ಟೋಕಿಯೊ ಒಲಿಂಪಿಕ್ಸ್: ಕಾದು ನೋಡಲು ಐಒಎ ನಿರ್ಧಾರ

ಮುಂಬರುವ ಟೋಕಿಯೊ ಒಲಿಂಪಿಕ್ಸ್ ನಲ್ಲಿ ದೇಶ ಪಾಲ್ಗೊಳ್ಳುವ ಕುರಿತು ಯಾವುದೇ ನಿರ್ಧಾರ ಕೈಗೊಳ್ಳುವ ಬಗ್ಗೆ ಕನಿಷ್ಠ ಒಂದು ತಿಂಗಳು ಕಾದು ನೋಡಲಾಗುವುದು ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ ಸೋಮವಾರ ಹೇಳಿದೆ.
ಟೊಕಿಯೋ ಒಲಿಂಪಿಕ್ಸ್
ಟೊಕಿಯೋ ಒಲಿಂಪಿಕ್ಸ್

ನವದಹೆಲಿ: ಮುಂಬರುವ ಟೋಕಿಯೊ ಒಲಿಂಪಿಕ್ಸ್ ನಲ್ಲಿ ದೇಶ ಪಾಲ್ಗೊಳ್ಳುವ ಕುರಿತು ಯಾವುದೇ ನಿರ್ಧಾರ ಕೈಗೊಳ್ಳುವ ಬಗ್ಗೆ ಕನಿಷ್ಠ ಒಂದು ತಿಂಗಳು ಕಾದು ನೋಡಲಾಗುವುದು ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ ಸೋಮವಾರ ಹೇಳಿದೆ.

ಕೊರೋನಾ ವೈರಸ್ ಭೀತಿಯ ನಡುವೆಯೂ ಒಂದು ವೇಳೆ ಈ ವರ್ಷ ಒಲಿಂಪಿಕ್ ಕ್ರೀಡಾಕೂಟ ನಡೆಸಿದ್ದಲ್ಲಿ ಕೂಟದಿಂದ ಹಿಂದೆ ಸರಿಯುವುದಾಗಿ ಕೆನಡಾ ಪ್ರಕಟಿಸಿದ ಬೆನ್ನಲ್ಲೇ ಭಾರತ ಈ ತೀರ್ಮಾನಕ್ಕೆ ಬಂದಿದೆ. ಒಲಿಂಪಿಕ್ಸ್ ಕೂಟಕ್ಕೆ ಯಾವುದೇ ಅಥ್ಲೀಟ್ ಗಳನ್ನು ಕಳುಹಿಸುವುದಿಲ್ಲ ಎಂದು ಹೇಳಿದ ಮೊದಲ ರಾಷ್ಟ್ರ ಕೆನಡಾವಾಗಿದ್ದು, ಅಥ್ಲೀಟ್ ಗಳ ಸುರಕ್ಷತೆಯೇ ಮೊದಲ ಆದ್ಯತೆ ಎಂದು ಅದು ಹೇಳಿದೆ.

ಸುದ್ದಿ ಸಂಸ್ಥೆ ಜತೆ ಈ ಕುರಿತು ಮಾತನಾಡಿರುವ ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ)ಯ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ, ಕೋವಿಡ್ -19 ಜಾಗತಿಕ ಪಿಡುಗಿನ ಪರಿಸ್ಥಿತಿಯ ಬಗ್ಗೆ ಸಂಸ್ಥೆ ಅತ್ಯಂತ ಸನಿಹದಿಂದ ತೀವ್ರ ನಿಗಾಯಿಟ್ಟಿದೆ. ದಿನೇ ದಿನೇ ವ್ಯಾಪಕವಾಗುತ್ತಿರುವ ಕೊರೋನಾ ವೈರಸ್ ನಿಂದಾಗಿ, ಇದುವೆರೆಗೂ 14 ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದು, 3 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ಹರಡಿರುವುದು ದೃಢಪಟ್ಟಿದೆ. 

''ನಾವು ಕನಿಷ್ಠ ನಾಲ್ಕು ಅಥವಾ ಐದು ವಾರಗಳ ಕಾಲ ಕಾದು ನೋಡಲಿದ್ದೇವೆ. ನಂತರ ಕೂಟಕ್ಕೆ ಸಂಬಂಧಪಟ್ಟ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಮತ್ತು ಕ್ರೀಡಾ ಸಚಿವಾಲಯವನ್ನು ಸಂಪರ್ಕಿಸಿ ಬಳಿಕ ಮುಂದಿನ ಯಾವುದೇ ನಿರ್ಧಾರವನ್ನು ಕೈಗೊಳ್ಳಲಿದ್ದೇವೆ,'' ಎಂದು ಮೆಹ್ತಾ ಹೇಳಿದ್ದಾರೆ. ಇದೇ ವೇಳೆ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ದೇಶದ ಪರಿಸ್ಥಿತಿ ತೀರಾ ಹದಗೆಟ್ಟಿಲ್ಲ ಎಂದು ಹೇಳಿದ್ದಾರೆ. 

ಪೂರ್ವ ನಿಗದಿಯಂತೆ ಜುಲೈ -ಆಗಸ್ಟ್ ನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯುವ ಬಗ್ಗೆ ದಿನೇ ದಿನೇ ಸಂಶಯಗಳು ಮೂಡುತ್ತಿವೆ. ಏತನ್ಮಧ್ಯೆ, ಇಂದಿನಿಂದ ಇನ್ನೂ ನಾಲ್ಕು ವಾರಗಳಲ್ಲಿ ಮುಂದೂಡುವುದು ಸೇರಿದಂತೆ ಎಲ್ಲ ಪರ್ಯಾಯ ಮಾರ್ಗಗಳನ್ನು ಪರಿಗಣಿಸಲಾಗುವುದು ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಈಗಾಗಲೇ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com