ಬೇಜವಾಬ್ದಾರಿ ವರ್ತನೆ: ಮುಂಬೈ ಸಿಟಿ ಎಫ್‌ಸಿ ಆಟಗಾರ ಅಹ್ಮದ್ ಜಹೌಹ್‌ಗೆ ಎಐಎಫ್ಎಫ್ ಶಿಸ್ತು ಸಮಿತಿ ಎಚ್ಚರಿಕೆ

ಭವಿಷ್ಯದ ಇಂಡಿಯನ್ ಸೂಪರ್ ಲೀಗ್ ಪಂದ್ಯಗಳಲ್ಲಿ ತನ್ನ ಬೇಜವಾಬ್ದಾರಿ ನಡವಳಿಕೆಯನ್ನು ಪುನರಾವರ್ತಿಸಿದರೆ ಶಾಶ್ವತ ನಿರ್ಬಂಧ ವಿಧಿಸಬೇಕಾಗಬಹುದು ಎಂದು  ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್‌ನ ಶಿಸ್ತು ಸಮಿತಿ  ಮುಂಬೈ ಸಿಟಿ ಎಫ್‌ಸಿ ಆಟಗಾರ ಅಹ್ಮದ್ ಜಹೌಹ್‌ಗೆ ಎಚ್ಚರಿಸಿದೆ.

Published: 24th November 2020 04:24 PM  |   Last Updated: 24th November 2020 04:24 PM   |  A+A-


ಅಹ್ಮದ್ ಜಹೌಹ್

Posted By : Raghavendra Adiga
Source : PTI

ಬಾಂಬೋಲಿಮ್: ಭವಿಷ್ಯದ ಇಂಡಿಯನ್ ಸೂಪರ್ ಲೀಗ್ ಪಂದ್ಯಗಳಲ್ಲಿ ತನ್ನ ಬೇಜವಾಬ್ದಾರಿ ನಡವಳಿಕೆಯನ್ನು ಪುನರಾವರ್ತಿಸಿದರೆ ಶಾಶ್ವತ ನಿರ್ಬಂಧ ವಿಧಿಸಬೇಕಾಗಬಹುದು ಎಂದು  ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್‌ನ ಶಿಸ್ತು ಸಮಿತಿ  ಮುಂಬೈ ಸಿಟಿ ಎಫ್‌ಸಿ ಆಟಗಾರ ಅಹ್ಮದ್ ಜಹೌಹ್‌ಗೆ ಎಚ್ಚರಿಸಿದೆ.

ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ ಆಟಗಾರ್ತಿಖಸ್ಸಾ ಕ್ಯಾಮರಾ, ಅವರ ಅಕುರಿತ ಜಹೌಹ್‌ ಅವರ ಬೇಜವಾದ್ಬಾರಿ ವರ್ತನೆಯನ್ನು ನಿಯಂತ್ರಣ ಸಂಸ್ಥೆಯು ಗಂಭೀರ ಅಪರಾಧವೆಂದು ಪರಿಗಣಿಸಿ, ಮೈದಾನದಲ್ಲಿ ಎದುರಾಳಿಯ ಸುರಕ್ಷತೆಗೆ ಅಪಾಯವನ್ನುಂಟುಮಾಡಿದ್ದಾರೆ ಎಂದು ಹೇಳಿದೆ. ಇದು ಘಟನೆಯ ಕುರಿತಂತೆ ವಿಡಿಯೋ ತುಣುಕನ್ನು ಪರಿಶೀಲನೆಗೆ ಕಳುಹಿಸಿದ ನಂತರ ಸಂಭವಿಸಿದೆ.

ನವೆಂಬರ್ 21 ರಂದು ನಾರ್ತ್ ಈಸ್ಟ್ ಯುನೈಟೆಡ್ 1-0 ಗೋಲುಗಳಿಂದ ಜಯಗಳಿಸಿದ ಪಂದ್ಯದಲ್ಲಿ ಡೈರೆಕ್ಟ್ ರೆಡ್ ಕಾರ್ಡ್ ತೋರಿಸುವ ಮೂಲಕ ಜಹೌಹ್‌ ಅವರನ್ನು ಹೊರಗೆ ಕಳಿಸಲಾಗಿತ್ತು/

"ಮುಂಬೈ ಸಿಟಿ ಎಫ್‌ಸಿ ಮಿಡ್‌ಫೀಲ್ಡರ್ ಅಹ್ಮದ್ ಜಹೌಹ್ ಅವರ ಡೈರೆಕ್ಟ್ ರೆಡ್ ಕಾರ್ಡ್ ಘಟನೆಯನ್ನು ಪರಿಶೀಲಿಸಿದ ನಂತರ ಎಐಎಫ್ಎಫ್ ಶಿಸ್ತು ಸಮಿತಿ .... ಆಟಗಾರನಿಗೆ ಎಚ್ಚರಿಸಿದ್ದು , ಅಂತಹ ಯಾವುದೇ ಕೃತ್ಯವನ್ನು ಪುನರಾವರ್ತಿಸಬಾರದೆಂದು  ಹಾಗಿಒಮ್ಮೆ ಆಗಿದ್ದಾದರೆ ಎಐಎಫ್ಎಫ್ ಶಿಸ್ತು ಸಂಹಿತೆ ಗೆ ಅನುಗುಣವಾಗಿ ನಿರ್ಬಂಧಗಳನ್ನು ವಿಧಿಸಬಹುದು." ಎಂದು ಪ್ರಕಟಣೆ ತಿಳಿಸಿದೆ.

ಸಧ್ಯ ಯಾವ ಶಿಸ್ತುಕ್ರಮವನ್ನೂ  ಜಹೌಹ್‌ ವಿರುದ್ಧ ತೆಗೆದುಕೊಂಡಿಲ್ಲವಾದರೂ ಒಂದು ಪದ್ಯದ ಅಮಾನತಿಗೆ ಸ್ವಯಂ ಒಳಗಾಗುತ್ತಾರೆ. ಮುಂಬೈ ಸಿಟಿ ಎಫ್‌ಸಿಯ ಮುಂದಿನ ಪಂದ್ಯದಲ್ಲಿಆಡಲು ಜುಹೌಹ್ ಅನರ್ಹರಾಗಿದ್ದಾರೆ, ತಂಡವು ಬುಧವಾರ ಮಾರ್ಗೋವಾದಲ್ಲಿ ಗೋವಾ ಎಫ್‌ಸಿ ವಿರುದ್ಧ ಸೆಣಸಲಿದೆ.

Stay up to date on all the latest ಕ್ರೀಡೆ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp