ಕೊರೊನಾ ಭೀತಿಯ ನಡುವೆ ಗ್ರೀಸ್ ನಿಂದ ಒಲಿಂಪಿಕ್ಸ್ ಜ್ಯೋತಿ ಪಡೆದ ಜಪಾನ್

ವಿಶ್ವ ವ್ಯಾಪಿ ಮಹಾಮಾರಿಯಂತೆ ಹಬ್ಬಿರುವ ಕೊರೊನಾ ವೈರಸ್ ಭೀತಿಯಿಂದಾಗಿ ಅದೆಷ್ಟೋ ಕ್ರೀಡೆಗಳು ರದ್ದಾಗಿದ್ದು, ಇನ್ನು ಹಲವುಗಳನ್ನು ಮುಂದೂಡಲಾಗಿದೆ.
ಕೊರೊನಾ ಭೀತಿಯ ನಡುವೆ ಗ್ರೀಸ್ ನಿಂದ ಒಲಿಂಪಿಕ್ಸ್ ಜ್ಯೋತಿ ಪಡೆದ ಜಪಾನ್
ಕೊರೊನಾ ಭೀತಿಯ ನಡುವೆ ಗ್ರೀಸ್ ನಿಂದ ಒಲಿಂಪಿಕ್ಸ್ ಜ್ಯೋತಿ ಪಡೆದ ಜಪಾನ್

ಅಥೆನ್ಸ್: ವಿಶ್ವ ವ್ಯಾಪಿ ಮಹಾಮಾರಿಯಂತೆ ಹಬ್ಬಿರುವ ಕೊರೊನಾ ವೈರಸ್ ಭೀತಿಯಿಂದಾಗಿ ಅದೆಷ್ಟೋ ಕ್ರೀಡೆಗಳು ರದ್ದಾಗಿದ್ದು, ಇನ್ನು ಹಲವುಗಳನ್ನು ಮುಂದೂಡಲಾಗಿದೆ. ಆದರೆ, ಈಗ ಕ್ರೀಡಾಭಿಮಾನಿಗಳಲ್ಲಿ ಎದ್ದಿರುವ ಪ್ರಶ್ನೆ ಎಂದರೆ ಈ ಬಾರಿ ಒಲಿಂಪಿಕ್ಸ್ ನಿಗದಿತ ಸಮಯದಲ್ಲಿ ನಡೆಯುತ್ತದಾ? 

ಆದರೆ ಇವುಗಳಿಗೆ ತಲೆ ಕೆಡಿಸಿಕೊಳ್ಳದ ಜಪಾನ್ ನಿಗದಿತ ಸಮಯಕ್ಕೆ ಒಲಿಂಪಿಕ್ಸ್ ನಡೆಸುವ ಬಗ್ಗೆ ಹೇಳುತ್ತಲೆ ಬಂದಿದೆ. ಅಲ್ಲದೆ ಈ ನಿಟ್ಟಿನಲ್ಲಿ ಭರ್ಜರಿಒ ತಯಾರಿಗಳು ನಡೆದಿವೆ. ಅಲ್ಲದೆ ಗ್ರೀಸ್ ನಲ್ಲಿ ಗುರುವಾರ ಟೋಕಿಯೊ ಒಲಿಂಪಿಕ್ಸ್ ಸಮಿತಿಗೆ ಟಾರ್ಚ್ ನೀಡಲಾಗಿದೆ. 

ಒಲಿಂಪಿಕ್ ಧ್ರುವ ವಾಲ್ಟ್ ಚಾಂಪಿಯನ್ ಕತ್ರಿನಾ ಸ್ಟೆಫಾನಿಡಿ ಅವರು ಪಂಥನಾಸಿಕ್ ಕ್ರೀಡಾಂಗಣದೊಳಗೆ ಒಲಿಂಪಿಕ್ 'ಫೈರ್ ಪಿಟ್' ಅನ್ನು ಬೆಳಗಿಸಿದರು. ಈ ಕ್ರೀಡಾಂಗಣದಲ್ಲಿಯೇ 1896 ರಲ್ಲಿ ಮೊದಲ ಆಧುನಿಕ ಒಲಿಂಪಿಕ್ ಕ್ರೀಡಾಕೂಟ ನಡೆಯಿತು. ಅಲ್ಲದೆ ಪ್ರೇಕ್ಷಕರ ಅನುಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಿತು. ಟಾರ್ಚ್ ಬೆಳಗಿಸಿದ ನಂತರ, ಟಾರ್ಚ್ ಅನ್ನು ಟೋಕಿಯೊ ಒಲಿಂಪಿಕ್ 2020 ಪ್ರತಿನಿಧಿ ನವೋಕೊ ಇಮೊಟೊಗೆ ಹಸ್ತಾಂತರಿಸಲಾಯಿತು. ಈಜುಗಾರ ಎಮೋಟೊ 1996 ರ ಅಟ್ಲಾಂಟಾ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com