ಡಿಸೆಂಬರ್ 17 ರಂದು ಫಿಫಾ ಪ್ರಶಸ್ತಿ ಪ್ರದಾನ ಸಮಾರಂಭ

ಫಿಫಾದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ 17 ರಂದು ವರ್ಚುವಲ್ ಮೂಲಕ ನಡೆಯಲಿದೆ ಎಂದು ಸಾಕರ್ ( ಪುಟ್ಬಾಲ್ ) ಆಡಳಿತ ಮಂಡಳಿ  ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜ್ಯೂರಿಚ್: ಫಿಫಾದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ 17 ರಂದು ವರ್ಚುವಲ್ ಮೂಲಕ ನಡೆಯಲಿದೆ ಎಂದು ಸಾಕರ್ ( ಪುಟ್ಬಾಲ್ ) ಆಡಳಿತ ಮಂಡಳಿ  ತಿಳಿಸಿದೆ.

ಕಳೆದ ವರ್ಷ ಮಿಲನ್ ನಲ್ಲಿ ಫಿಫಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿತ್ತು. ಆದರೆ, ಈ ಬಾರಿ ಕೊರೋನಾ ಸೋಂಕಿನ ಹಾವಳಿ ಹಿನ್ನೆಲೆಯಲ್ಲಿ ವರ್ಚುಯಲ್ ಕಾರ್ಯಕ್ರಮದ ಮೂಲಕ ಸಮಾರಂಭ ನಡೆಯುತ್ತಿದೆ.

ರಾಷ್ಟ್ರೀಯ ತಂಡದ ನಾಯಕರು, ತರಬೇತುದಾರರು ಜೊತೆಗೆ ಮಾಧ್ಯಮಗಳು ಮತ್ತು ಅಭಿಮಾನಿಗಳು ಬುಧವಾರದಿಂದ ಮತದಾನ ಆರಂಭಿಸಿ ಡಿಸೆಂಬರ್ 9ರವರೆಗೆ ಮಾಡಬಹುದಾಗಿದೆ ಎಂದು ಫಿಫಾ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com