ಕೊರೋನಾ ಭೀತಿ: ಒಲಂಪಿಕ್ಸ್ ಮುಂದೂಡಿಕೆ ಸೂಚನೆ ನೀಡಿದ ಜಪಾನ್

 ಜಾಗತಿಕವಾಗಿ ಹಬ್ಬಿರುವ ಕೊರೋನಾ ಮಹಾಮಾರಿ ಕ್ರೀಡಾಪ್ರೇಮಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿರುವ ಕ್ರೀಡಾಹಬ್ಬ ಒಲಂಪಿಕ್ಸ್ ಕ್ರೀಡಾಕೂಟಕ್ಕೂ ಆತಂಕ ತಂದೊಡ್ಡಿದೆ. ಒಂದೊಮ್ಮೆಇದೇ ರೀತಿ ಕೊರೋನಾ ಅಟ್ಟಹಾಸ ಮುಂದುವರಿದಿದ್ದೇ ಅದಲ್ಲಿ ನಿಗದಿತ ದಿನಾಂಕಕ್ಕಿಂತ ಕ್ರೀಡಾಕೂಟ ಮುಂದೂಡಿಕೆಯಾಗುವ ಸಾಧ್ಯತೆ ಇದೆ. ಈ ಕುರಿತು ಸ್ವತ: ಜಪಾನ್‌ನ ಒಲಿಂಪಿಕ್ ಸಚಿವರು ಹೇಳಿಕೆ
ಕೊರೋನಾ ಭೀತಿ: ಒಲಂಪಿಕ್ಸ್ ಮುಂದೂಡಿಕೆ ಸೂಚನೆ ನೀಡಿದ ಜಪಾನ್

ಜಾಗತಿಕವಾಗಿ ಹಬ್ಬಿರುವ ಕೊರೋನಾ ಮಹಾಮಾರಿ  ಕ್ರೀಡಾಪ್ರೇಮಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿರುವ ಕ್ರೀಡಾಹಬ್ಬ ಒಲಂಪಿಕ್ಸ್ ಕ್ರೀಡಾಕೂಟಕ್ಕೂ ಆತಂಕ ತಂದೊಡ್ಡಿದೆ. ಒಂದೊಮ್ಮೆಇದೇ ರೀತಿ ಕೊರೋನಾ ಅಟ್ಟಹಾಸ ಮುಂದುವರಿದಿದ್ದೇ ಅದಲ್ಲಿ ನಿಗದಿತ ದಿನಾಂಕಕ್ಕಿಂತ ಕ್ರೀಡಾಕೂಟ ಮುಂದೂಡಿಕೆಯಾಗುವ ಸಾಧ್ಯತೆ ಇದೆ. ಈ ಕುರಿತು ಸ್ವತ: ಜಪಾನ್‌ನ ಒಲಿಂಪಿಕ್ ಸಚಿವರು ಹೇಳಿಕೆ ನೀಡಿದ್ದಾರೆ.

ಒಪ್ಪಂದದ ಪ್ರಕಾರ ಮುಂಬರುವ ಮುಂಬರುವ ಒಲಂಪಿಕ್ಸ್ ಕ್ರೀಡಾಕೂಟವನ್ನು  2020 ರಲ್ಲಿ ಯಾವಾಗ ಬೇಕಾದರೂ ನಡೆಸಬಹುದು ಕ್ರೀಡಾಕೂಟದ ಅಧಿಕೃತ ಪ್ರಾರಂಭ ದಿನಾಂಕ ಜುಲೈ 24 ಆಗಿದ್ದರೂ ಸಹ ಕೊರೋನಾವೈರಸ್ (ಕೋವಿಡ್ 19) ಹಾವಳಿ ಹೆಚ್ಚಾದರೆ  ಸಂಘಟಕರು ಅದನ್ನು ವರ್ಷದ ಅಂತ್ಯದವರೆಗೆ ಮುಂದೂಡಬಹುದು ಎಂದು ಸಚಿವರಾದ ಸೀಕೋ ಹಶಿಮೊಟೊ ಜಪಾನ್ ಮೇಲ್ಮನೆಯಲ್ಲಿ ಹೇಳಿದ್ದಾರೆ.

"ಒಪ್ಪಂದದಂತೆ 2020ರಲ್ಲಿ ಕ್ರೀಡಾಕೂಟ ನಡೆಯದಿದ್ದಲ್ಲಿ , ಆರ್ಟಿಕಲ್ 66 ರಲ್ಲಿ ಐಒಸಿ ಒಪ್ಪಂದವನ್ನು ನಿಷ್ಕ್ರಿಯಗೊಳಿಸುವ ಮೂಲಕ ಆಟಗಳನ್ನು ರದ್ದುಗೊಳಿಸುವ ಹಕ್ಕನ್ನು ಹೊಂದಿದೆ.  ಆದರೆ ಈ ಕ್ಯಾಲೆಂಡರ್ ವರ್ಷದ ಯಾವುದೇ ಮಾಸದಲ್ಲಿ ಕ್ರೀಡಾಕೂಟ ನಡೆಸಲು ಯಾವ ನಿರ್ಬಂಧವಿಲ್ಲ. ಹಾಗಾಗಿ ನಿಗದಿಯಂತೆ ಜುಲೈ ಮಾಹೆಯಲ್ಲಿನ ಕ್ರೀಡಾಕೂಟವನ್ನು ಮುಂದುಡಲು ಯಾವ ನಿರ್ಬಂಧಗಳಿಲ್ಲ ಎಂದು ಅರ್ಥಿಸುವ ಸಲುವಾಗಿ ಈ ಸಾಲನ್ನು ವ್ಯಾಖ್ಯಾನಿಸಬಹುದು" ಸಚಿವರು ಹೇಳಿದ್ದಾರೆ.

ಇದಾಗಲೇ ಕೊರೋನಾವೈರಸ್ ಜಪಾನ್ ನಲ್ಲಿ ಸಾಕಷ್ಟು ಅನಾಹುತಕ್ಕೆ ಕಾರಣವಾಗಿದೆ. ಆದರೆ ಟೋಕಿಯೋ ಕ್ರೀಡಾಕೂಟಕ್ಕೆ ಇದರಿಂದ ಯಾವ ಅಡ್ಡಿಯಾಗುವುದುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಕ್ರೀಡಾಕೂಟಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸಂಘಟಕರು ಯಾವುದೇ ಉಪಕ್ರಮ ತೆಗೆದುಕೊಳ್ಳಲು ಸಿದ್ದ ಎಂದು ಹಶಿಮೊಟೊ ವಿವರಿಸಿದ್ದಾರೆ.

ಏತನ್ಮಧ್ಯೆ, ಐಒಸಿ ಅಧ್ಯಕ್ಷ ಥಾಮಸ್ ಬಾಚ್, ಲೌಸನ್ನಲ್ಲಿ ಎರಡು ದಿನಗಳ ಇಬಿ ಸಭೆಯ ಪ್ರಾರಂಭದ ಸಂದರ್ಭದಲ್ಲಿ ಜಾಗತಿಕ ಸಂಸ್ಥೆಯು  "ಯಶಸ್ವಿ ಒಲಿಂಪಿಕ್ ಕ್ರೀಡಾಕೂಟಕ್ಕೆ ತಯಾರಿ ನಡೆಸುತ್ತಿದೆ" ಎಂದು ಹೇಳಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com