ಕುಸ್ತಿಪಟುಗಳಾದ ನರಸಿಂಗ್, ಗುರ್‌ಪ್ರೀತ್ ಗೆ ಕೊರೋನಾ ಸೋಂಕು ದೃಢ
ಕುಸ್ತಿಪಟುಗಳಾದ ನರಸಿಂಗ್ ಯಾದವ್ (74 ಕೆಜಿ ಫ್ರೀಸ್ಟೈಲ್), ಗುರ್‌ಪ್ರೀತ್ ಸಿಂಗ್ (77 ಕೆಜಿ ಗ್ರೀಕೋ-ರೋಮನ್) ಮತ್ತು ಫಿಸಿಯೋಥೆರಪಿಸ್ಟ್ ವಿಶಾಲ್ ರೈ ಅವರುಗಳಿಗೆ ಕೊರೋನಾವೈರಸ್ ಸೋಂಕು ಖಚಿತವಾಗಿದೆ.
Published: 29th November 2020 12:44 PM | Last Updated: 29th November 2020 12:44 PM | A+A A-

ಗುರ್‌ಪ್ರೀತ್ ಸಿಂಗ್ ನರಸಿಂಗ್ ಯಾದವ್
ಸೋನೇಪತ್(ಹರಿಯಾಣ): ಕುಸ್ತಿಪಟುಗಳಾದ ನರಸಿಂಗ್ ಯಾದವ್ (74 ಕೆಜಿ ಫ್ರೀಸ್ಟೈಲ್), ಗುರ್‌ಪ್ರೀತ್ ಸಿಂಗ್ (77 ಕೆಜಿ ಗ್ರೀಕೋ-ರೋಮನ್) ಮತ್ತು ಫಿಸಿಯೋಥೆರಪಿಸ್ಟ್ ವಿಶಾಲ್ ರೈ ಅವರುಗಳಿಗೆ ಕೊರೋನಾವೈರಸ್ ಸೋಂಕು ಖಚಿತವಾಗಿದೆ.
ಮೂವರಿಗೂ ಯಾವ ರೋಗಲಕ್ಷಣಗಳಿಲ್ಲ ಮುನ್ನೆಚ್ಚರಿಕೆ ಕ್ರಮವಾಗಿ ಸೋನೇಪತ್ ನ ಭಗವಾನ್ ಮಹಾವೀರ್ ದಾಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ದೀಪಾವಳಿ ವಿರಾಮದ ನಂತರ ಕುಸ್ತಿಪಟುಗಳು ಸೋನೇಪತ್ ನ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಸ್‌ಎಐ) ಪ್ರಾದೇಶಿಕ ಕೇಂದ್ರದಲ್ಲಿನ ರಾಷ್ಟ್ರೀಯ ಶಿಬಿರಕ್ಕೆ ಮತ್ತೆ ಹಾಜರಾಗಿದ್ದರು. ಅಲ್ಲದೆ ಎಸ್‌ಎಐ ವರದಿಯಂತೆ ಸಂಪರ್ಕತಡೆಯನ್ನು ಹೊಂದಿದ್ದರು. ಎಸ್‌ಎಐ ಸ್ಥಾಪಿಸಿದ ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಗಳ ಮೇಲೆ ನಿಗಾ ಇರಿಸಿ, ಅವುಗಳನ್ನು 6 ನೇ ದಿನದಂದು (ಶುಕ್ರವಾರ ನವೆಂಬರ್ 27) ಪರೀಕ್ಷಿಸಲಾಗಿ ಶನಿವಾರ ವರದಿ ಬಂದಿದೆ.
ಈ ಹಿಂದಿನ ದಿನ ಯುಎಸ್ ನಲ್ಲಿ ಕುಸ್ತಿಪಟು ಭಜರಂಗ್ ಪುನಿಯಾ ಅವರಿಗೆ ಒಂದು ತಿಂಗಳ ತರಬೇತಿ ಶಿಬಿರದಲ್ಲಿ ಬಾಗವಹಿಸಲು ಒಪ್ಪಿಗೆ ಸೂಚಿಸಲಾಗಿತ್ತು. ನವೆಂಬರ್ 26 ರಂದು ನಡೆದ 50 ನೇ ಮಿಷನ್ ಒಲಿಂಪಿಕ್ ಸೆಲ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಶಿಬಿರವು ಡಿಸೆಂಬರ್ 4 ರಿಂದ ಜನವರಿ 3 ರವರೆಗೆ ಅಮೆರಿಕದ ಮಿಚಿಗನ್‌ನ ಕ್ಲಿಫ್ ಕೀನ್ ವ್ರೆಸ್ಲಿಂಗ್ ಕ್ಲಬ್‌ನಲ್ಲಿ ನಡೆಯಲಿದೆ.
ಕೊರೋನಾ ಲಾಕ್‌ಡೌನ್ ನಂತರ ತರಬೇತಿ ಶಿಬಿರಗಳನ್ನು ಪುನರಾರಂಭಿಸಿದ ನಂತರ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಸ್‌ಎಐ) ಸೋನೇಪತ್ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ಭಜರಂಗ್, ತನ್ನ ತರಬೇತುದಾರ ಎಂಜಾರಿಯೊಸ್ ಬೆಂಟಿನಿಡಿಸ್ ಮತ್ತು ಫಿಸಿಯೋ ಧನಂಜಯ್ ಅವರೊಂದಿಗೆ ಯುಎಸ್‌ಎಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಎಸ್‌ಎಐ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.