ಟೆನ್ನಿಸ್ ಲೋಕದಲ್ಲಿ ಹೊಸ ಕ್ರಾಂತಿ! 60 ಮಕ್ಕಳಿಗೆ ವಿದ್ಯಾರ್ಥಿವೇತನ ಕಾರ್ಯಕ್ರಮ ಪ್ರಾರಂಭಿಸಿದ ರೋಹನ್ ಬೋಪಣ್ಣ

ಭಾರತದ ಖ್ಯಾತ ಟೆನ್ನಿಸ್ ಆಟಗಾರ  ರೋಹನ್ ಬೋಪಣ್ಣ ತಮ್ಮ ಮಹತ್ವಾಕಾಂಕ್ಷೆಯ ವಿದ್ಯಾರ್ಥಿವೇತನ ಯೋಜನೆಯನ್ನು ಪ್ರಾರಂಭಿಸಿದ್ದು, 60 ಮಕ್ಕಳಿಗೆ ಏಕಕಾಲದಲ್ಲಿ ಟೆನ್ನಿಸ್  ಮತ್ತು ಶಿಕ್ಷಣ ಒದಗಿಸಲು ತಲಾ 10 ಲಕ್ಷ ರೂ. ನೀಡಲಿದ್ದಾರೆ.
ರೋಹನ್ ಬೋಪಣ್ಣ
ರೋಹನ್ ಬೋಪಣ್ಣ

ನವದೆಹಲಿ: ಭಾರತದ ಖ್ಯಾತ ಟೆನ್ನಿಸ್ ಆಟಗಾರ  ರೋಹನ್ ಬೋಪಣ್ಣ ತಮ್ಮ ಮಹತ್ವಾಕಾಂಕ್ಷೆಯ ವಿದ್ಯಾರ್ಥಿವೇತನ ಯೋಜನೆಯನ್ನು ಪ್ರಾರಂಭಿಸಿದ್ದು, 60 ಮಕ್ಕಳಿಗೆ ಏಕಕಾಲದಲ್ಲಿ ಟೆನ್ನಿಸ್  ಮತ್ತು ಶಿಕ್ಷಣ ಒದಗಿಸಲು ತಲಾ 10 ಲಕ್ಷ ರೂ. ನೀಡಲಿದ್ದಾರೆ.

"ಭಾರತೀಯ ಟೆನ್ನಿಸ್ ನಲ್ಲಿ ಗೇಮ್ ಚೇಂಜರ್" ಎಂದು ವಿವರಿಸಲಾದ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ರೋಹನ್ ಬೋಪಣ್ಣ ಟೆನ್ನಿಸ್ ಅಕಾಡೆಮಿ (ಆರ್‌ಬಿಟಿಎ) ಮತ್ತು ಬೆಂಗಳೂರಿನ ತರಬೇತಿ ಕೇಂದ್ರದ ನೆಲೆಯಾಗಿರುವ ದಿ ಸ್ಪೋರ್ಟ್ಸ್ ಸ್ಕೂಲ್ ನಡುವಿನ ಸಹಯೋಗದ ಮೂಲಕ ನಡೆಸಲಾಗುವುದು. ಆರಂಭದಲ್ಲಿ, 12, 14 ವರ್ಷದೊಳಗಿನವರು ಮತ್ತು 16 ವರ್ಷದೊಳಗಿನವರು ಎಂಬ ಮೂರು ವಿಭಾಗಗಳಲ್ಲಿರುವ ಮಕ್ಕಳು ಶಾಲಾ ವೆಬ್‌ಸೈಟ್ ಮೂಲಕ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ಲಾಕ್‌ಡೌನ್ ನಂತರ ಅವುಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ಆಯ್ದವಿದ್ಯಾರ್ಥಿಗಳು ಈ ಯೋಜನೆಗೆ ಸೇರ್ಪಡೆಯಾಗಲಿದ್ದಾರೆ." ಬೋಪಣ್ಣ ಹೇಳಿದ್ದಾರೆ.

"ನಾನು ಕಿರಿಯ ಆಟಗಾರನಾಗಿದ್ದಾಗ ನನ್ನ ಬಳಿ ಇಲ್ಲದಿರುವುದನ್ನು ನಾನು ಇಂದಿನ ಮಕ್ಕಳಿಗೆ ನೀಡಲು ಬಯಸುತ್ತೇನೆ. . ಇದು ಭಾರತೀಯ ಟೆನ್ನಿಸ್ ನಲ್ಲಿ ಗೇಮ್ ಚೇಂಜರ್ ಆಗಿರುತ್ತದೆ. ಪೋಷಕರು ಯಾವಾಗಲೂ ಶಿಕ್ಷಣದ ಬಗ್ಗೆ ಚಿಂತಿತರಾಗಿದ್ದಾರೆ, ಆದ್ದರಿಂದ ನಾವು ಎರಡನ್ನೂ ಸಾಧಿಸಿ ತೋರಿಸಲಿದ್ದೇವೆ." ಆನ್‌ಲೈನ್ ಪತ್ರಿಕಾಗೋಷ್ಠಿ.ಯಲ್ಲಿ ಬೋಪಣ್ಣ ಹೇಳಿದ್ದಾರೆ.

ಮೊದಲ ವರ್ಷದಲ್ಲಿ, ಎಐಟಿಎ ಶ್ರೇಯಾಂಕ ಹೊಂದಿರುವ ಆಟಗಾರರು ಮಾತ್ರ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು."ನಾವು ಪ್ರತಿ ವಿಭಾಗದಲ್ಲಿ 20 ಮಕ್ಕಳನ್ನು ಆಯ್ಕೆ ಮಾಡುತ್ತೇವೆ. ಬಹುತೇಕ ನನಗೆ ಅರಿವಿರುವ ಮಟ್ಟಿಗೆ ಇದು ವಿಶ್ವದ ಅತಿದೊಡ್ಡ ವಿದ್ಯಾರ್ಥಿವೇತನ ಕಾರ್ಯಕ್ರಮವಾಗಿದೆ. ಒಂದೇ ಸಮಯದಲ್ಲಿ 60 ಮಕ್ಕಳಿಗೆ 100 ಪ್ರತಿಶತದಷ್ಟು ಪ್ರಾಯೋಜಕತ್ವದೊಂದಿಗೆ ಯಾರೂ ವಿದ್ಯಾರ್ಥಿವೇತನವನ್ನು ನೀಡುವುದಿಲ್ಲ. ಯುಎಸ್ ಕಾಲೇಜು ಟೆನ್ನಿಸ್ ನಲ್ಲಿಯೂ  ಸಹ 70 ಅಥವಾ 80 ಶೇಕಡಾ ಪ್ರಾಯೋಜಕತ್ವದಲ್ಲಿ ಈ ಕಾರ್ಯಕ್ರಮ ನಡೆಯುತ್ತದೆ. 

"ನಾವು ಆಯ್ದ ಮಕ್ಕಳನ್ನು ಮೇಲ್ವಿಚಾರಣೆ ಮಾಡುತ್ತಲೇ ಇರುತ್ತೇವೆ. ಯಾರಾದರೂ ಯಾವಾಗಲೂ ಬಾಗಿಲು ತೆರೆಯುವುದನ್ನೇ ಕಾಯುತ್ತಿರುತ್ತಾರೆ. ಹಾಗೊಮ್ಮೆ ನಾವು ಅವರನ್ನು ಪತ್ತೆಹಚ್ಚದೆ ಹೋದಲ್ಲಿ ಅಂತಹವರ ಅವಕಾಶ ಕೈತಪ್ಪಿ ಬೇರೆಯವರ ಪಾಲಾಗಲಿದೆ. " ಭಾರತದ ಅಗ್ರ ಸಿಂಗಲ್ಸ್ ಆಟಗಾರ ಪ್ರಜ್ನೇಶ್ ಗುನ್ನೇಶ್ವರನ್ ಅವರ ತರಬೇತುದಾರ ಬಾಲಚಂದ್ರನ್ ಮಣಿಕ್ಕಾತ್ ಹೇಳಿದ್ದಾರೆ. ಬಾಲಚಂದ್ರನ್ ಇತರ ಆರು ತರಬೇತುದಾರರೊಂದಿಗೆ ಕೇಂದ್ರದಲ್ಲಿ ಮುಖ್ಯ ಕೋಚ್ ಆಗಿರುತ್ತಾರೆ.

"ಆಯ್ಕೆಮಾಡಿದ ಮಕ್ಕಳಿಗೆ ಪೌಷ್ಟಿಕತಜ್ಞ, ಆಹಾರ ತಜ್ಞ, ಭೌತಶಾಸ್ತ್ರ ಮತ್ತು ಕ್ರೀಡಾ ಮನಶ್ಶಾಸ್ತ್ರಜ್ಞರ ಸೇವೆಗಳನ್ನು ಹೊರತು ಏಳು ಕಠಿಣತಮ ಪ್ರದೇಶಗಳಿಗೆ ಪ್ರವೇಶವಿರಲಿದೆ. ಸರ್ಕಾರದ ಸಹಾಯವಿಲ್ಲದೆ ಇದನ್ನು ಹೇಗೆ ನೆರವೇರಿಸಬೇಕು ಎನ್ನುವುದನ್ನು ವಿವರಿಸಿ ಎಂದಾಗ "ಯಾರೊಂದಿಗೂ ಸ್ಪರ್ಧೆ ಇಲ್ಲ" ಎಂದು ಬೋಪಣ್ಣ ಉತ್ತರಿಸಿದ್ದಾರೆ.ಎಐಟಿಎ ಕೆಲವು ವರ್ಷಗಳಿಂದ ಡಿಎಲ್‌ಟಿಎಯಲ್ಲಿ ಅತ್ಯುತ್ತಮ ಕೇಂದ್ರವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದೆ ಆದರೆ ಹಲವಾರು ಕಾರಣಗಳಿಂದಾಗಿ ಪ್ರಯತ್ನಗಳು ಫಲಪ್ರದವಾಗಿಲ್ಲ."ನಾವು ಭಾರತೀಯ ಟೆನ್ನಿಸ್ ನ ಉತ್ತಮತೆಯನ್ನು ಮಾತ್ರ ಬಯಸುತ್ತೇವೆ. ಮಕ್ಕಳಿಗೆ ಸಹಾಯ ಮಾಡುವುದು ನನ್ನ ಶುದ್ದ ಮನಸ್ಸಿನ ಉದ್ದೇಶ. ನನಗೆ ಆ ಉದ್ದೇಶವಿದ್ದು ನಾನು ಟಗಾರರಿಗೆ ಅವಕಾಶಗಳನ್ನು ನೀಡಲು ಬಯಸುತ್ತೇವೆ."

ಇನ್ನು ಆಯ್ಕೆಯಾದ ವಿದ್ಯಾರ್ಥಿಗಳಿಗೆ 10 ನೇ ತರಗತಿಯವರೆಗೆ ಸಿಬಿಎಸ್‌ಇ ಪಠ್ಯಕ್ರಮ ಮತ್ತು 11 ಮತ್ತು 12 ನೇ ತರಗತಿಗೆ ಕರ್ನಾಟಕ ರಾಜ್ಯ ಮಂಡಳಿ ಪಠ್ಯಕ್ರಮವನ್ನು ಅನುಸರಿಸುವುದಾಗಿ ಕ್ರೀಡಾ ಶಾಲೆಯ ನಿರ್ದೇಶಕ ಡಾ.ಶಂಕರ್ ಯುವಿ ವಿವರಿಸಿದ್ದಾರೆ. ಇನ್ನು ಆಯ್ಕೆಯಾಗದೆ ಇದ್ದರೂ ತಾವು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸುವವರು ಸಹ ಹಣ ನೀಡಿ ತರಬೇತಿ ಹೊಂದಲು ಅವಕಾಶವಿದೆ. ಪ್ರಾರಂಭಿಕ ಹಂತದಲ್ಲಿರುವವರಿಗೆ 6.25 ಲಕ್ಷ ರೂ., ಮಧ್ಯಂಮ ಹಂತಕ್ಕೆ  8 ಲಕ್ಷ ರೂ ಮತ್ತು ಉನ್ನತ ಮಟ್ಟದ ತರಬೇತಿಗೆ 10 ಲಕ್ಷ ರೂ. ಹಣ ಪಾವತಿಸಲು ಕೇಳಲಾಗುತ್ತದೆ. ಟೆನ್ನಿಸ್ ಮಾತ್ರವಲ್ಲದೆ ಬ್ಯಾಡ್ಮಿಂಟನ್, ಫುಟ್ಬಾಲ್ ಮತ್ತು ಬ್ಯಾಸ್ಕೆಟ್‌ಬಾಲ್ ಸೇರಿದಂತೆ ಇನ್ನೂ ಐದು ಕ್ರೀಡೆಗಳಲ್ಲಿ ಶಾಲೆಯು ಕಾರ್ಯಕ್ರಮವನ್ನು ನಡೆಸುತ್ತಿದೆ ಎಂದು ಅವರು ಮಾಹಿತಿ ನೀಡಿದರು
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com