ಉನ್ನತ ಶ್ರೇಣಿಯ ಟೆನ್ನಿಸ್ ಆಟಗಾರನಿಗೂ ವೈರಸ್ ಸೋಂಕು! ಗ್ರಿಗೋರ್ ಡಿಮಿಟ್ರೋವ್ ಗೆ ಕೋವಿಡ್ ಪಾಸಿಟಿವ್

ಆತಂಕಕಾರಿ ಬೆಳವಣಿಗೆಯೊಂದರಲ್ಲಿ ವಿಶ್ವ ನಂಬರ್ 19, ಬಲ್ಗೇರಿಯನ್ ಟೆನ್ನಿಸ್ ಆಟಗಾರ ಗ್ರಿಗೋರ್ ಡಿಮಿಟ್ರೋವ್ ಅವರಿಗೆ ಸಹ ಕೊರೋನಾ ಸೋಂಕು ತಗುಲಿದೆ. ತಾವು ಕೊರೋನಾ ಸೋಂಕಿಗೆ ಒಳಗಾಗಿರುವುದಾಗಿ ಡಿಮಿಟ್ರೋವ್ ಭಾನುವಾರ ಖಚಿತಪಡಿಸಿದ್ದಾರೆ.
ಗ್ರಿಗೋರ್ ಡಿಮಿಟ್ರೋವ್
ಗ್ರಿಗೋರ್ ಡಿಮಿಟ್ರೋವ್

ಆತಂಕಕಾರಿ ಬೆಳವಣಿಗೆಯೊಂದರಲ್ಲಿ ವಿಶ್ವ ನಂಬರ್ 19, ಬಲ್ಗೇರಿಯನ್ ಟೆನ್ನಿಸ್ ಆಟಗಾರ ಗ್ರಿಗೋರ್ ಡಿಮಿಟ್ರೋವ್ ಅವರಿಗೆ ಸಹ ಕೊರೋನಾ ಸೋಂಕು ತಗುಲಿದೆ. ತಾವು ಕೊರೋನಾ ಸೋಂಕಿಗೆ ಒಳಗಾಗಿರುವುದಾಗಿ ಡಿಮಿಟ್ರೋವ್ ಭಾನುವಾರ ಖಚಿತಪಡಿಸಿದ್ದಾರೆ.

ಡಿಮಿಟ್ರೋವ್ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ ನಲ್ಲಿ ಕೊರೋನಾ ಇರುವುದರ ಬಗ್ಗೆ ಖಚಿತಪಡಿಸಿದ್ದು ಅವರು  ಇತ್ತೀಚೆಗೆ ಆಡ್ರಿಯಾ ಟೂರ್ನಿಯಲ್ಲಿ ನೊವಾಕ್ ಜೊಕೊವಿಕ್, ಅಲೆಕ್ಸಾಂಡರ್ ಜ್ವೆರೆವ್ ಮತ್ತು ಡೊಮಿನಿಕ್ ಥೀಮ್ ಅವರಂತಹ ಇತರ ಆಟಗಾರರೊಂದಿಗೆ ಭಾಗವಹಿಸಿದ್ದರು.

"ಎಲ್ಲರಿಗೂ ನಮಸ್ಕಾರ-ನಾನು ಕೋವಿಡ್ -19 ಗೆ ಧನಾತ್ಮಕ ವರದಿ ಪಡೆದಿದ್ದೇನೆ. ಇದಕ್ಕಾಗಿ ಈ ವಿಚಾರವನ್ನು ನ್ನ ಅಭಿಮಾನಿಗಳು ಮತ್ತು ಸ್ನೇಹಿತರಿಗೆ ತಿಳಿಸಲು ನಾನು ಬಯಸುತ್ತೇನೆ. ಈ ಹಿಂದಿನ ದಿನಗಳಲ್ಲಿ ನನ್ನೊಂದಿಗೆ ಸಂಪರ್ಕದಲ್ಲಿದ್ದ ಯಾರಾದರೂ ಪರೀಕ್ಷೆಗೆಒಳಗಾಗಿ ವರದಿ ಖಚಿತಪಡಿಸಿಕೊಳ್ಲಲು  ನಾನು ಬಯಸುತ್ತೇನೆ. ಜತೆಗೆ ಅಗತ್ಯ ಮುನ್ನೆಚ್ಚರಿಕೆಯನ್ನು ವಹಿಸಿಕೊಳ್ಳಬೇಕಿದೆ.  ನಾನು ಈಗ ಮನೆಗೆ ಮರಳಿದ್ದೇನೆ ಮತ್ತು ಚೇತರಿಸಿಕೊಳ್ಳುತ್ತಿದ್ದೇನೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು, ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿರಿ" ಅವರು ಇನ್ಸ್ಟಾಗ್ರಾಂನಲ್ಲಿ  ಬರೆದಿದ್ದಾರೆ.

ಡಿಮಿಟ್ರೋವ್ ವೈರಸ್‌ ಸೋಂಕಿಗೆ ಒಳಗಾದ ಉನ್ನತ ಶ್ರೇಣಿಯ ಟೆನ್ನಿಸ್ ಆಟಗಾರರಲ್ಲಿ ಮೊದಲಿಗರಾಗಿದ್ದಾರೆ. ಅವರು ಜೂನ್ 21 ರಂದು ವಿಶ್ವದ ನಂ .1 ನೊವಾಕ್ ಜೊಕೊವಿಕ್ ಅವರನ್ನು ಭೇಟಿಯಾಗಬೇಕಾಗಿತ್ತು. ಆದರೆ ಕಡೇ ಕ್ಷಣದಲ್ಲಿ ಈ ಭೇಟಿ ರದ್ದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com