ಮೊಣಕಾಲು ಶಸ್ತ್ರಚಿಕಿತ್ಸೆ ಹಿನ್ನೆಲೆ: 2021ರವರೆಗೆ ಟೆನ್ನಿಸ್‌ನಿಂದ ಹೊರಗುಳಿಯಲಿರುವ ಫೆಡರರ್

ಇಪ್ಪತ್ತು ಬಾರಿಯ ಗ್ರ್ಯಾಂಡ್‌ಸ್ಲಾಮ್ ಸಿಂಗಲ್ಸ್ ಚಾಂಪಿಯನ್ ರೋಜರ್ ಫೆಡರರ್ ತಾವು ಎಅರಡನೇ ಬಾರಿ ಮೊಣಕಾಲು ಚಿಕಿತ್ಸೆಗೆ ಒಳಪಟ್ಟ ಬಳಿಕ  2021ರವರೆಗೆ  ತಾವು ಟೆನ್ನಿಸ್ ಅಂಕಣದಿಂದ ಹೊರಗಿರುವುದಾಗಿ ಪ್ರಕಟಿಸಿದ್ದಾರೆ.
ರೋಜರ್ ಫೆಡರರ್
ರೋಜರ್ ಫೆಡರರ್

ಪ್ಯಾರೀಸ್: ಇಪ್ಪತ್ತು ಬಾರಿಯ ಗ್ರ್ಯಾಂಡ್‌ಸ್ಲಾಮ್ ಸಿಂಗಲ್ಸ್ ಚಾಂಪಿಯನ್ ರೋಜರ್ ಫೆಡರರ್ ತಾವು ಎಅರಡನೇ ಬಾರಿ ಮೊಣಕಾಲು ಚಿಕಿತ್ಸೆಗೆ ಒ ಳಪಟ್ಟ ಬಳಿಕ  2021ರವರೆಗೆ  ತಾವು ಟೆನ್ನಿಸ್ ಅಂಕಣದಿಂದ ಹೊರಗಿರುವುದಾಗಿ ಪ್ರಕಟಿಸಿದ್ದಾರೆ.

38 ವರ್ಷದ ಸ್ವಿಸ್ ಆಟಗಾರ ಫೆಡರರ್ ಫೆಬ್ರವರಿಯಲ್ಲಿ ಇದೇ ರೀತಿಯ ಶಸ್ತ್ರಚಿಕಿತ್ಸೆ ಹೊಂದಿದ ನಂತರ  ಫಾಲೋ-ಅಪ್ ಆರ್ತ್ರೋಸ್ಕೊಪಿಕ್ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಲುವುದಾಗಿ ಹೇಳಿದ್ದರು.

2018 ರ ಆಸ್ಟ್ರೇಲಿಯನ್ ಓಪನ್ ಪಂದ್ಯದ ಗೆಲುವು ಫೆಡರರ್ ಅವರ ಇದುವರೆಗಿನ ಕಡೆಯ ಗ್ರ್ಯಾಂಡ್ ಸ್ಲ್ಯಾಮ್ ಗೆಲುವಾಗಿದೆ. ಶ್ರೇಷ್ಠ ಕ್ರಮಾಂಕದಲ್ಲಿ ಆಡಲು  100 ಪ್ರತಿಶತ ಸಿದ್ಧವಾಗುವುದಕ್ಕೆ ನಾನು ಅಗತ್ಯ ಸಮಯ ತೆಗೆದುಕೊಳ್ಲಲಿದ್ದೇನೆ ಎಂದು ಫೆಡರರ್ ಟ್ವೀಟ್ ಮೂಲಕ ಹೇಳಿದ್ದಾರೆ.

"ನಾನು ನನ್ನ ಅಭಿಮಾನಿಗಳನ್ನು ಮತ್ತುನೆಚ್ಚಿನ ಟೂರಿನಿಂದ ದೂರವಿರುತ್ತೇನೆ. ಆದರೆ 2021ರ ನಂತರ ಮತ್ತೊಮ್ಮೆ ಅದೆನ್ನೆಲ್ಲಾ ಆನಂದಿಸಲು ಎದುರು ನೋಡುತ್ತೇನೆ."

ಆದರೆ ಈ ಮೇಲಿನ ಘೋಷಣೆ ಪುರುಷರ ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಗಳ ಸಂಖ್ಯಯಲ್ಲಿ ದಾಖಲೆ ಹೊಂದಿರುವ ಫೆಡರರ್ ನಿವೃತ್ತಿಯ ಬಗ್ಗೆ ಊಹಾಪೋಹವನ್ನು ಉಂಟುಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಫೆಡರರ್, 2003 ರಲ್ಲಿ ಅವರ ಮೊದಲ ಪ್ರಮುಖ ಟೂರ್ನಿಯಲ್ಲಿ ಭಾಗವಹಿಸಿದ್ದರು. ಇವರ ಪ್ರಬಲ ಪ್ರತಿಸ್ಪರ್ಧಿಗಳಾಫ಼  ರಾಫೆಲ್ ನಡಾಲ್ (19) ಮತ್ತು ನೊವಾಕ್ ಜೊಕೊವಿಕ್ (17) ಅವರನ್ನು ಫೆಡರರ್ ಹಿಂದಕ್ಕೆ ತಳ್ಳಿ ಮುಂದುವರಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com