ಸಕ್ರಿಯ  ಕ್ರೀಡಾ ಜೀವನಕ್ಕೆ ವಿದಾಯ ಹೇಳಿದ ಪ್ಯಾರಾ ಅಥ್ಲೀಟ್ ದೀಪಾ ಮಲಿಕ್

ಪ್ಯಾರಾಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ದೀಪಾ ಮಲಿಕ್ ರಾಷ್ಟ್ರೀಯ ಕ್ರೀಡಾ ಸಂಹಿತೆ ಅನುಸಾರ ಭಾರತೀಯ ಪ್ಯಾರಾಲಿಂಪಿಕ್ಸ್ ಸಮಿತಿಯ ಅಧ್ಯಕ್ಷರಾಗಿ ತಮ್ಮ ಹುದ್ದೆಯನ್ನು ಅಲಂಕರಿಸುವ ಉದ್ದೇಶದಿಂದ ಸಕ್ರಿಯೆ ಕ್ರೀಡೆಗೆ ನಿವೃತ್ತಿ ಘೋಷಿಸಿದ್ದಾರೆ.
ಪ್ಯಾರಾ-ಅಥ್ಲೀಟ್ ದೀಪಾ ಮಲಿಕ್
ಪ್ಯಾರಾ-ಅಥ್ಲೀಟ್ ದೀಪಾ ಮಲಿಕ್

ನವದೆಹಲಿ: ಪ್ಯಾರಾಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ದೀಪಾ ಮಲಿಕ್ ರಾಷ್ಟ್ರೀಯ ಕ್ರೀಡಾ ಸಂಹಿತೆ ಅನುಸಾರ ಭಾರತೀಯ ಪ್ಯಾರಾಲಿಂಪಿಕ್ಸ್ ಸಮಿತಿಯ ಅಧ್ಯಕ್ಷರಾಗಿ ತಮ್ಮ ಹುದ್ದೆಯನ್ನು ಅಲಂಕರಿಸುವ ಉದ್ದೇಶದಿಂದ ಸಕ್ರಿಯೆ ಕ್ರೀಡೆಗೆ ನಿವೃತ್ತಿ ಘೋಷಿಸಿದ್ದಾರೆ.

ರಾಷ್ಟ್ರೀಯ ಕ್ರೀಡಾ ಸಂಹಿತೆ ಪ್ರಕಾರ, ಸಕ್ರಿಯ ಕ್ರೀಡಾಪಟು ಯಾವುದೇ ಒಕ್ಕೂಟದಲ್ಲಿಅಧಿಕೃತ ಹುದ್ದೆಯನ್ನು ಅಲಂಕರಿಸುವಂತಿಲ್ಲ. 

ತಮ್ಮ ನಿವೃತ್ತಿ ಕುರಿತು ಟ್ವಿಟರ್ ನಲ್ಲಿ ಪ್ರಕಟಿಸಿರುವ ಅವರು, ''ಹಲವು ದಿನಗಳ ಹಿಂದೆಯೇ ಚುನಾವಣೆ ಉದ್ದೇಶಕ್ಕಾಗಿ ಈಗಾಗಲೇ ಪಿಸಿಐಗೆ ಪತ್ರವೊಂದನ್ನು ಸಲ್ಲಿಸಿದ್ದೇವೆ, ಹೊಸ ಸಮಿತಿಯನ್ನು ಉರ್ಜಿತಗೊಳಿಸುವ ಹೈಕೋರ್ಟ್ ನ ತೀರ್ಪಿಗಾಗಿ ಕಾಯುತ್ತಿದ್ದು, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯದೊಂದಿಗೆ ಭಾಗವಾಗಲು ಈಗ ಸಕ್ರಿಯ ಕ್ರೀಡೆಗಳಿಂದ ನಿವೃತ್ತಿಯ ಬಗ್ಗೆ ಸಾರ್ವಜನಿಕ ಘೋಷಣೆ ಮಾಡುತ್ತಿದ್ದೇನೆ,'' ಎಂದು ಹೇಳಿದ್ದಾರೆ. ಜತೆಗೆ ಪ್ಯಾರಾ ಕ್ರೀಡೆಯ ಸೇವೆ ಮತ್ತು ಇತರರ ಸಾಧನೆಗೆ ಬೆಂಬಲ ನೀಡಲು ಸಮಯ ಕೂಡಿ ಬಂದಿದೆ ಎಂದಿದ್ದಾರೆ.

ರಿಯೊ ಡಿ ಜನೈರೊದಲ್ಲಿ ನಡೆದ 2016ರ ಬೇಸಿಗೆ ಪ್ಯಾರಾಲಿಂಪಿಕ್ಸ್ ನ ಮಹಿಳೆಯರ ಶಾಟ್ ಪುಟ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸುವ ಮೂಲಕ ಪ್ಯಾರಾಲಿಂಪಿಕ್ಸ್ ಗೇಮ್ಸ್ ನ್ಲಲಿ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಪಡೆದ ದೀಪಾ ಮಲಿಕ್, ದುಬೈನಲ್ಲಿ ನಡೆದ 2018ರ ಪ್ಯಾರಾ ಅಥ್ಲೆಟಿಕ್ ಗ್ರ್ಯಾನ್ ಪ್ರಿ ಕೂಟದ ಎಫ್ -53-54 ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಬಂಗಾರ ಬದಕ ಗೆದ್ದ ಸಾಧನೆ ಮಾಡಿದ್ದಾರೆ.

ಕಳೆದ ವರ್ಷ ಆಗಸ್ಟ್ 29ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾದ ಮಲಿಕ್, 2017ರಲ್ಲಿ ಜಾವೆಲಿನ್ ಎಸೆತಗಾರ ದೇವೇಂದ್ರ ಜಝಾರಿಯಾ ನಂತರ ಈ ಪ್ರಶಸ್ತಿಗೆ ಪಾತ್ರರಾದ ಎರಡನೇ ಪ್ಯಾರಾ ಅಥ್ಲೀಟ್ ಎಂಬ ಗರಿಮೆ ಹೊಂದಿದ್ದರು.

ಇದಕ್ಕೂ ಮುನ್ನ ಅವರು 2012ರಲ್ಲಿ ಅರ್ಜುನ ಪ್ರಶಸ್ತಿ ಮತ್ತು 2017ರಲ್ಲಿ ಪದ್ಮಶ್ರೀ ಗೌರವಕ್ಕೂ ಪಾತ್ರರಾಗಿದ್ದಾರೆ. 49 ವರ್ಷದ ಮಲಿಕ್ 58 ರಾಷ್ಟ್ರೀಯ ಮತ್ತು 23 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com