ಛತ್ತೀಸ್ ಗಡ: ನಕ್ಸಲ್ ಪೀಡಿತ ಪ್ರದೇಶದ ಬಾಲಕಿಯರು ರಾಷ್ಟ್ರೀಯ ಕಿರಿಯರ ಹಾಕಿ ತರಬೇತಿ ಶಿಬಿರಕ್ಕೆ ಆಯ್ಕೆ

ಛತ್ತೀಸ್ ಗಢದ ನಕ್ಸಲ್ ಪ್ರೀಡಿತ ಪ್ರದೇಶದಲ್ಲಿ ಸರಿಯಾದ ಮೈದಾನವಿಲ್ಲದೆ ಹೆಲಿಪ್ಯಾಡ್ ನಲ್ಲಿ ತರಬೇತಿ ಪಡೆದ  9 ಬಾಲಕಿಯರು ರಾಷ್ಟ್ರೀಯ ಕಿರಿಯರ ಹಾಕಿ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಯಪುರ: ಛತ್ತೀಸ್ ಗಢದ ನಕ್ಸಲ್ ಪ್ರೀಡಿತ ಪ್ರದೇಶದಲ್ಲಿ ಸರಿಯಾದ ಮೈದಾನವಿಲ್ಲದೆ ಹೆಲಿಪ್ಯಾಡ್ ನಲ್ಲಿ ತರಬೇತಿ ಪಡೆದ  9 ಬಾಲಕಿಯರು ರಾಷ್ಟ್ರೀಯ ಕಿರಿಯರ ಹಾಕಿ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ.

ಕೊಂಡಗಾಂವ್ ಜಿಲ್ಲೆಯಲ್ಲಿ  ಮಾವೋವಾದಿ ವಿರೋಧಿ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿರುವ  ಅರೆಸೈನಿಕ ಪಡೆ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ)  14 ರಿಂದ 17 ವರ್ಷದೊಳಗಿನ  ಬಾಲಕಿಯರಿಗೆ ತರಬೇತಿ ನೀಡಿದೆ.

41 ನೇ ಬೆಟಾಲಿಯನ್ ನಡೆಸುತ್ತಿರುವ ಐಟಿಬಿಪಿ ಅಕಾಡೆಮಿಯಲ್ಲಿ ಹಾಕಿ ತರಬೇತಿಯನ್ನು ಪ್ರಾರಂಭಿಸಿದ ಒಂಬತ್ತು ಬುಡಕಟ್ಟು ಬಾಲಕಿಯರು  ಹಾಕಿ ಇಂಡಿಯಾ ಉಪ  ಜ್ಯೂನಿಯರ್ ಮತ್ತು ಕಿರಿಯರ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ ಎಂದು ಹಿರಿಯ ಐಟಿಬಿಪಿ ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಮಾರ್ದಪಾಲ್ ಪ್ರದೇಶದ ಕನ್ಯಾ ಆಶ್ರಮದಲ್ಲಿ ವ್ಯಾಸಂಗ ಮಾಡುತ್ತಿರುವ ಈ ಬಾಲಕಿಯರಿಗೆ 2016ರಲ್ಲಿ ಪಂದ್ಯದ ಬಗ್ಗೆ ಬಲವಂತದಿಂದ ಪ್ರೋತ್ಸಾಹಿಸಲಾಯಿತು. ಈ ತಿಂಗಳ ನಂತರ ತರಬೇತಿ ಆರಂಭವಾಗಲಿದೆ. ಇತ್ತೀಚಿಗೆ ಹಾಕಿ ಇಂಡಿಯಾದಿಂದ ಈ ಬಾಲಕಿಯರಿಗೆ ಶಾಶ್ವತವಾದ ಗುರುತಿನ ಚೀಟಿಯನ್ನು ವಿತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಉತ್ತಮವಾದ ಸೌಕರ್ಯ ಹಾಗೂ ತರಬೇತಿ ನೀಡಿದರೆ ಈ ಬಾಲಕಿಯರು ಅತ್ಯದ್ಬುತ ಸಾಧನೆ ಮಾಡುವುದರಲ್ಲಿ ಅನುಮಾನವಿಲ್ಲ ಎಂದು ತರಬೇತುದಾರ ಮತ್ತು ಐಟಿಬಿಪಿ ಹೇಡ್ ಕಾನ್ಸ್ ಟೇಬಲ್ ಸೂರ್ಯ ಸ್ಮಿತ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com