ಟೋಕಿಯೊ ಒಲಿಂಪಿಕ್ಸ್ ನಡೆಸಲು ಕಡೇ ಅವಕಾಶ, ತಪ್ಪಿದರೆ ರದ್ದು: ಐಒಸಿ ಮುಖ್ಯಸ್ಥ

ಮುಂದಿನ ವರ್ಷಕ್ಕೆ ಮುಂದೂಡಲಾಗಿರುವ ಟೋಕಿಯೊ ಒಲಿಂಪಿಕ್ಸ್ ಕೂಟವನ್ನು ಮತ್ತೊಮ್ಮೆ ಮುಂದೂಡಲಾಗುವುದಿಲ್ಲ. ಹೀಗಾಗಿ ಆಯೋಜಕರಿಗೆ ಇರುವುದು ಇದೊಂದೇ ಅವಕಾಶ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಮುಖ್ಯಸ್ಥ ಥಾಮಸ್ ಬ್ಯಾಕ್ ಹೇಳಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ ನಡೆಸಲು ಕಡೇ ಅವಕಾಶ, ತಪ್ಪಿದರೆ ರದ್ದು: ಐಒಸಿ ಮುಖ್ಯಸ್ಥ

ಟೋಕಿಯೊ: ಮುಂದಿನ ವರ್ಷಕ್ಕೆ ಮುಂದೂಡಲಾಗಿರುವ ಟೋಕಿಯೊ ಒಲಿಂಪಿಕ್ಸ್ ಕೂಟವನ್ನು ಮತ್ತೊಮ್ಮೆ ಮುಂದೂಡಲಾಗುವುದಿಲ್ಲ. ಹೀಗಾಗಿ ಆಯೋಜಕರಿಗೆ ಇರುವುದು ಇದೊಂದೇ ಅವಕಾಶ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಮುಖ್ಯಸ್ಥ ಥಾಮಸ್ ಬ್ಯಾಕ್ ಹೇಳಿದ್ದಾರೆ.

ಬಿಬಿಸಿಯೊಂದಿಗೆ ಮಾತನಾಡಿರುವ ಅವರು, 2021ರಲ್ಲಿಯೂ ಕೊರೊನಾ ವೈರಸ್ ಮುಂದುವರಿದರೆ ಕೂಟವನ್ನು ರದ್ದುಮಾಡುವುದಾಗಿ ಜಪಾನ್ ಹೇಳಿದೆ. ಇದಕ್ಕೆ ನಮ್ಮ ಸಮ್ಮತಿಯೂ ಇದೆ ಎಂದಿದ್ದಾರೆ.

ಕೊರೋನಾ ಜಾಗತಿಕ ಅಟ್ಟಹಾಸ ಪ್ರಾರಂಭವಾದ ಹಿನ್ನೆಲೆ ಒಲಿಂಪಿಕ್ಸ್ ಕೂಟವನ್ನುಮುಂದಿನ ವರ್ಷದ ಜುಲೈಗೆ ಮುಂದೂಡಿ ಮಾರ್ಚಿನಲ್ಲಿಆದೇಶ ಹೊರಬಿದ್ದಿತ್ತು. 

ಜಪಾನ್ ಈಗ ಎದುರಿಸುತ್ತಿರುವ ಪರಿಸ್ಥಿತಿಯ ಅರಿವು ನಮಗಿದೆ ಆದರೆ ಮೂರು ಸಾವಿರದಿಂದ ಐದು ಸಾವಿರ ಮಂದಿಯನ್ನು ಒಳಗೊಂಡ ಆಯೋಜನಾ ಸಮಿತಿಯನ್ನು ದೀರ್ಘಕಾಲ ಉಳಿಸಿಕೊಳ್ಳುವುದು ಕಷ್ಟಸಾಧ್ಯ. ಇದೇ ಅನಿಶ್ಚಿತ ಮುಂದುವರಿದರೆ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಸ್ಪರ್ಧಿಗಳಿಗೂ ಉತ್ಸಾಹ ಉಳಿಯಲ್ಲ ಎಂದು ಅವರು ಹೇಳಿದರು.

ಈ ಹಿಂದೆ ವಿಶ್ವಯುದ್ಧದ ಸಮಯದಲ್ಲಿ ಒಲಂಪಿಕ್ ಕೂಟ ರದ್ದಾಗಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com