19ನೇ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ ನಡೆಸಲು ಅರಮನೆ ನಗರಿ ಮೈಸೂರು ಸಜ್ಜು

ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ 19 ನೇ ಆವೃತ್ತಿಯನ್ನು ಮಾರ್ಚ್ 26 ರಿಂದ 28 ರವರೆಗೆ ಮೈಸೂರಿನ ಚಾಮುಂಡಿ ವಿಹಾರ್ ಕ್ರೀಡಾಂಗಣದಲ್ಲಿ ನಡೆಸಲು ನಿರ್ಧರಿಸಲಾಗಿದೆ.  
19ನೇ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ ನಡೆಸಲು ಅರಮನೆ ನಗರಿ ಮೈಸೂರು ಸಜ್ಜು

ಬೆಂಗಳೂರು: ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ 19 ನೇ ಆವೃತ್ತಿಯನ್ನು ಮಾರ್ಚ್ 26 ರಿಂದ 28 ರವರೆಗೆ ಮೈಸೂರಿನ ಚಾಮುಂಡಿ ವಿಹಾರ್ ಕ್ರೀಡಾಂಗಣದಲ್ಲಿ ನಡೆಸಲು ನಿರ್ಧರಿಸಲಾಗಿದೆ. 

ಟೋಕಿಯೊ ಪ್ಯಾರಾಲಿಂಪಿಕ್ಸ್ ಅರ್ಹತಾ ಪಂದ್ಯವಿದಾಗಿದ್ದು ಸ್ಪರ್ಧೆಯು 1,600 ಕ್ರೀಡಾಪಟುಗಳಿಗೆಹೆಚ್ಚಿನ ಉತ್ಸಾಹ ನೀಡಲಿದೆ. ವಿವಿಧ ವಿಭಾಗಗಳಲ್ಲಿ ದೇಶದ  ನಾನಾ ಭಾಗಗಳಿಂದ ಕ್ರೀಡಾಪಟುಗಳು ಭಾಗವಹಿಸುತ್ತಿದ್ದು ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಇಂತಹಾ ಅಭೂತಪೂರ್ವ ಟೂರ್ನಿ ನಡೆಯುತ್ತಿದೆ. ಟಿ ಮರಿಯಪ್ಪನ್, ವರುಣ್ ಸಿಂಗ್ ಭತಿ ಮತ್ತು ಜಾವೆಲಿನ್ ಎಸೆತಗಾರ  ಸುಂದರ್ ಸಿಂಗ್ ಗುರ್ಜಾರ್ ಸೇರಿದಂತೆ ಹೈಜಂಪರ್‌ಗಳು ಈ ಸ್ಪರ್ಧೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮೂರು ದಿನಗಳ ಈ ಕ್ರೀಡಾಕೂಟದಲ್ಲಿ  ಕ್ರೀಡಾಪಟುಗಳೊಂದಿಗೆ ತಮ್ಮ ರಾಜ್ಯದ ಅರ್ಹತಾ ಮಾನದಂಡಗಳನ್ನು ಪೂರೈಸುವ ಅಗತ್ಯವಿದೆ. ಇದಕ್ಕಾಗಿ ಕೆಲ ರಾಜ್ಯದ ಪ್ರತಿನಿಧಿಗಳು ಇದಾಗಲೇ ಮೈಸೂರಿಗೆ ಭೇಟಿ ಕೊಟ್ಟಿದ್ದಾರೆ. ಅರ್ಹಡಾಪಟುಗಳಿಗೆ ನೋಂದಣಿಗೆ ಕೊನೆಯ ದಿನಾಂಕ ಮಾರ್ಚ್ 15.ಆಗಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಕ್ರೀಡಾ ಸಚಿವಾಲಯದಿಂದ ಗುರುತಿಸಲ್ಪಟ್ಟಬಳಿಕ ಹೊಸದಾಗಿ ಚುನಾಯಿತರಾದ ಪ್ಯಾರಾಲಿಂಪಿಕ್ ಸಮಿತಿ (ಭಾರತದ ಪಿಸಿಐ) ಸಂಸ್ಥೆ ಆಯೋಜಿಸಿರುವ ಮೊದಲ ಕೂಟ ಇದಾಗಲಿದೆ. 

ರಿಯೊ 2016 ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ದೀಪಾ ಮಲಿಕ್ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಅವರು ಪ್ಯಾರಾಲಿಂಪಿಕ್ ಕ್ರೀಡೆಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಲು ಸಿದ್ದವಾಗಿದ್ದಾರೆ.ಅಕ್ಟೋಬರ್‌ನಲ್ಲಿ ಜೂನಿಯರ್ ಪ್ಯಾರಾ ಚಾಂಪಿಯನ್‌ಶಿಪ್‌ಗಳನ್ನು ಆಯೋಜಿಸುವ ತನ್ನ ಯೋಜನೆಗಳ ಬಗ್ಗೆಯೂ ಅವರು ವಿವರಿಸಿದ್ದಾರೆ

ಈ ನಡುವೆ ತಮ್ಮ ಅಮಾನತು ಆದೇಶವನ್ನು  ಬೇಗನೆ ರದ್ದುಪಡಿಸಲಾಗುವುದು ಎಂದು ಪಿಸಿಐ ಪ್ರಧಾನ ಕಾರ್ಯದರ್ಶಿ ಗುರ್ಷರನ್ ಸಿಂಗ್ ಆಶಿಸಿದ್ದಾರೆ. “ನಮ್ಮ ಸಮಿತಿ ದೆಹಲಿ ಹೈಕೋರ್ಟ್ ಆದೇಶದೊಂದಿಗೆ ಅಸ್ತಿತ್ವಕ್ಕೆ ಬಂದಿದೆ. ನಾವು ನಮ್ಮದಾಖಲೆಗಳನ್ನು ತರರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿ ಮತ್ತು ಸಂಘಗಳ ರಿಜಿಸ್ಟ್ರಾರ್‌ಗೆ ಸಲ್ಲಿಸಿದ್ದೇವೆ. ” "ಸೊಸೈಟಿಗಳ ರಿಜಿಸ್ಟ್ರಾರ್ಮಾದರಿಗಳನ್ನು ಪೂರ್ಣಗೊಳಿಸಲು ನಾವು ಕಾಯುತ್ತಿದ್ದೇವೆ, ನಂತರ ನಾವು ಅದನ್ನು ಸಚಿವಾಲಯಕ್ಕೆ ಸಲ್ಲಿಸುತ್ತೇವೆ ಮತ್ತು ಎರಡು ಮೂರು ವಾರಗಳಲ್ಲಿ ಸರ್ಕಾರವು ನನ್ನ ಅಮಾನತು ರದ್ದುಪಡಿಸುತ್ತದೆ ಎಂದು ಭಾವಿಸುತ್ತೇವೆ" ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com