ಗಾಲ್ಫ್ ಆಟಗಾರನಿಗೆ ಕೊರೋನಾ ಸೋಂಕು: ಕರ್ನಾಟಕ ಗಾಲ್ಫ್ ಕ್ಲಬ್ ಬಂದ್

ಗಾಲ್ಫ್‌ ಪಟುವೊಬ್ಬರಿಗೆ ಕೋವಿಡ್ –19 ಸೋಂಕು ಇರುವುದು ಖಚಿತವಾಗಿದ್ದು ಕರ್ನಾಟಕ ಗಾಲ್ಫ್ ಸಂಸ್ಥೆಯ (ಕೆಜಿಎ) ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ
ಗಾಲ್ಫ್ ಕ್ಲಬ್
ಗಾಲ್ಫ್ ಕ್ಲಬ್

ಬೆಂಗಳೂರು: ಗಾಲ್ಫ್‌ ಪಟುವೊಬ್ಬರಿಗೆ ಕೋವಿಡ್ –19 ಸೋಂಕು ಇರುವುದು ಖಚಿತವಾಗಿದ್ದು ಕರ್ನಾಟಕ ಗಾಲ್ಫ್ ಸಂಸ್ಥೆಯ (ಕೆಜಿಎ) ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. 

ಸೋಂಕಿತ ಗಾಲ್ಪ್‌ ಆಟಗಾರ ಜೂನ್ 13ರಂದು ಕೆಜಿಎ ಕೋರ್ಸ್‌ನಲ್ಲಿ ಆಡಿದ್ದರು. ಆದ್ದರಿಂದ ಕ್ಲಬ್‌ ಪ್ರದೇಶವನ್ನು ಸಂಪೂರ್ಣವಾಗಿ ಸೋಂಕುರಹಿತವನ್ನಾಗಿ ಮಾಡುವವರೆಗೆ ಕೆಜಿಎ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. 

‘ಇಲ್ಲಿ ಆಡುವ ನಮ್ಮ ಸದಸ್ಯರೊಬ್ಬರಿಗೆ ಕೋವಿಡ್ ಸೋಂಕು ಇರುವ ಕುರಿತು ಮಂಗಳವಾರ ಮಾಹಿತಿ ಲಭಿಸಿತು. ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಅವರು ಬೇಗನೆ ಗುಣಮುಖರಾಗಲಿ ಎಂದು ಹಾರೈಸುತ್ತೇವೆ. ನಮ್ಮಲ್ಲಿ ಆರಂಭದಿಂದಲೂ ಎಲ್ಲ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಿದ್ದೇವೆ. ಸರ್ಕಾರದ ನಿಯಮಗಳಂತೆ ಎಲ್ಲವನ್ನೂ ಪಾಲಿಸಿದ್ದೇವೆ’ ಎಂದು ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸರ್ಕಾರದ ಎಲ್ಲ ನಿರ್ದೇಶನಗಳನ್ನೂ ನಾವು ಪಾಲಿಸುತ್ತಿದ್ದೇವೆ. ಸ್ಯಾನಿಟೈಸಿಂಗ್ ಕೆಲಸ ಆರಂಭವಾಗಿದೆ. ಇನ್ನು ಕೆಲವು ದಿನಗಳಲ್ಲಿ ಮುಗಿಯುತ್ತದೆ. ಎಲ್ಲ ಆಟಗಾರರ ದಾಖಲೆಗಳನ್ನು ನಿರ್ವಹಣೆ ಮಾಡಿದ್ದೇವೆ. ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಎಲ್ಲ ರೀತಿಯಿಂದ ಸಹಕರಿಸುತ್ತೇವೆ’ ಎಂದು ಹೇಳಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com