ಖೇಲೋ ಇಂಡಿಯಾ ಕ್ರೀಡಾಪಟುಗಳಿಗೆ ಭತ್ಯೆ ಬಿಡುಗಡೆ ಮಾಡಿದ ಭಾರತೀಯ ಕ್ರೀಡಾ ಪ್ರಾಧಿಕಾರ

ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್)  2020-21ರ ಮೊದಲ ತ್ರೈಮಾಸಿಕದಲ್ಲಿ 2 ಸಾವಿರದ 749 ಖೇಲೋ ಇಂಡಿಯಾ ಕ್ರೀಡಾಪಟುಗಳಿಗೆ ಔಟ್ ಆಫ್ ಪಾಕೆಟ್ ಅಲೋಯನ್ಸ್ (ಒಪಿಎ)  8.25 ಕೋಟಿ ರೂ.ಗಳ ಭತ್ಯೆಯನ್ನು ಬಿಡುಗಡೆ ಮಾಡಲಾಗಿದೆ ಎಂದು ಭಾನುವಾರ ಘೋಷಿಸಿದೆ
ಖೇಲೋ ಇಂಡಿಯಾ ಕ್ರೀಡಾಪಟುಗಳು
ಖೇಲೋ ಇಂಡಿಯಾ ಕ್ರೀಡಾಪಟುಗಳು

ನವದೆಹಲಿ: ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್)  2020-21ರ ಮೊದಲ ತ್ರೈಮಾಸಿಕದಲ್ಲಿ 2 ಸಾವಿರದ 749 ಖೇಲೋ ಇಂಡಿಯಾ ಕ್ರೀಡಾಪಟುಗಳಿಗೆ ಔಟ್ ಆಫ್ ಪಾಕೆಟ್ ಅಲೋಯನ್ಸ್ (ಒಪಿಎ)  8.25 ಕೋಟಿ ರೂ.ಗಳ ಭತ್ಯೆಯನ್ನು ಬಿಡುಗಡೆ ಮಾಡಲಾಗಿದೆ ಎಂದು ಭಾನುವಾರ ಘೋಷಿಸಿದೆ.

2020ರ ಮೇ 22ರಂದು ಕ್ರೀಡಾಪಟುಗಳ ಬ್ಯಾಂಕ್ ಖಾತೆಗೆ ಈ ಹಣವನ್ನು ವರ್ಗಾಯಿಸಲಾಗಿದೆ. ಈ ಅವಧಿಯಲ್ಲಿ ಒಟ್ಟು 2 ಸಾವಿರದ 893 ಕ್ರೀಡಾಪಟುಗಳಿಗೆ ಭತ್ಯೆ ನೀಡಲಾಗಿದೆ. 

ಉಳಿದ 144 ಅಥ್ಲೀಟ್ ಗಳಿಗೆ 2020ರ ಮೇ ಅಂತ್ಯಕ್ಕೆ ಹಣವನ್ನು ವರ್ಗಾಯಿಸಲಾಗುವುದು ಎಂದು ಸಾಯ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com