1979ರ ನಂತರ ಇದು ಮೊದಲು! 2022 ಎಎಫ್‌ಸಿ ಮಹಿಳಾ ಏಷ್ಯನ್ ಕಪ್ ಗೆ ಭಾರತ ಆತಿಥ್ಯ

2022 ರ ಮಹಿಳಾ ಏಷ್ಯನ್ ಕಪ್ ಆತಿಥ್ಯ ಭಾರತಕ್ಕೆ ಸಿಕ್ಕಿದೆ. 1979ರ ನಂತರ ಇದೇ ಮೊದಲ ಬಾರಿಗೆ ಭಾರತದಲ್ಲಿ ಮಹತ್ವದ ಫುಟ್ಬಾಲ್ ಕ್ರಿಡಾಕೂಟ ನಡೆಯಲಿದೆ. 
ಎಎಫ್‌ಸಿ
ಎಎಫ್‌ಸಿ

ನವದೆಹಲಿ:  2022 ರ ಮಹಿಳಾ ಏಷ್ಯನ್ ಕಪ್ ಆತಿಥ್ಯ ಭಾರತಕ್ಕೆ ಸಿಕ್ಕಿದೆ. 1979ರ ನಂತರ ಇದೇ ಮೊದಲ ಬಾರಿಗೆ ಭಾರತದಲ್ಲಿ ಮಹತ್ವದ ಫುಟ್ಬಾಲ್ ಕ್ರಿಡಾಕೂಟ ನಡೆಯಲಿದೆ. 

ಏಷ್ಯನ್ ಫುಟ್ಬಾಲ್ ಒಕ್ಕೂಟ(ಎಎಫ್‌ಸಿ )ಮಹಿಳಾ ಫುಟ್‌ಬಾಲ್ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಫೆಬ್ರವರಿಯಲ್ಲಿ, ಎಎಫ್‌ಸಿ ಮಹಿಳಾ ಫುಟ್‌ಬಾಲ್ ಸಮಿತಿಯು ಭಾರತವನ್ನು ಆತಿಥ್ಯ ವಹಿಸಲು ಫಾರಸು ಮಾಡಿತ್ತು.

 "ಎಎಫ್‌ಸಿ ಮಹಿಳಾ ಏಷ್ಯನ್ ಕಪ್ 2022 ಫೈನಲ್‌ಗಳ ಆತಿಥೇಯ ಹಕ್ಕುಗಳನ್ನು ಸಮಿತಿಯು ಅಖಿಲ ಭಾರತ ಫುಟ್‌ಬಾಲ್ ಒಕ್ಕೂಟಕ್ಕೆ ನೀಡಿದೆ" ಅಖಿಲ ಭಾರತ ಫುಟ್ಬಾಲ್ ಒಕ್ಕೂಟಕ್ಕೆ ಬರೆದ ಪತ್ರದಲ್ಲಿ, ಎಎಫ್‌ಸಿಯ ಪ್ರಧಾನ ಕಾರ್ಯದರ್ಶಿ ಡಾಟೊ ವಿಂಡ್ಸರ್ ಜಾನ್ ಪತ್ರದ ಮೂಲಕ ಹೇಳಿದ್ದಾರೆ. ಪಂದ್ಯಾವಳಿಯು ಆ ವರ್ಷದ ದ್ವಿತೀಯಾರ್ಧದಲ್ಲಿ ನಡೆಯಲಿದೆ.

1979 ರ ಆವೃತ್ತಿಯಲ್ಲಿ ಭಾರತ ರನ್ನರ್ಸ್ ಅಪ್ ಸ್ಥಾನ ಗಳಿಸಿತ್ತು.

"2022 ರಲ್ಲಿ ಎಎಫ್‌ಸಿ ಮಹಿಳಾ ಏಷ್ಯನ್ ಕಪ್‌ಗೆ ಆತಿಥ್ಯ ವಹಿಸಲು ನಮ್ಮನ್ನು ಆಯ್ಕೆ ಂಆಡಿದ್ದಕ್ಕಾಗಿ ಏಷ್ಯನ್ ಫುಟ್‌ಬಾಲ್ ಒಕ್ಕೂಟಕ್ಕೆ ನಾವು  ಧನ್ಯವಾದ ಹೇಳಲಿದ್ದೇವೆ" ಎಂದು ಎಐಎಫ್‌ಎಫ್ ಅಧ್ಯಕ್ಷ ಪ್ರಫುಲ್ ಪಟೇಲ್ ಹೇಳಿದ್ದಾರೆ.

ಪಂದ್ಯಾವಳಿಯಲ್ಲಿ 12 ತಂಡಗಳು ಭಾಗವಹಿಸಲಿದ್ದು ಈ ಹಿಂದಿನ ಎಂಟು ತಂಡಗಳಿಂದ ಹನ್ನೆರಡಕ್ಕೆ ವಿಸ್ತರಿಸಿದೆ.ಈ ಪಂದ್ಯಾವಳಿಯು 2023 ರ ಫಿಫಾ ಮಹಿಳಾ ವಿಶ್ವಕಪ್‌ನ ಅಂತಿಮ ಅರ್ಹತಾ ಪಂದ್ಯಾವಳಿಯಾಗಿರಲಿದೆ.

ಮುಂದಿನ ವರ್ಷ ಫಿಫಾ ಅಂಡರ್ -17 ಮಹಿಳಾ ವಿಶ್ವಕಪ್‌ಗೆ ಭಾರತ ಆತಿಥ್ಯ ವಹಿಸಲಿರುವುದರಿಂದ ಈ ಪಂದ್ಯಾವಳಿ ಎಐಎಫ್‌ಎಫ್‌ಗೆ  ಹೆಚ್ಚಿನ ಉತ್ತೇಜನ ಒದಗಿಸಿದೆ. ಭಾರತವು 2016 ರಲ್ಲಿ ಎಎಫ್‌ಸಿ ಅಂಡರ್ -16 ಚಾಂಪಿಯನ್‌ಶಿಪ್ ಮತ್ತು 2017 ರಲ್ಲಿ ಫಿಫಾ ಅಂಡರ್ -17 ವಿಶ್ವಕಪ್ ಅನ್ನು ಸಹ ಆಯೋಜಿಸಿತ್ತು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com