19 ವರ್ಷದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಬಾಕ್ಸಿಂಗ್ ಕೋಚ್ ಬಂಧನ

ಕ್ರೀಡಾಕೂಟದ ಪ್ರವಾಸದ ವೇಳೆ 19 ವರ್ಷದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 28 ವರ್ಷದ ಬಾಕ್ಸಿಂಗ್ ಕೋಚ್ ನನ್ನು ಪೊಲೀಸರು ಬಂಧಿಸಿದ್ದಾರೆ. 
ಬಾಕ್ಸಿಂಗ್ ಕೋಚ್
ಬಾಕ್ಸಿಂಗ್ ಕೋಚ್

ನವದೆಹಲಿ: ಕ್ರೀಡಾಕೂಟದ ಪ್ರವಾಸದ ವೇಳೆ 19 ವರ್ಷದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 28 ವರ್ಷದ ಬಾಕ್ಸಿಂಗ್ ಕೋಚ್ ನನ್ನು ಪೊಲೀಸರು ಬಂಧಿಸಿದ್ದಾರೆ. 

ಫೆಬ್ರವರಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ಕ್ರೀಡಾಕೂಟದ ವೇಳೆ ಹರಿಯಾಣವನ್ನು ಪ್ರತಿನಿಧಿಸಿದ್ದ ಸ್ಪರ್ಧಿ ಮೇಲೆ ಬಾಕ್ಸರ್ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರು ನೀಡಲಾಗಿತ್ತು. 

ದೆಹಲಿಯಿಂದ ಕೊಲ್ಕತ್ತಾಗೆ ನಮ್ಮ ಸಹ ಸ್ಪರ್ಧಿಗಳ ಜೊತೆ ಪ್ರಮಾಣಿಸುವಾಗ ನಮ್ಮ ಕೋಚ್ ರೈಲಿನಲ್ಲಿ ಲೈಂಗಿಕ ಕಿರುಕುಳ ನೀಡಿದರು ಎಂದು ದೂರಿನಲ್ಲಿ ವಿದ್ಯಾರ್ಥಿನಿ ತಿಳಿಸಿದ್ದಾಳೆ. 

ಈ ಸಂಬಂಧ ಕೋಚ್ ನನ್ನು ಹರಿಯಾಣದ ಸೋನಿಪತ್ ನಲ್ಲಿ ಪೊಲೀಸರು ಬಂಧಿಸಿ  ವಿಚಾರಣೆ ನಡೆಸುತ್ತಿದ್ದು ಈ ವೇಳೆ ಲೈಂಗಿಕ ಕಿರುಕುಳ ನೀಡಿದನ್ನು ಒಪ್ಪಿಕೊಂಡಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com