ಒಲಿಂಪಿಕ್ ಬಾಕ್ಸಿಂಗ್ ಅರ್ಹತಾ ಪಂದ್ಯ: ಫೈನಲ್ಸ್ ತಲುಪಿದ ವಿಕಾಸ್ ಕ್ರಿಶನ್, ಮೇರಿ ಕೋಮ್, ಅಮಿತ್ ಗೆ ಕಂಚಿನ ಪದಕ

ವಿಕಾಸ್ ಕ್ರಿಶನ್ (69 ಕೆಜಿ)  ಗೆಲುವಿನೊಂದಿಗೆ  ಏಷ್ಯನ್ ಒಲಿಂಪಿಕ್ ಕ್ವಾಲಿಫೈಯರ್‌ನಲ್ಲಿ  ಫೈನಲ್‌ಗೆ ಮುನ್ನಡೆದರೆ ಪ್ರಸಿದ್ದ ಮಹಿಳಾ ಬಾಕ್ಸಿಂಗ್ ತಾರೆ ಮೇರಿ ಕೋಮ್  (51 ಕೆಜಿ) ಮತ್ತು ವಿಶ್ವದ ನಂಬರ್ ಒನ್ ಅಮಿತ್ ಪಂಗಾಲ್ (52 ಕೆಜಿ) ಕಂಚಿನ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ.
ವಿಕಾಸ್ ಕ್ರಿಶನ್
ವಿಕಾಸ್ ಕ್ರಿಶನ್

ಅಮ್ಮನ್(ಜೋರ್ಡಾನ್): ವಿಕಾಸ್ ಕ್ರಿಶನ್ (69 ಕೆಜಿ)  ಗೆಲುವಿನೊಂದಿಗೆ  ಏಷ್ಯನ್ ಒಲಿಂಪಿಕ್ ಕ್ವಾಲಿಫೈಯರ್‌ನಲ್ಲಿ  ಫೈನಲ್‌ಗೆ ಮುನ್ನಡೆದರೆ ಪ್ರಸಿದ್ದ ಮಹಿಳಾ ಬಾಕ್ಸಿಂಗ್ ತಾರೆ ಮೇರಿ ಕೋಮ್  (51 ಕೆಜಿ) ಮತ್ತು ವಿಶ್ವದ ನಂಬರ್ ಒನ್ ಅಮಿತ್ ಪಂಗಾಲ್ (52 ಕೆಜಿ) ಕಂಚಿನ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ.

ಇದಾಗಲೇ ನಾಲ್ವರು ಭಾರತೀಯ ಬಾಕ್ಸರ್ ಗಳು ಕಂಚಿನ ಪದಕಗಳೊಡನೆ ಒಲಂಪಿಕ್ಸ್ ಗೆ ಅರ್ಹತೆ ಪಡೆದಿದ್ದರು ಆದರೆ ವಿಕಾಸ್ ಫೈನಲ್ಸ್ ಪ್ರವೇಶಿಸುವುದರೊಡನೆ ಕನಿಷ್ಟ ಬೆಳ್ಳಿಯ ಪದಕ ಗಳಿಸುವ ಭರವಸೆಯನ್ನು ಖಚಿತಪಡಿಸಿದ್ದಾರೆ.

ಏಷ್ಯಾದ ಚಿನ್ನದ ಪದಕ ವಿಜೇತ ಮತ್ತು ಅಗ್ರ ಶ್ರೇಯಾಂಕಿತ ಆಟಗಾರ ಬೊಬೊ-ಉಸ್ಮಾನ್ ಬಟುರೊವ್ ಅವರನ್ನು ಕ್ರಿಶನ್ ಫೈನಲ್ಸ್ ನಲ್ಲಿ ಎದುರಿಸಬೇಕಿದೆ/

ಇನ್ನೊಂದೆಡೆ ಆರು ಬಾರಿ ವಿಶ್ವ ಚಾಂಪಿಯನ್ ಮತ್ತು ಮೇರಿ ಕೋಮ್ ಚೀನಾದ ಮಾಜಿ ಯುವ ಒಲಿಂಪಿಕ್ಸ್ ಚಾಂಪಿಯನ್ ಚಾಂಗ್ ಯುವಾನ್ ವಿರುದ್ಧ 1-4ರ ಅಂತರದ ಪರಾಭವ ಅನುಭವಿಸಿದ್ದಾರೆ.

ವಿಶ್ವ ಬೆಳ್ಳಿ ಪದಕ ವಿಜೇತ ಮತ್ತು ಅಗ್ರ ಶ್ರೇಯಾಂಕಿತ ಪಂಗಾಲ್  ಚೀನಾದ ಜಿಯಾಂಗ್ವಾನ್ ಹು ಅವರಿಗೆ  3-2ರ ಅಂತರದಲ್ಲಿ ಮಣಿದರು.

ಸೋತ ನಾಲ್ಕು ಸೆಮಿಫೈನಲಿಸ್ಟ್‌ಗಳನ್ನು ಹೊರತುಪಡಿಸಿ ಎಂಟು ಭಾರತೀಯ ಬಾಕ್ಸರ್‌ಗಳಾದ ಆಶಿಶ್ ಕುಮಾರ್ (75 ಕೆಜಿ), ಸತೀಶ್ ಕುಮಾರ್ (+ 91 ಕೆಜಿ), ಪೂಜಾ ರಾಣಿ (75 ಕೆಜಿ) ಮತ್ತು ಸಿಮ್ರಂಜಿತ್ ಕೌರ್ - ಇದುವರೆಗೆ ನಡೆಯುತ್ತಿರುವ ಈವೆಂಟ್‌ನಲ್ಲಿ ಟೋಕಿಯೋ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com