ಭಜರಂಗ್ ಗೆ ಯುಎಸ್ ನಲ್ಲಿ ತರಬೇತಿ ಪಡೆಯಲು ಅವಕಾಶ 

ಟೋಕಿಯೊ ಒಲಿಂಪಿಕ್ಸ್ ಗೆ  ಅರ್ಹತೆ ಪಡೆದ ಮತ್ತು ಪದಕಕ್ಕೆ ಪ್ರಬಲ ಸ್ಪರ್ಧಿಯಾಗಿ ಪರಿಗಣಿಸಲ್ಪಟ್ಟ ಕುಸ್ತಿಪಟು ಭಜರಂಗ್ ಪುನಿಯಾ ಅವರಿಗೆ ಯುಎಸ್ ನಲ್ಲಿ ಒಂದು ತಿಂಗಳ ತರಬೇತಿ ಪಡೆಯಲು ಅವಕಾಶ ನೀಡಲಾಗಿದೆ.
ಭಜರಂಗ್ ಪುನಿಯಾ
ಭಜರಂಗ್ ಪುನಿಯಾ

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಗೆ  ಅರ್ಹತೆ ಪಡೆದ ಮತ್ತು ಪದಕಕ್ಕೆ ಪ್ರಬಲ ಸ್ಪರ್ಧಿಯಾಗಿ ಪರಿಗಣಿಸಲ್ಪಟ್ಟ ಕುಸ್ತಿಪಟು ಭಜರಂಗ್ ಪುನಿಯಾ ಅವರಿಗೆ ಯುಎಸ್ ನಲ್ಲಿ ಒಂದು ತಿಂಗಳ ತರಬೇತಿ ಪಡೆಯಲು ಅವಕಾಶ ನೀಡಲಾಗಿದೆ.ಮಿಷನ್ ಒಲಿಂಪಿಕ್ ಕೋಶದ 50ನೇ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 

ಈ ಶಿಬಿರವು ಬರುವ ವರ್ಷದ ಡಿಸೆಂಬರ್ 4ರಿಂದ ಜನವರಿ 3, 2021ರವರೆಗೆ ಮಿಚಿಗನ್ ನ ಕ್ಲಿಫ್ ಕೀನ್ ವ್ರೆಸ್ಟಿಂಗ್ ಕ್ಲಬ್ ನಲ್ಲಿ ನಡೆಯಲಿದೆ.

ಕೊರೋನಾವೈರಸ್ ನಂತರ , ತರಬೇತಿ ಚಟುವಟಿಕೆಗಲು ಸೋನೆಪತ್ ನಲ್ಲಿನ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ಪ್ರಾರಂಭವಾದವು. ಭಜರಂಗ್ ತಮ್ಮ ತರಬೇತುದಾರರಾದ ಎಂಜರಿಯೋಸ್ ಬೆಂಟಿನಿಡಿಸ್ ಮತ್ತು ಫಿಸಿಯೋ ಧನಂಜಯ್ ಅವರೊಂದಿಗೆ ಯುಎಸ್ ಪ್ರವಾಸ ಮಾಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com