ಸಂಜಿತಾ ಚಾನು
ಸಂಜಿತಾ ಚಾನು

ಡೋಪಿಂಗ್ ಪ್ರಕರಣದಲ್ಲಿ ಆರೋಪಮುಕ್ತ ಹಿನ್ನೆಲೆ: 2018ರ ಅರ್ಜುನ ಪ್ರಶಸ್ತಿ ಪಡೆಯಲಿರುವ ಸಂಜಿತಾ ಚಾನು

ಉದ್ದೀಪನ ಮದ್ದು ಸೇವನೆ ಕಳಂಕದಿಂದ ಮುಕ್ತವಾದ ಎರಡು ಬಾರಿಯ ಕಾಮನ್ವೆಲ್ತ್ ಗೋಲ್ಡ್ ಮೆಡಲಿಸ್ಟ್  ಸಂಜಿತಾ ಚಾನು ಅಂತಿಮವಾಗಿ 2018ರಿಂದ ತಡೆಹಿಡಿಯಲ್ಪಟ್ಟಿದ್ದ ಅರ್ಜುನ ಪ್ರಶಸ್ತಿಯನ್ನು ಪಡೆದುಕೊಳ್ಳಲಿದ್ದಾರೆ. 

ನವದೆಹಲಿ: ಉದ್ದೀಪನ ಮದ್ದು ಸೇವನೆ ಕಳಂಕದಿಂದ ಮುಕ್ತವಾದ ಎರಡು ಬಾರಿಯ ಕಾಮನ್ವೆಲ್ತ್ ಗೋಲ್ಡ್ ಮೆಡಲಿಸ್ಟ್  ಸಂಜಿತಾ ಚಾನು ಅಂತಿಮವಾಗಿ 2018ರಿಂದ ತಡೆಹಿಡಿಯಲ್ಪಟ್ಟಿದ್ದ ಅರ್ಜುನ ಪ್ರಶಸ್ತಿಯನ್ನು ಪಡೆದುಕೊಳ್ಳಲಿದ್ದಾರೆ. 2018ರಲ್ಲಿ ಚಾನು ಅವರಿಗೆ ಅರ್ಜುನ ಪ್ರಶಸ್ತಿ ನೀಡುವುದಾಗಿ  ಕ್ರೀಡಾ ಸಚಿವಾಲಯದ ಮೂಲವೊಂದು ದೃಢಪಡಿಸಿತ್ತು. ಆದರೆ ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಸಿಕ್ಕ ಪರಿಣಾಮ ಆಕೆಗೆ ಪ್ರಶಸ್ತಿ ನೀಡಬಾರದೆಂದು ದೆಹಲಿ ಹೈಕೋರ್ಟ್ ಆದೇಶಿಸಿದ್ದು ಪ್ರಶಸ್ತಿ ಪ್ರಧಾನ ತಡೆಹಿಡಿಯಲಾಗಿತ್ತು.

"ಸಂಜಿತಾ ಚಾನು ಅಂತಾರಾಷ್ಟ್ರೀಯ ಒಕ್ಕೂಟದ ಎಲ್ಲಾ ಡೋಪಿಂಗ್ ಆರೋಪಗಳಿಂದ ಮುಕ್ತರಾಗಿದ್ದಾರೆ, ಆದ್ದರಿಂದ ನಾವು ದೆಹಲಿ ಹೈಕೋರ್ಟ್ ಆದೇಶಕ್ಕೆ ಬದ್ಧರಾಗಿ ಅರ್ಜುನ ಪ್ರಶಸ್ತಿಗೆ ಪರಿಗಣಿಸುತ್ತೇವೆ"ಎಂದು ಸಚಿವಾಲಯದ ಮೂಲ ಪಿಟಿಐಗೆ ತಿಳಿಸಿದೆ. 2017 ರ ಅರ್ಜುನ ಪ್ರಶಸ್ತಿಗಾಗಿ ಅವರನ್ನು ಕಡೆಗಣಿಸಿದ ನಂತರ, ಚಾನು ದೆಹಲಿ ಹೈಕೋರ್ಟ್ ಮುಂದೆ ರಿಟ್ ಅರ್ಜಿ ಸಲ್ಲಿಸಿದ್ದರು. ಅವರನ್ನು ಪ್ರಶಸ್ತಿಗೆ  ಶಿಫಾರಸು ಮಾಡಿದವರ ಪಟ್ಟಿಯಿಂದ ಹೊರಗಿಡುವ ನಿರ್ಧಾರವನ್ನು ಚಾನು ಪ್ರಶ್ನಿಸಿದ್ದರು.

ಇದೀಗ ಹದಿನೈದು ದಿನಗಳ ಹಿಂದಷ್ಟೇ ಸಂಜಿತಾ ಚಾನು ಅವರ ಮೇಲಿದ್ದ ಉದ್ದೀಪನ ಮದ್ದು ಸೇವನೆ ಪ್ರಕರಣವನ್ನು ಅಂತಾರಾಷ್ಟ್ರೀಯ ವೇಟ್‌ಲಿಫ್ಟಿಂಗ್‌ ಫೆಡರೇಷನ್‌ (ಐಡಬ್ಲ್ಯುಎಫ್‌) ಕೈಬಿಟ್ಟಿದ್ದು, ಸಂಜಿತಾ ಚಾನು ಅವರ ಮೇಲಿನ ಆರೋಪ ‘ದೃಢೀಕೃತವಲ್ಲ’ ಎಂದು ಹೇಳಿತ್ತು.ವಿಶ್ವ ಉದ್ದೀಪನ ಮದ್ದು ಸೇವನೆ ತಡೆ ಘಟಕದ (ವಾಡಾ) ಶಿಫಾರಸಿನ ಆಧಾರದ ಮೇಲೆ ಐಡಬ್ಲ್ಯುಎಫ್‌ ಈ ನಿರ್ಧಾರಕ್ಕೆ ಬಂದಿತ್ತು.

Related Stories

No stories found.

Advertisement

X
Kannada Prabha
www.kannadaprabha.com