ಟೊಕಿಯೋ ಒಲಿಂಪಿಕ್ಸ್
ಟೊಕಿಯೋ ಒಲಿಂಪಿಕ್ಸ್

ಕೊರೋನಾವೈರಸ್ ಭೀತಿ: ಒಲಿಂಪಿಕ್ಸ್ ಗೆ ಕ್ರೀಡಾಪಟುಗಳನ್ನು ಕಳುಹಿಸಲ್ಲ ಎಂದ ಕೆನಡಾ

ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಪ್ರತಿಷ್ಠಿತ ಒಲಿಂಪಿಕ್ಸ್ ಮಹಾಕೂಟಕ್ಕೂ ಕೊರೊನಾ ವೈರಸ್ ಸೋಂಕಿನ ಭೀತಿ ತಟ್ಟಿದೆ. ಹೀಗಾಗಿ ಕ್ರೀಡಾಪಟುಗಳು, ಸಿಬ್ಬಂದಿ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಕೂಟವನ್ನು ಮುಂದೂಡುವಂತೆ ಅಮೆರಿಕ ಸೇರಿದಂತೆ ಹತ್ತಕ್ಕೂಹೆಚ್ಚು ದೇಶಗಳು ಈಗಾಗಲೇ ಟೂರ್ನಿಯ ಆಯೋಜಕರನ್ನು ಒತ್ತಾಯಿಸಿವೆ

ನವದೆಹಲಿ:ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಈಗಾಗಲೇ ಜಾಗತಿಕವಾಗಿ ಬಹುತೇಕ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿವೆ

ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಪ್ರತಿಷ್ಠಿತ ಒಲಿಂಪಿಕ್ಸ್ ಮಹಾಕೂಟಕ್ಕೂ ಕೊರೊನಾ ವೈರಸ್ ಸೋಂಕಿನ ಭೀತಿ ತಟ್ಟಿದೆ. ಹೀಗಾಗಿ ಕ್ರೀಡಾಪಟುಗಳು, ಸಿಬ್ಬಂದಿ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಕೂಟವನ್ನು ಮುಂದೂಡುವಂತೆ ಅಮೆರಿಕ ಸೇರಿದಂತೆ ಹತ್ತಕ್ಕೂಹೆಚ್ಚು ದೇಶಗಳು ಈಗಾಗಲೇ ಟೂರ್ನಿಯ ಆಯೋಜಕರನ್ನು ಒತ್ತಾಯಿಸಿವೆ. ಆದರೆ ಒಲಿಂಪಿಕ್ಸ್ ನಡೆಸುವ ಅಥವಾ ಮುಂದೂಡುವ ಬಗ್ಗೆ ಜಪಾನ್ ಇನ್ನೂ ಸ್ಪಷ್ಟ ನಿರ್ಧಾರ ಪ್ರಕಟಿಸಿಲ್ಲ. 

ಈ ಮಧ್ಯೆ, ಕೆನಡಾ ಟೋಕಿಯೊ ಒಲಿಂಪಿಕ್ಸ್ ಗೆ ತಮ್ಮ ದೇಶದಿಂದ ಯಾವುದೇ ಅಥ್ಲೀಟ್ ಗಳನ್ನು ಕಳುಹಿಸುವುದಿಲ್ಲ ಎಂದು ಹೇಳಿದೆ.ಜುಲೈ 24ರಿಂದ ಆರಂಭವಾಗಲಿರುವ ಟೋಕಿಯೊ ಒಲಿಂಪಿಕ್ಸ್ ಗೆ ತಮ್ಮ ದೇಶದಿಂದ ಯಾವುದೇ ಕ್ರೀಡಾಪಟುಗಳನ್ನು ಕಳುಹಿಸುವುದಿಲ್ಲ  ಎಂದು ಕೆನಡಾ ಒಲಿಂಪಿಕ್ ಸಮಿತಿ ಮತ್ತು ಕೆನಡಾ ಪ್ಯಾರಾಲಿಂಪಿಕ್ಸ್ ಸಮಿತಿ ತಿಳಿಸಿದೆ. ಇದರೊಂದಿಗೆ ಈ ರೀತಿ ಹೇಳಿದ ಮೊದಲ ರಾಷ್ಟ್ರ ಕೆನಡಾವಾಗಿದೆ.

ಮುಂದಿನ ನಾಲ್ಕು ವಾರಗಳಲ್ಲಿ ಟೋಕಿಯೊ ಒಲಿಂಪಿಕ್ಸ್ ಮುಂದೂಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)  ಹೇಳಿದೆ.

ಎಲ್ಲ ಮಧ್ಯಸ್ಥಗಾರರೊಂದಿಗೆ, ವಿಶ್ವಾದ್ಯಂತ ಆರೋಗ್ಯ ಪರಿಸ್ಥಿತಿಯ ತ್ವರಿತ ಬೆಳವಣಿಗೆ ಮತ್ತು ಒಲಿಂಪಿಕ್ ಕ್ರೀಡಾಕೂಟದ ಮೇಲೆ ಅದರ ಪ್ರಭಾವದ ಬಗ್ಗೆ ನಮ್ಮ ಮೌಲ್ಯಮಾಪನವನ್ನು ಪೂರ್ಣಗೊಳಿಸಲು ವಿವರವಾದ ಚರ್ಚೆಗಳನ್ನು ಪ್ರಾರಂಭಿಸಿದ್ದೇವೆ, ಮುಂದೂಡುವಿಕೆಯ ಸನ್ನಿವೇಶವೂ ಸೇರಿದಂತೆ ಮುಂದಿನ ನಾಲ್ಕು ವಾರಗಳಲ್ಲಿ ಈ ಚರ್ಚೆಗಳನ್ನು ಅಂತಿಮಗೊಳಿಸಲಾಗುವುದು ಎಂದು ಐಒಸಿ ಅಧ್ಯಕ್ಷ ಥಾಮಸ್ ಬಾಕ್ ,  ಜಾಗತಿಕ ಕ್ರೀಡಾಪಟುಗಳ ಸಮುದಾಯಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com