ಕೊರೋನಾ ಭೀತಿಯಿಂದ ಮುಂದೂಡಿಕೆಯಾಗಿದ್ದ ಟೋಕಿಯೊ ಒಲಿಂಪಿಕ್ಸ್ 2021ರ ಜುಲೈ 23ರಿಂದ ಆರಂಭ

ಕೊವಿಡ್ -19 ಸೋಂಕಿನ ಹಿನ್ನೆಲೆಯಲ್ಲಿ ಕಳೆದ ವಾರ ಮುಂದೂಡಲ್ಪಟ್ಟಿದ್ದ ಟೋಕಿಯೊ ಒಲಿಂಪಿಕ್ಸ್ -2020 ಕ್ರೀಡಾಕೂಟ ಮುಂದಿನ ವರ್ಷದ ಜುಲೈ 23 ರಿಂದ ಆಗಸ್ಟ್ 8 ರವರೆಗೆ ನಡೆಯಲಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಟೊಕಿಯೋ ಒಲಿಂಪಿಕ್ಸ್
ಟೊಕಿಯೋ ಒಲಿಂಪಿಕ್ಸ್

ಟೋಕಿಯೊ: ಕೊವಿಡ್ -19 ಸೋಂಕಿನ ಹಿನ್ನೆಲೆಯಲ್ಲಿ ಕಳೆದ ವಾರ ಮುಂದೂಡಲ್ಪಟ್ಟಿದ್ದ ಟೋಕಿಯೊ ಒಲಿಂಪಿಕ್ಸ್ -2020 ಕ್ರೀಡಾಕೂಟ ಮುಂದಿನ ವರ್ಷದ ಜುಲೈ 23 ರಿಂದ ಆಗಸ್ಟ್ 8 ರವರೆಗೆ ನಡೆಯಲಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಟೋಕಿಯೊ ಒಲಿಂಪಿಕ್ಸ್ ಜುಲೈ 23, 2021ರಂದು ಆರಂಭವಾಗಲಿದ್ದು, ಪ್ಯಾರಾಲಿಂಪಿಕ್ ಕ್ರೀಡಾಕೂಟ ಸಹ ಮುಂದಿನ ವರ್ಷದ ಆಗಸ್ಟ್ 24ರಿಂದ ಆರಂಭವಾಗಲಿದೆ ಎಂದು ಟೋಕಿಯೊ ಮೆಟ್ರೋಪಾಲಿಟನ್ ಸರ್ಕಾರದ ಅಧಿಕಾರಿಗಳು ತಿಳಿಸಿರುವುದಾಗಿ ಜಪಾನ್‍ ಸುದ್ದಿ ವಾಹಿನಿ ಎನ್‌ಎಚ್‌ಕೆ ವರದಿ ಮಾಡಿದೆ.

ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ, ಟೋಕಿಯೋ ಕ್ರೀಡಾಕೂಟ ಸಂಘಟನಾ ಸಮಿತಿ, ಜಪಾನ್‍ ಸರ್ಕಾರ ಮತ್ತು ಟೋಕಿಯೊ ಮಹಾನಗರ ಸರ್ಕಾರಗಳೆಲ್ಲವೂ ಹೊಸ ವೇಳಾಪಟ್ಟಿಯನ್ನು ಒಪ್ಪಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2020 ರ ಟೋಕಿಯೊ ಒಲಿಂಪಿಕ್ಸ್ ಈ ವರ್ಷದ ಜುಲೈ 24 ರಿಂದ ಆಗಸ್ಟ್ 9 ರವರೆಗೆ ನಿಗದಿಯಾಗಿತ್ತು. ಆದರೆ, ಕೊರೋನಾ ವೈರಸ್ ಸೋಂಕು ವಿಶ್ವಾದ್ಯಂತ ವ್ಯಾಪಿಸಿದ್ದರಿಂದ ಕ್ರೀಡಾಕೂಟವನ್ನು ಮುಂದೂಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com