ ಮತ್ತು ಕೋಚ್ ಗಳ ಆಯ್ಕೆಗೆ ಒಂದೇ ಸಮಿತಿಯನ್ನು ರಚಿಸಿದ್ದು, ಸುಪ್ರೀಂ ಕೋರ್ಟ್ ನ ನಿವೃತ್ತಿ ನ್ಯಾಯಮೂರ್ತಿ ಮಕುಂದಕಂ ಶರ್ಮ ಅವರು ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಪ್ಯಾರಾಲಿಂಪಿಕ್ಸ್ ನಲ್ಲಿ ರಜತ ಪದಕ ಗೆದ್ದಿರುವ  ದೀಪಾ ಮಲಿಕ್ ಸಹ ಸಮಿತಿಯಲ್ಲಿದ್ದಾರೆ. 

 ಈ ಬಾರಿಯೂ ಒಂದೇ ಸಮಿತಿಯ ಮೂಲಕ ಪ್ರಶಸ್ತಿಗೆ ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಸಮಿತಿಗಳು ಹೆಚ್ಚಾದರೆ,  ಗೊಂದಲ ಮತ್ತು ಸಮಸ್ಯೆಗಳು ಹೆಚ್ಚಾಗುವುದೇ ಹೊರತು ಆಯ್ಕೆ  ಪ್ರಕ್ರಿಯೆ ಸುಗಮವಾಗಿ ನಡೆಯದು ಎಂದು ಕ್ರೀಡಾ  ಸಚಿವಾಲಯ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com