'ನಾವು ಮುಂದೊಂದು ದಿನ ಆಕಾಶದಲ್ಲಿ ಒಟ್ಟಿಗೆ ಆಟವಾಡಬಹುದು ಎಂದು ಭಾವಿಸುತ್ತೇನೆ': ಗೆಳೆಯ ಡಿಯಾಗೊ ನಿಧನಕ್ಕೆ ಪೀಲೆ ಕಂಬನಿ

ಹೃದಯಾಘಾತದಿಂದ ದಿಢೀರನೆ ನಿಧನ ಹೊಂದಿದ ಅರ್ಜೆಂಟೀನಾ ಫುಟ್ ಬಾಲ್ ಆಟಗಾರ ಡಿಯೋಗ್ ಮರಡೋನಾ ಅವರ ನಿಧನಕ್ಕೆ ಮತ್ತೊಬ್ಬ ಜೀವಂತ ದಂತಕಥೆ ಬ್ರೆಜಿಲ್ ಆಟಗಾರ ಪೀಲೆ ಕಂಬನಿ ಮಿಡಿದಿದ್ದಾರೆ.

Published: 26th November 2020 09:37 AM  |   Last Updated: 26th November 2020 12:50 PM   |  A+A-


Diego Maradona and Pele

ಡಿಯೋಗ್ ಮರಡೋನಾ ಮತ್ತು ಪೀಲೆ(ಸಂಗ್ರಹ ಚಿತ್ರ)

Posted By : Sumana Upadhyaya
Source : PTI

ಸಾವೊ ಪೌಲೊ: ಹೃದಯಾಘಾತದಿಂದ ದಿಢೀರನೆ ನಿಧನ ಹೊಂದಿದ ಅರ್ಜೆಂಟೀನಾ ಫುಟ್ ಬಾಲ್ ಆಟಗಾರ ಡಿಯಾಗೋ ಮರಡೋನಾ ಅವರ ನಿಧನಕ್ಕೆ ಮತ್ತೊಬ್ಬ ಜೀವಂತ ದಂತಕಥೆ ಬ್ರೆಜಿಲ್ ಆಟಗಾರ ಪೀಲೆ ಕಂಬನಿ ಮಿಡಿದಿದ್ದಾರೆ.

ಯಾವತ್ತಾದರೂ ನಾವು ಆಕಾಶದಲ್ಲಿ ಒಟ್ಟಿಗೆ ಫುಟ್ ಬಾಲ್ ಆಡೋಣ ಎಂದು ತಮ್ಮ ಗೆಳೆಯ ಹಾಗೂ ಆಟಗಾರ ಮರಡೋನಾ ಕುರಿತು ಹೇಳಿದ್ದಾರೆ.

ಎಷ್ಟೊಂದು ದುಃಖದ ಸಂಗತಿ, ನಾನು ಒಬ್ಬ ಉತ್ತಮ ಗೆಳೆಯನನ್ನು ಕಳೆದುಕೊಂಡರೆ ಜಗತ್ತು ಶ್ರೇಷ್ಠ ಫುಟ್ ಬಾಲ್ ಆಟಗಾರನನ್ನು ಕಳೆದುಕೊಂಡಿದೆ. ಅವರ ಬಗ್ಗೆ ಹೇಳಲು ಸಾಕಷ್ಟಿದೆ. ಈ ಕ್ಷಣದಲ್ಲಿ ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದಷ್ಟೇ ಹೇಳುತ್ತೇನೆ. ಒಂದು ದಿನ ನಾನು-ನೀನು ಆಕಾಶದಲ್ಲಿ ಜೊತೆಯಾಗಿ ಫುಟ್ ಬಾಲ್ ಆಡಬಹುದು ಎಂದು ಭಾವಿಸುತ್ತೇನೆ ಗೆಳೆಯ ಎಂದು ಪೀಲೆ ಟ್ವೀಟ್ ಮಾಡಿದ್ದಾರೆ.

ಜಗತ್ತು ಕಂಡ ಫುಟ್ ಬಾಲ್ ಆಟಗಾರರಲ್ಲಿ ಪೀಲೆ ಮತ್ತು ಡಿಯಾಗೋ ಮರಡೋನಾ ಅಚ್ಚುಮೆಚ್ಚಿನವರು. ಸರ್ವಶ್ರೇಷ್ಠ ಆಟಗಾರರು, ಇಬ್ಬರಿಗೂ ಒಬ್ಬರನ್ನು ಮತ್ತೊಬ್ಬರು ಕಂಡರೆ ಅಪಾರ ಗೌರವ. ಇಬ್ಬರಿಗೂ ಸುಮಾರು 20 ವರ್ಷಗಳ ವಯಸ್ಸಿನ ಅಂತರವಿದೆ. ದಶಕಗಳಿಂದ ಸ್ನೇಹಿತರಾಗಿರುವ ಇಬ್ಬರೂ ಹಲವು ಉತ್ತಮ ಆಟಗಳನ್ನು ಆಡಿ ಫುಟ್ ಬಾಲ್ ಪ್ರೇಮಿಗಳಿಗೆ ಅಚ್ಚಳಿಯದ ನೆನಪು ಉಳಿಸಿಟ್ಟಿದ್ದಾರೆ.

Stay up to date on all the latest ಕ್ರೀಡೆ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp