ಫ್ರೆಂಚ್ ಓಪನ್ ಟೆನಿಸ್: ಭಾನುವಾರ ಫೈನಲ್ ನಲ್ಲಿ ಜೊಕೊವಿಕ್, ನಡಾಲ್ ಮುಖಾಮುಖಿ

ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ ಸೆಮಿಫೈನಲ್ ನಲ್ಲಿ ಸ್ಟೆಫಾನೊಸ್ ಸಿಟ್ಸಿಪಾಸ್ ವಿರುದ್ಧ ಗೆಲುವು ಸಾಧಿಸಿದ ವಿಶ್ವದ ನಂಬರ್ 1 ಆಟಗಾರ ನೊವಾಕ್ ಜೊಕೊವಿಕ್ ಮತ್ತು  ರಾಫೆಲ್ ನಡಾಲ್ ಫೈನಲ್ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿದ್ದಾರೆ.

Published: 10th October 2020 05:43 PM  |   Last Updated: 10th October 2020 06:18 PM   |  A+A-


Novak_Djokovic_to_face_Rafael_Nadal1

ನಡಾಲ್, ಜೊಕೊವಿಕ್

Posted By : Nagaraja AB
Source : The New Indian Express

ಪ್ಯಾರಿಸ್: ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ ಸೆಮಿಫೈನಲ್ ನಲ್ಲಿ ಸ್ಟೆಫಾನೊಸ್ ಸಿಟ್ಸಿಪಾಸ್ ವಿರುದ್ಧ ಗೆಲುವು ಸಾಧಿಸಿದ ವಿಶ್ವದ ನಂಬರ್ 1 ಆಟಗಾರ ನೊವಾಕ್ ಜೊಕೊವಿಕ್ ಮತ್ತು  ರಾಫೆಲ್ ನಡಾಲ್ ಫೈನಲ್ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿದ್ದಾರೆ.

ಆದರೂ, ಎಲ್ಲರೂ ಕುತೂಹಲದಿಂದ ಕಾಯುತ್ತಿರುವ ಭಾನುವಾರ ನಡೆಯಲಿರುವ ಫೈನಲ್ ಪಂದ್ಯ ತಮ್ಮ ಜೀವನದಲ್ಲಿ ದೊಡ್ಡ ಪಂದ್ಯ ಇಲ್ಲ ಎಂದು ನೊವಾಕ್ ಜೊಕೊವಿಕ್ ಹೇಳಿದ್ದಾರೆ.

ನೊವಾಕ್ ಜೊಕೊವಿಕ್ ಫ್ಯಾಪಿಸ್ ಸ್ಟೆಫಾನೊಸ್ ಸಿಟ್ಸಿಪಾಸ್ ವಿರುದ್ಧ 6-3, 6-2, 5-7, 4-6, 6-1 ಸೆಟ್ ಗಳಲ್ಲಿ ಗೆಲುವು ಸಾಧಿಸಿದರು. 

12 ಬಾರಿ ಚಾಂಪಿಯನ್ ಆಗಿರುವ ಜೊಕೊವಿಕ್, ಅರ್ಜೆಂಟೀನಾದ ಡಿಗೊ ಸ್ಟರ್ಟಜಮನ್ ವಿರುದ್ಧ 6-3, 7-6 (7-0) ಸೆಟ್  ಗಳಲ್ಲಿ ಜಯ ಗಳಿಸಿದರು. ಭಾನುವಾರ, ಜೊಕೊವಿಕ್ 18 ನೇ ಓಪನ್ ಟೂರ್ನಿ ಗೆಲ್ಲಬಹುದು ಮತ್ತು ಅರ್ಧಶತಕದಲ್ಲಿ ನಾಲ್ಕು ಸ್ಲ್ಯಾಮ್‌ಗಳನ್ನು ಎರಡು ಬಾರಿ ಗೆದ್ದ ಮೊದಲ ವ್ಯಕ್ತಿ ಎನಿಸಬಹುದು.

ಮತ್ತೊಂದೆಡೆ ರೋಜರ್ ಫೆಡರರ್ ದಾಖಲೆ ಸರಿಗಟ್ಟಲು ರಾಫೆಲ್ ನಡಾಲ್ ಗೆ ಇನ್ನೊಂದೇ ಹೆಜ್ಜೆ ಮಾತ್ರ ಇದೆ. ರೋಜರ್ ಫೆಡರ್ 20 ಬಾರಿ ಗ್ರಾಂಡ್ ಸ್ಲಾಮ್ ಬಿರುದು ಗೆದ್ದ ಖ್ಯಾತಿ ಪಡೆದುಕೊಂಡಿದ್ದಾರೆ. ರೋಲ್ಯಾಂಡ್ ಗ್ಯಾರೊಸ್‌ನಲ್ಲಿ 15 ವರ್ಷಗಳಲ್ಲಿ ನಡಾಲ್ ಅವರನ್ನು ಸೋಲಿಸಿದ ಇಬ್ಬರು ಪುರುಷರಲ್ಲಿ ಜೊಕೊವಿಕ್ ಒಬ್ಬರಾಗಿದ್ದಾರೆ.

ಭಾನುವಾರ ನಡಾಲ್ ಜೊತೆಯಲ್ಲಿರುವ ನಡೆಯಲಿರುವ ಪಂದ್ಯ ದೊಡ್ಡ ಪಂದ್ಯ ಎನಿಸುವುದಿಲ್ಲ, ಎಂದಿನಂತೆ ಆ ಪಂದ್ಯದಲ್ಲೂ ಆಡುತ್ತೇನೆ . ವಿಂಬಲ್ಡನ್ ಯಾವಾಗಲೂ ನಾನು ಮಗುವಾಗಿದ್ದಾಗಲೂ ವಿಂಬಲ್ಡನ್ ಗೆಲ್ಲಲು ಬಯಸಿದ್ದೆ ಮತ್ತು ಗೆಲ್ಲುವ ಕನಸು ಕಂಡಿದ್ದೆ. ಅದು ಬಹುಶಃ ಎದ್ದು ಕಾಣುತ್ತದೆ ಎಂದು ಜೊಕೊವಿಕ್ ಹೇಳಿದ್ದಾರೆ.

Stay up to date on all the latest ಕ್ರೀಡೆ news
Poll
Marraige

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ ಹೆಚ್ಚಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp