ಇಂಡಿಯನ್ ಸೂಪರ್ ಲೀಗ್: ಕೇರಳ ಬ್ಲಾಸ್ಟರ್ಸ್- ನಾರ್ಥ್ ಈಸ್ಟ್ ಯುನೈಟೆಡ್ ನಡುವಣ ಪಂದ್ಯ ಡ್ರಾ
ಕೇರಳ ಬ್ಲಾಸ್ಟರ್ಸ್ ಪರ ಸರ್ಗಿಯೋ ಸಿಡೊಂಚ (5ನೇ ನಿಮಿಷ) ಹಾಗೂ ಗ್ಯಾರಿ ಹೂಪರ್ (45ನೇ ನಿಮಿಷ) ಗಳಿಸಿದ ಗೋಲು ಹಾಗೂ ದ್ವಿತಿಯಾರ್ಧದಲ್ಲಿ ದಿಟ್ಟ ಹೋರಾಟ ನೀಡಿದ ನಾರ್ಥ್ ಈಸ್ಟ್ ಯುನೈಟೆಡ್...
Published: 27th November 2020 01:57 AM | Last Updated: 27th November 2020 01:09 PM | A+A A-

ಸಮಬಲ ಸಾಧಿಸಿದ ಕೇರಳ ಬ್ಲಾಸ್ಟರ್ಸ್-ನಾರ್ಥ್ ಈಸ್ಟ್ ಯುನೈಟೆಡ್
ಗೋವಾ: ಕೇರಳ ಬ್ಲಾಸ್ಟರ್ಸ್ ಪರ ಸರ್ಗಿಯೋ ಸಿಡೊಂಚ (5ನೇ ನಿಮಿಷ) ಹಾಗೂ ಗ್ಯಾರಿ ಹೂಪರ್ (45ನೇ ನಿಮಿಷ) ಗಳಿಸಿದ ಗೋಲು ಹಾಗೂ ದ್ವಿತಿಯಾರ್ಧದಲ್ಲಿ ದಿಟ್ಟ ಹೋರಾಟ ನೀಡಿದ ನಾರ್ಥ್ ಈಸ್ಟ್ ಯುನೈಟೆಡ್ ಪರ ಕ್ವಿಸ್ಸಿ ಅಪಿಯ್ಯ (51ನೇ ನಿಮಿಷ) ಮತ್ತು ಇಡ್ರಿಸ್ಸಾ ಸಿಲ್ಲಾ (90ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಪಂದ್ಯ 2-2 ಗೋಲುಗಳಿಂದ ಸಮಬಲಗೊಂಡು ತಂಡಗಳು ಅಂಕ ಹಂಚಿಕೊಂಡವು.
ಕೇರಳ ಬ್ಲಾಸ್ಟರ್ಸ್ 2-0 ಮುನ್ನಡೆ: ಸರ್ಗಿಯೊ ಸಿಡೋಂಚಾ (5ನೇ ನಿಮಿಷ) ಹೆಡರ್ ಮೂಲಕ ಗಳಿಸಿದ ಗೋಲು ಹಾಗೂ ಗ್ಯಾರಿ ಹೂಪರ್ (45ನೇ ನಿಮಿಷ) ಪೆನಾಲ್ಟಿ ಮೂಲಕ ಗಳಿಸಿದ ಗೋಲಿನ ನೆರವಿನಿಂದ ಕೇರಳ ಬ್ಲಾಸ್ಟರ್ಸ್ ತಂಡ ನಾರ್ಥ್ ಈಸ್ಟ್ ಯುನೈಟೆಡ್ ವಿರುದ್ಧದ ಹೀರೋ ಇಂಡಿಯನ್ ಸೂಪರ್ ಲೀಗ್ ಪಂದ್ಯದ ಪ್ರಥಮಾರ್ಧದಲ್ಲಿ 2-0 ಗೋಲಿನಿಂದ ಮುನ್ನಡೆ ಸಾಧಿಸಿದೆ.
ನಾರ್ಥ್ ಈಸ್ಟ್ ತಂಡದ ಡಿಫೆನ್ಸ್ ವಿಭಾಗ ದರ್ಬಲಗೊಂಡಿರುವುದು ಪಂದ್ಯದುದ್ದಕ್ಕೂ ಕಂಡುಬಂತು. ಗೋಲು ಗಳಿಸುವ ಅವಕಾಶಗಳು ನಿರ್ಮಾಣಗೊಂಡರೂ ನಾರ್ಥ್ ಈಸ್ಟ್ ಅದನ್ನು ಗೋಲಾಗಿಸುವಲ್ಲಿ ವಿಫಲವಾಗಿತ್ತು. ಪಂದ್ಯಕ್ಕೂ ಮುನ್ನ ನಿನ್ನೆ ನಿಧನರಾದ ಅರ್ಜೆಂಟೀನಾದ ಫುಟ್ಬಾಲ್ ದಿಗ್ಗಜ ಡಿಗೋ ಮರಡೋನಾ ಅವರಿಗೆ ಮೌನಾಚರಣೆಯ ಮೂಲಕ ಅಂತಿಮ ನಮನ ಸಲ್ಲಿಸಲಾಯಿತು.