ಮಹಾಮಾರಿ ಕೊರೋನಾ ಹಿನ್ನೆಲೆ ಜೂನಿಯರ್ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ ರದ್ದು

ಈ ವರ್ಷ ಬೆಲ್‌ಗ್ರೇಡ್‌ನಲ್ಲಿ ನಡೆಯಬೇಕಿದ್ದ ಜೂನಿಯರ್ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ ಅನ್ನು ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ರದ್ದುಪಡಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಈ ವರ್ಷ ಬೆಲ್‌ಗ್ರೇಡ್‌ನಲ್ಲಿ ನಡೆಯಬೇಕಿದ್ದ ಜೂನಿಯರ್ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ ಅನ್ನು ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ರದ್ದುಪಡಿಸಲಾಗಿದೆ.

ಚಾಂಪಿಯನ್‌ಶಿಪ್ ನಡೆಸಲು ಪ್ರಸ್ತುತ ಪರಿಸ್ಥಿತಿಗಳು ಅನುಕೂಲಕರವಾಗಿಲ್ಲದ ಕಾರಣ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್ ಅನ್ನು ರದ್ದುಗೊಳಿಸಲಾಗುತ್ತಿದೆ ಎಂದು ವಿಶ್ವ ಕುಸ್ತಿ ಸಂಸ್ಥೆ ತನ್ನ ಸಭೆಯಲ್ಲಿ ನಿರ್ಧರಿಸಿದೆ.

ಡಿಸೆಂಬರ್ 12-20ರವರೆಗೆ ಕುಸ್ತಿ ಚಾಂಪಿಯನ್ ಶಿಪ್ ನಡೆಯಬೇಕಿತ್ತು. ಇನ್ನು ಜೂನಿಯರ್ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ರದ್ದು ಮಾಡಿರುವ ವಿಶ್ವ ಕುಸ್ತಿ ಸಂಸ್ಥೆ ಸಿನಿಯರ್ ಕುಸ್ತಿ ಚಾಂಪಿಯನ್ ಶಿಪ್ ನಡೆಸಲು ಮುಂದಾಗಿದೆ. 

ಸಿರಿಯರ್ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ಗೆ ಸುಮಾರು 70ರಷ್ಟು ದೇಶಗಳು ಒಪ್ಪಿಗೆ ಸೂಚಿಸಿರುವುದರಿಂದ ಈ ಟೂರ್ನಿಯನ್ನು ವಿಶ್ವ ಕುಸ್ತಿ ಸಂಸ್ಥೆ ಆಯೋಜಿಸಲಿದೆ. ಅದು ಅಂದಿನ ಪರಿಸ್ಥಿತಿ ನೋಡಿಕೊಂಡು. ಒಂದು ವೇಳೆ ಕೊರೋನಾ ಪ್ರಭಾವ ಇದೇ ರೀತಿ ಇದ್ದರೆ ಈ ಟೂರ್ನಿಯನ್ನು ಕೈಬಿಡುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com