ನಕಲಿ ಪಾಸ್‌ಪೋರ್ಟ್ ಬಳಕೆ ಆರೋಪ: ಪೆರಗ್ವೆಯಲ್ಲಿ ಖ್ಯಾತ ಫುಟ್ಬಾಲ್ ತಾರೆ ರೊನಾಲ್ಡಿನೋ ಅರೆಸ್ಟ್

ನಕಲಿ ಪಾಸ್‌ಪೋರ್ಟ್‌ನೊಂದಿಗೆ ಪೆರಗ್ವೆಗೆ ಪ್ರವೇಶಿಸಿದ್ದ ಆರೋಪದ ಮೇಲೆ ಬ್ರಿಜಿಲ್ ನ ಫುಟ್‌ಬಾಲ್ ದಿಗ್ಗಜ ರೊನಾಲ್ಡಿನೊ ವನ್ನು ಬಂಧಿಸಲಾಗಿದೆ.
ರೊನಾಲ್ಡಿನೋ
ರೊನಾಲ್ಡಿನೋ

ನಕಲಿ ಪಾಸ್‌ಪೋರ್ಟ್‌ನೊಂದಿಗೆ ಪೆರಗ್ವೆಗೆ ಪ್ರವೇಶಿಸಿದ್ದ ಆರೋಪದ ಮೇಲೆ ಬ್ರಿಜಿಲ್ ನ ಫುಟ್‌ಬಾಲ್ ದಿಗ್ಗಜ ರೊನಾಲ್ಡಿನೊ ವನ್ನು ಬಂಧಿಸಲಾಗಿದೆ.

ರೊನಾಲ್ಡಿನೋ ಃಆಗೂ ಆತನ ಸೋದರ  ರಾಬರ್ಟೊ ಡಿ ಅಸಿಸ್ ಅವರನ್ನು ಅಸುನ್ಸಿಯಾನ್‌ನ ಐಷಾರಾಮಿ ಹೋಟೆಲ್‌ವೊಂದರಲ್ಲಿದ್ದಾಗ ಬಂಧಿಸಲಾಗಿದೆ ಎಂದು ಕ್ಸಿನ್ಹುವಾ ನ್ಯೂ ಏಜನ್ಸಿ ವರದಿ ಮಾಡಿದೆ.

ಇನ್ನು ರೊನಾಲ್ಡಿನೊ ಪರ ವಕೀಲರಾದ ಅಡಾಲ್ಫೊ ಮರಿನ್, ರೊನಾಲ್ಡಿನೊ ಮತ್ತು ಅಸಿಸ್ ಇಂತಹಾ ಕೃತ್ಯ ಎಸಗಲು ಯಾವ ಕಾರಣಗಳಿಲ್ಲ ಎಂದು ವಾದಿಸಿದ್ದಾರೆ."ವಾಸ್ತವವಾಗಿ ಅವರನ್ನು ಬಲಿಪಶುವನ್ನಾಗಿಸಲಾಗಿದೆ.ಅವರು ಅಂತಹಾ ಕೃತ್ಯ ಎಸಗುವ ಕಾರಣವಿಲ್ಲ. ಅವರು ತಮ್ಮ ಬ್ರೆಜಿಲಿಯನ್ ಪಾಸ್ಪೋರ್ಟ್ ಗಳೊಡನೆ ಗೆ ಪ್ರವೇಶಿಸಬಹುದಿತ್ತು" ಎಂದು ಮರಿನ್ ಪೆರಗ್ವೆ ರೇಡಿಯೊ 730 ಎಎಂ ಗೆ ಹೇಳಿದ್ದಾರೆ.

"ರೊನಾಲ್ಡಿನೋಗೆ ಇದುವರೆಗೆ ಏನಾಗಿದೆ ಅರ್ಥವಾಗುತ್ತಿಲ್ಲ, ಈ ಘಟನೆಯಿಂದ ಅವರು ಆಘಾತಗೊಂಡಿದ್ದಾರೆ"

ಮಕ್ಕಳ ಫುಟ್ಬಾಲ್ತರಗತಿಯಲ್ಲಿ ಪಾಲ್ಗೊಳ್ಳಲು ಹಾಗೂ  ರೊನಾಲ್ಡಿನೊ ಅವರ ವೃತ್ತಿಜೀವನದ ಬಗ್ಗೆ ಹೊಸ ಪುಸ್ತಕದ  ಪ್ರಚಾರ ಮಾಡಲು ಈ ಜೋಡಿ ಬುಧವಾರ ಬೆಳಿಗ್ಗೆ ಪೆರುಗ್ವೆಗೆ ಆಗಮಿಸಿತ್ತು.

ಇನ್ನು ಈ ಕುರಿತು ಮಾತನಾಡಿರುವ ಪೆರಗ್ವೆ ಆಂತರಿಕ ಸಚಿವ ಎಸ್ವೆಡೊ "ರೊನಾಲ್ಡಿನೊ ಓರ್ವ ಶ್ರೇಷ್ಠ ಕ್ರೀಡಾಪಟು ಎನ್ನುವುದು ಸತ್ಯ. ನಾವವರನ್ನು ಗೌರವಿಸುತ್ತೇವೆ. ಆದರೆ ನಕಲಿ ಪಾಸ್ ಪೋರ್ಟ್ ಹೊಂದುವುದು ಕ್ರಿಮಿನಲ್ ಅಪರಾಧವಾಗುತ್ತದೆ" ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com