ಮೈಕೆಲ್ ಶುಮೇಕರ್ ದಾಖಲೆ ಧೂಳಿಪಟ ಮಾಡಿದ ಹ್ಯಾಮಿಲ್ಟನ್, ಮರ್ಸಿಡಿಸ್ ಗೆ ಏಳನೇ ಫಾರ್ಮುಲಾ 1 ಪ್ರಶಸ್ತಿ
ಪ್ರಖ್ಯಾತ ಫಾರ್ಮುಲಾ ಒನ್ ರೇಸರ್ ಲೂವಿಸ್ ಹ್ಯಾಮಿಲ್ಟನ್ ಭಾನುವಾರ ಎಮಿಲಿಯಾ ರೊಮಾಗ್ನಾ ಗ್ರ್ಯಾಂಡ್ ಪ್ರಿಕ್ಸ್ ಗೆಲ್ಲುವ ಮೂಲಕ ಮರ್ಸಿಡಿಸ್ ದಾಖಲೆಯ ಏಳನೇ ಬಾರಿಗೆ ಪ್ರಶಸ್ತಿ ತನ್ನದಾಗಿಸಿಕೊಂಡಿತು. 93 ನೇ ಫಾರ್ಮುಲಾ ಒನ್ ಇದಾಗಿದ್ದು ಈ ಜಯದೊಡನೆ ಫೆರಾರಿಯ ಮೈಕೆಲ್ ಶುಮೇಕರ್ ಅವರ ಹೆಸರಲ್ಲಿದ್ದ ದಾಖಲೆ ಅಳಿಸಿಹೋಗಿದೆ.
Published: 02nd November 2020 11:16 AM | Last Updated: 02nd November 2020 01:30 PM | A+A A-

ಲೂವಿಸ್ ಹ್ಯಾಮಿಲ್ಟನ್
ಪ್ರಖ್ಯಾತ ಫಾರ್ಮುಲಾ ಒನ್ ರೇಸರ್ ಲೂವಿಸ್ ಹ್ಯಾಮಿಲ್ಟನ್ ಭಾನುವಾರ ಎಮಿಲಿಯಾ ರೊಮಾಗ್ನಾ ಗ್ರ್ಯಾಂಡ್ ಪ್ರಿಕ್ಸ್ ಗೆಲ್ಲುವ ಮೂಲಕ ಮರ್ಸಿಡಿಸ್ ದಾಖಲೆಯ ಏಳನೇ ಬಾರಿಗೆ ಪ್ರಶಸ್ತಿ ತನ್ನದಾಗಿಸಿಕೊಂಡಿತು. 93 ನೇ ಫಾರ್ಮುಲಾ ಒನ್ ಇದಾಗಿದ್ದು ಈ ಜಯದೊಡನೆ ಫೆರಾರಿಯ ಮೈಕೆಲ್ ಶುಮೇಕರ್ ಅವರ ಹೆಸರಲ್ಲಿದ್ದ ದಾಖಲೆ ಅಳಿಸಿಹೋಗಿದೆ.
ರೆಡ್ ಬುಲ್ ನ ಮ್ಯಾಕ್ಸ್ ವೆರ್ಸ್ಟೆಪೆನ್ ಹ್ಯಾಮಿಲ್ಟನ್ ಅವರನ್ನು ಪ್ರಾರಂಭದಲ್ಲಿ ಹಿಂದಿಕ್ಕಿದರೂ ನಂತರ ಒಕಾನ್ ನಿವೃತ್ತಿ ಹ್ಯಾಮಿಲ್ಟನ್ ಅವರಿಗೆ ವರವಾಗಿತ್ತು,
ಇನ್ನು ವೆರ್ಸ್ಟೆಪೆನ್ ಟೈರ್ ಪಂಕ್ಚರ್ ಆಗಿದ್ದ ಕಾರ್ಣ ಕಣದಿಂದ ಹಿಂದೆ ಸರಿಯಬೇಕಾಯಿತು. ಇದರಿಂದ ಡೇನಿಯಲ್ ರಿಕಾರ್ಡೋ ಮೂರನೇ ಸ್ಥಾನಿಯಾಗಿ ಎರಡನೇ ಬಾರಿ ಫೋಡಿಯಂ ಫಿನಿಶ್ ಮಾಡುವೌದರಲ್ಲಿ ಸಫಲವಾದರು.
ಈ ಗೆಲುವಿನೊಂದಿಗೆ ಮರ್ಸಿಡಿಸ್ ಹೈಬ್ರಿಡ್ ಯುಗದಲ್ಲಿ ನೂರು ರೇಸ್ ಗಳನ್ನು ಗೆದ್ದಂತಾಗಿದ್ದು ಅತ್ಯಂತ ಪ್ರಭಾವಿ ತಂಡವಾಗಿ ಇತಿಹಾಸದಲ್ಲಿ ದಾಖಲಾಗಿದೆ.