ಹೆತ್ತವರ ಸಮಾಧಿ ಬಳಿಯೇ ಬೆಲ್ಲಾ ವಿಸ್ಟಾದ ಸ್ಮಶಾನದಲ್ಲಿ ಮರಡೋನಾ ಅಂತ್ಯಕ್ರಿಯೆ

ಗ್ರೇಟ್ ಅರ್ಜೆಂಟೀನಾದ ಫುಟ್ಬಾಲ್ ಆಟಗಾರ- ದಂತಕತೆ ಡಿಗೋ ಮರಡೋನಾ ಅಂತ್ಯ ಸಂಸ್ಕಾರ ಬ್ಯೂನಸ್ ಬಳಿಯ ಬೆಲ್ಲಾ ವಿಸ್ಟಾ ವಸತಿ ಪ್ರದೇಶದ ಸ್ಮಶಾನದಲ್ಲಿ ನೆರವೇರಿಸಲಾಗಿದೆ ಎಂದು ಟಿಎನ್ ಪ್ರಸಾರ ವರದಿ ಮಾಡಿದೆ.

Published: 27th November 2020 08:47 AM  |   Last Updated: 27th November 2020 01:10 PM   |  A+A-


Diego Maradona

ಡಿಗೋ ಮರಡೋನಾ

Posted By : Manjula VN
Source : UNI

ಬ್ಯೂನಸ್: ಗ್ರೇಟ್ ಅರ್ಜೆಂಟೀನಾದ ಫುಟ್ಬಾಲ್ ಆಟಗಾರ- ದಂತಕತೆ ಡಿಗೋ ಮರಡೋನಾ ಅಂತ್ಯ ಸಂಸ್ಕಾರ ಬ್ಯೂನಸ್ ಬಳಿಯ ಬೆಲ್ಲಾ ವಿಸ್ಟಾ ವಸತಿ ಪ್ರದೇಶದ ಸ್ಮಶಾನದಲ್ಲಿ ನೆರವೇರಿಸಲಾಗಿದೆ ಎಂದು ಟಿಎನ್ ಪ್ರಸಾರ ವರದಿ ಮಾಡಿದೆ.

ಮರಡೋನ ಹೆತ್ತವರನ್ನು ಅಲ್ಲಿಯೇ ಸಮಾಧಿ ಮಾಡಿದ್ದು ಅದಕ್ಕಾಗಿಯೇ ಈ ಸ್ಮಶಾನವನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಮರಡನೋ ಬುಧವಾರ ತಮ್ಮ 60 ನೇ ವಯಸ್ಸಿನಲ್ಲಿ ಹೃದಯ ಸ್ತಂಭನದಿಂದ ನಿಧನರಾಗಿದ್ದರು ಸಾವಿಗೆ ಎರಡು ವಾರಗಳ ಮೊದಲು, ಮರಡೋನಾ ಅವರನ್ನು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಪಡಿಸಿದ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ವಿದಾಯ ಸಮಾರಂಭದ ಸಮಯದಲ್ಲಿ ಘರ್ಷಣೆಗಳು ಮತ್ತು ಗಲಭೆಗೆ ಕಾರಣವಾಗಿ ಒಂಬತ್ತು ಜನರನ್ನು ವಶಕ್ಕೆ ಪಡೆಯಲಾಗಿದೆ ಮತ್ತು ಅನೇಕರು ಗಾಯಗೊಂಡಿದ್ದಾರೆ.

Stay up to date on all the latest ಕ್ರೀಡೆ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp