ತಾಯಿಯಾಗುತ್ತಿದ್ದಾರೆ ಬಬಿತಾ ಫೊಗಟ್, ಸಂತೋಷದ ಸುದ್ದಿ ಹಂಚಿಕೊಂಡ ಕುಸ್ತಿಪಟು 

ಕುಸ್ತಿಪಟು ಬಬಿತಾ ಫೊಗಟ್ ತಾಯಿಯಾಗುತ್ತಿದ್ದಾರೆ. ಈ ವಿಷಯವನ್ನು ಅವರೇ ಇನ್ಸ್ಟಾಗ್ರಾಂನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

Published: 22nd November 2020 08:52 AM  |   Last Updated: 22nd November 2020 08:56 AM   |  A+A-


Babita Phogat and her husband Vivek Suhag

ಬಬಿತಾ ಫೊಗಟ್ ಮತ್ತು ಆಕೆಯ ಪತಿ ವಿವೇಕ್ ಸುಹಗ್

Posted By : Sumana Upadhyaya
Source : The New Indian Express

ಕುಸ್ತಿಪಟು ಬಬಿತಾ ಫೊಗಟ್ ತಾಯಿಯಾಗುತ್ತಿದ್ದಾರೆ. ಈ ವಿಷಯವನ್ನು ಅವರೇ ಇನ್ಸ್ಟಾಗ್ರಾಂನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ತಮ್ಮ ಮತ್ತು ಪತಿಯ ಜೊತೆಗಿನ ಫೋಟೋವನ್ನು ಶೇರ್ ಮಾಡಿಕೊಂಡಿರುವ ಬಬಿತಾ ಫೊಗಟ್, ತಾಯಿಯಾಗುತ್ತಿರುವ ಕ್ಷಣದ ಹೊಸ ಉತ್ಸಾಹ ಮತ್ತು ಜೀವನದಲ್ಲಿ ಹೊಸ ಅಧ್ಯಾಯವನ್ನು ಎದುರು ನೋಡುತ್ತಿರುವುದಾಗಿ ಬರೆದುಕೊಂಡಿದ್ದಾರೆ.

ಖ್ಯಾತ ಕುಸ್ತಿಪಟು ಮಹಾವೀರ್ ಫೊಗಟ್ ಅವರ ಪುತ್ರಿ ಬಬಿತಾ ಫೊಗಟ್. ಅವರ ಜೀವನಾಧಾರಿತ ಸಿನೆಮಾ ದಂಗಲ್ ಬಂದ ನಂತರ ಗೀತಾ ಮತ್ತು ಬಬಿತಾ ಫೊಗಟ್ ಹೆಸರು ದೇಶಾದ್ಯಂತ ಜನಪ್ರಿಯವಾಯಿತು. ಎಲ್ಲಾ ಸಂಕಷ್ಟಗಳನ್ನು ದಾಟಿ ಅವರ ತಂದೆ ಇಬ್ಬರು ಪುತ್ರಿಯರನ್ನು ಕುಸ್ತಿಪಟುಗಳನ್ನಾಗಿ ಮಾಡಿದ್ದರು.

ಬಬಿತಾ ಫೊಗಟ್ ಕಳೆದ ವರ್ಷ ಆಗಸ್ಟ್ ನಲ್ಲಿ ಬಿಜೆಪಿಗೆ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.

Stay up to date on all the latest ಕ್ರೀಡೆ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp