ಕೊರೊನಾ ವೈರಸ್: ಸುಲ್ತಾನ್ ಅಜ್ಲಾನ್ ಶಾ ಹಾಕಿ ಟೂರ್ನಿ ಮುಂದೂಡಿಕೆ

ಕೊರೊನಾ ವೈರಸ್ ಎಲ್ಲಡೆ ಭೀತಿ ಸೃಷ್ಟಿಸಿದ್ದು, ಇದರ ಪರಿಣಾಮ ಕ್ರೀಡಾ ಕ್ಷೇತ್ರದ ಮೇಲೂ ಬಿದ್ದಿದೆ. ಮಹಾಮಾರಿಯ ಪರಿಣಾಮ ನಿಗದಿತ ಸಮಯಕ್ಕೆ ನಡೆಯಬೇಕಿದ್ದ ಸುಲ್ತಾನ್ ಅಜ್ಲಾನ್ ಶಾ ಹಾಕಿ ಟೂರ್ನಿ ಮುಂದೂಡಲ್ಪಟ್ಟಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೊರೊನಾ ವೈರಸ್ ಎಲ್ಲಡೆ ಭೀತಿ ಸೃಷ್ಟಿಸಿದ್ದು, ಇದರ ಪರಿಣಾಮ ಕ್ರೀಡಾ ಕ್ಷೇತ್ರದ ಮೇಲೂ ಬಿದ್ದಿದೆ. ಮಹಾಮಾರಿಯ ಪರಿಣಾಮ ನಿಗದಿತ ಸಮಯಕ್ಕೆ ನಡೆಯಬೇಕಿದ್ದ ಸುಲ್ತಾನ್ ಅಜ್ಲಾನ್ ಶಾ ಹಾಕಿ ಟೂರ್ನಿ ಮುಂದೂಡಲ್ಪಟ್ಟಿದೆ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಏಪ್ರಿಲ್ 11 ರಿಂದ 18 ರವರೆಗೆ ಮಲೇಷ್ಯಾದ ಇಪೋದಲ್ಲಿ ಈ ಟೂರ್ನಿ ನಡೆಯಬೇಕಿತ್ತು. ಆದರೆ, ಟೂರ್ನಿಯನ್ನು ಸೆಪ್ಟೆಂಬರ್ ಗೆ ಮುಂದೂಡಲಾಗಿದೆ. ಸುಲ್ತಾನ್ ಅಜ್ಲಾನ್ ಶಾ ಟೂರ್ನಿ ಸೆ.24 ರಿಂದ ಅಕ್ಟೋಬರ್ 3 ರವರೆಗೆ ನಡೆಯಲಿದೆ ಎಂದು ಆಯೋಜಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಒಲಿಂಪಿಕ್ಸ್ ಕ್ರೀಡಾಕೂಟವನ್ನು ಗಮನದಲ್ಲಿಟ್ಟುಕೊಂಡ ಭಾರತ ಹಾಕಿ ತಂಡ  ಈ ಕ್ರೀಡಾಕೂಟದಲ್ಲಿ ಭಾಗದೇ ವಹಿಸಿದರಲು ನಿಶ್ಚಯಿಸಿದೆ ಎಂದು ಆಯೋಜಕರು ಸ್ಪಷ್ಟ ಪಡಿಸಿದ್ದಾರೆ. ಆರು ತಂಡಗಳು ಪ್ರಶಸ್ತಿಗಾಗಿ ಈ ಬಾರಿ ಕಾದಾಟ ನಡೆಸಲಿವೆ.

'29ನೇ ಆವೃತ್ತಿಯ ಸುಲ್ತಾನ್ ಅಝ್ಲಾನ್‌ ಷಾ ಕಪ್ ಪುರುಷರ ಹಾಕಿ ಟೂರ್ನಮೆಂಟ್ 2020 ಮುಂದೂಡಲ್ಪಟ್ಟಿದೆ,' ಎಂದು ಆಯೋಜನಾ ಸಮಿತಿಯ ಅಧ್ಯಕ್ಷ ಹಾಜಿ ಅಬ್ದುಲ್ ರಹೀಮ್,' ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೊವಿಡ್-19 ಎಂದು ಹೆಸರಿನಲಾಗಿರುವ ಮಾರಕ ವೈರಸ್ ಸೋಂಕು ಕೊರಿಯಾ, ಜಪಾನ್‌ಗೂ ಹಬ್ಬುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com