'ನನ್ನ ಹೀರೊ ಇನ್ನಿಲ್ಲ': ಡಿಯಾಗೊ ಮರಡೋನಾ ನಿಧನಕ್ಕೆ ಸೌರವ್ ಗಂಗೂಲಿ ಸೇರಿದಂತೆ ಕ್ರೀಡಾಲೋಕ ಕಂಬನಿ

ಫುಟ್ ಬಾಲ್ ಲೋಕದ ದಂತಕಥೆ ಡಿಯಾಗೊ ಮರಡೊನಾ ನಿಧನಕ್ಕೆ ಕ್ರೀಡಾಲೋಕ ಕಂಬನಿ ಮಿದಿಡಿದೆ.

Published: 26th November 2020 07:45 AM  |   Last Updated: 26th November 2020 12:50 PM   |  A+A-


Saurav Ganguly with Diago Maradona

ಡಿಯಾಗೊ ಮರಡೋನಾ ಜೊತೆ ಸೌರವ್ ಗಂಗೂಲಿ

Posted By : Sumana Upadhyaya
Source : AFP

ನವದೆಹಲಿ: ಫುಟ್ ಬಾಲ್ ಲೋಕದ ದಂತಕಥೆ ಡಿಯಾಗೊ ಮರಡೊನಾ ನಿಧನಕ್ಕೆ ಕ್ರೀಡಾಲೋಕ ಕಂಬನಿ ಮಿದಿಡಿದೆ.

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಟ್ವೀಟ್ ಮಾಡಿ, ನನ್ನ ಹೀರೋ ಇನ್ನಿಲ್ಲ, ನನ್ನ ಹುಚ್ಚು ಮೇಧಾವಿ ಶಾಂತವಾಗಿ ವಿಶ್ರಾಂತಿ ತೆಗೆದುಕೊಳ್ಳಿ, ನಾನು ಫುಟ್ ಬಾಲ್ ನ್ನು ನೋಡುತ್ತಿದ್ದುದೇ ನಿಮಗೋಸ್ಕರ ಎಂದು ಬರೆದುಕೊಂಡಿದ್ದಾರೆ.

ಜಗತ್ತಿನ ಫುಟ್ ಬಾಲ್ ಲೋಕದ ಸರ್ವಶ್ರೇಷ್ಠ ಆಟಗಾರ ಎಂದು ಜನಪ್ರಿಯವಾಗಿರುವ ಅರ್ಜೆಂಟೀನಾದ ಡಿಯಾಗೋ ಮರಡೋನಾ ಅವರ ನಾಯಕತ್ವದಲ್ಲಿ ದೇಶ ವಿಶ್ವಕಪ್ ಗೆದ್ದುಕೊಂಡಿತ್ತು. 

ಭಾರತ ಕ್ರಿಕೆಟ್ ಲೋಕದ ಜೀವಂತ ದಂತಕಥೆ ಸಚಿನ್ ತೆಂಡೂಲ್ಕರ್ ಕೂಡ ಟ್ವೀಟ್ ಮಾಡಿ, ಕ್ರೀಡಾಲೋಕ ಮತ್ತು ಫುಟ್ ಬಾಲ್ ಜಗತ್ತು ಒಬ್ಬ ಉತ್ತಮ ಆಟಗಾರನನ್ನು ಕಳೆದುಕೊಂಡಿದೆ. ನಾವೆಲ್ಲರೂ ನಿಮ್ಮನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.

ಭಾರತ ಕ್ರೀಡಾ ಜಗತ್ತಿನ ಅನೇಕರು ಡಿಯಾಗೊ ಮರಡೊನಾ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

Stay up to date on all the latest ಕ್ರೀಡೆ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp