ರಾಷ್ಟ್ರೀಯ ಹಾಕಿ ಟೂರ್ನಿ ಮುಂದೂಡಿಕೆ, ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಏಪ್ರಿಲ್ 10ರಿಂದ ದೇಶ ನಾನಾ ಪ್ರದೇಶಗಳಲ್ಲಿ ಆರಂಭಗೊಳ್ಳಬೇಕಿದ್ದ ಜೂನಿಯರ್ ಮತ್ತು ಸಬ್ ಜೂನಿಯರ್(ಪುರುಷ ಮತ್ತು ಮಹಿಳಾ) ವಿಭಾಗ ಸೇರಿದಂತೆ ವಿವಿಧ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳನ್ನು ಹಾಕಿ ಇಂಡಿಯಾ ಸೋಮವಾರ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಏಪ್ರಿಲ್ 10ರಿಂದ ದೇಶ ನಾನಾ ಪ್ರದೇಶಗಳಲ್ಲಿ ಆರಂಭಗೊಳ್ಳಬೇಕಿದ್ದ ಜೂನಿಯರ್ ಮತ್ತು ಸಬ್ ಜೂನಿಯರ್(ಪುರುಷ ಮತ್ತು ಮಹಿಳಾ) ವಿಭಾಗ ಸೇರಿದಂತೆ ವಿವಿಧ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳನ್ನು ಹಾಕಿ ಇಂಡಿಯಾ ಸೋಮವಾರ ತಾತ್ಕಾಲಿಕವಾಗಿ ಮುಂದೂಡಿದ್ದು, ಜತೆಗೆ ಪರಿಷ್ಕೃತ ವೇಳಾಪಟ್ಟಿಯನ್ನು ಸಹ ಪ್ರಕಟಿಸಿದೆ.

ಭಾರತದಲ್ಲಿ ಕೋವಿಡ್-19 ವ್ಯಾಪಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಾಕಿ ಇಂಡಿಯಾ ಕಾರ್ಯಕಾರಿ ಮಂಡಳಿ ಈ ನಿರ್ಧಾರ ಕೈಗೊಂಡಿದೆ.‘‘ಆಟಗಾರರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಜೂನಿಯರ್ ಮತ್ತು ಸಬ್ ಜೂನಿಯರ್ ಸೇರಿದಂತೆ ಹಲವು ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳನ್ನು ಮುಂದೂಡಲು ಹಾಕಿ ಇಂಡಿಯಾ ನಿರ್ಧರಿಸಿದೆ. ಹಾಗೆಯೇ ಇದೇ ಚಾಂಪಿಯನ್‌ಷಿಪ್‌ಗಳ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಈಗಿದ್ದರೂ ಕೊರೊನಾ ಸ್ಥಿತಿಯ ಮೇಲೆ ಹಾಕಿ ಇಂಡಿಯಾ ತೀವ್ರ ನಿಗಾ ಇಟ್ಟಿದ್ದು, ಇದಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳಲಿದೆ,’’ ಎಂದು ಹೇಳಿದೆ.

ಚಾಂಪಿಯನ್‌ಷಿಪ್‌ಗಳ ಪರಿಷ್ಕೃತ ವೇಳಾಪಟ್ಟಿಯ ವಿವರ ಇಲ್ಲಿದೆ
10ನೇ ಹಾಕಿ ಇಂಡಿಯಾ ಜೂನಿಯರ್ ಮಹಿಳಾ ರಾಷ್ಟ್ರೀಯ ಚಾಂಪಿಯನ್‌ಷಿಪ್(ಬಿ ಡಿವಿಜನ್) ಏ.29ರಿಂದ ಮೇ 9ಕ್ಕೆ ಮುಂದೂಡಿಕೆ; 10ನೇ ಹಾಕಿ ಇಂಡಿಯಾ ಜೂನಿಯರ್ ಪುರುಷರ ರಾಷ್ಟ್ರೀಯ ಚಾಂಪಿಯನ್ (ಬಿ ಡಿವಿಜನ್) ಮೇ 14ರಿಂದ ಮೇ 21ಕ್ಕೆ ಮುಂದೂಡಿಕೆ; 10ನೇ ಹಾಕಿ ಇಂಡಿಯಾ ಸಬ್ ಜೂನಿಯರ್ ಮಹಿಳಾ ರಾಷ್ಟ್ರೀಯ ಚಾಂಪಿಯನ್‌ಷಿಪ್ (ಬಿ ಡಿವಿಜನ್) ಮೇ 3ರಿಂದ ಮೇ14ಕ್ಕೆ ಮುಂದೂಡಿಕೆ; 10ನೇ ಹಾಕಿ ಇಂಡಿಯಾ ಜೂನಿಯರ್ ಪುರುಷರ ರಾಷ್ಟ್ರೀಯ ಚಾಂಪಿಯನ್‌ಷಿಪ್ (ಎ ಡಿವಿಜನ್) ಮೇ 19ರಿಂದ 30ಕ್ಕೆ ಮುಂದೂಡಿಕೆ; 10ನೇ ಹಾಕಿ ಇಂಡಿಯಾ ಜೂನಿಯರ್ ಮಹಿಳಾ ರಾಷ್ಟ್ರೀಯ ಚಾಂಪಿಯನ್‌ಷಿಪ್ (ಎ ಡಿವಿಜನ್) ಮೇ 7ರಿಂದ ಮೇ 17ರವರೆಗೆ ಮುಂದೂಡಿಕೆ; 10ನೇ ಹಾಕಿ ಇಂಡಿಯಾ ಸಬ್ ಜೂನಿಯರ್ ಮಹಿಳಾ ರಾಷ್ಟ್ರೀಯ ಚಾಂಪಿಯನ್‌ಷಿಪ್ (ಎ ಡಿವಿಜನ್) ಮೇ 12ರಿಂದ ಮೇ 23ಕ್ಕೆ ಮುಂದೂಡಿಕೆ; 10ನೇ ಹಾಕಿ ಇಂಡಿಯಾ ಸಬ್ ಜೂನಿಯರ್ ಪುರುಷರ ರಾಷ್ಟ್ರೀಯ ಚಾಂಪಿಯನ್‌ಷಿಪ್ (ಬಿ. ಡಿವಿಜನ್) ಮೇ 28ರಿಂದ ಜೂನ್ 4ರವರೆಗೆ ಮುಂದೂಡಿಕೆ; 10ನೇ ಹಾಕಿ ಇಂಡಿಯಾ ಸಬ್ ಜೂನಿಯರ್ ಪುರುಷರ ರಾಷ್ಟ್ರೀಯ ಚಾಂಪಿಯನ್‌ಷಿಪ್(ಎ ಡಿವಿಜನ್) ಜೂನ್ 3ರಿಂದ ಜೂನ್ 13ರವರೆಗೆ ಮುಂದೂಡಿಕೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com