ಹಾಕಿ ಇಂಡಿಯಾದಿಂದ ಆನ್‌ಲೈನ್ ಕೋಚಿಂಗ್ ಕೋರ್ಸ್

ಆನ್‌ಲೈನ್‌ನಲ್ಲಿ ಕೋಚಿಂಗ್ ಎಜುಕೇಶನ್ ಪಾತ್‌ವೇ ಲೆವೆಲ್ 'ಬೇಸಿಕ್' ಕೋರ್ಸ್ ಆರಂಭಿಸುವುದಾಗಿ ಹಾಕಿ ಇಂಡಿಯಾ ಶುಕ್ರವಾರ ಪ್ರಕಟಿಸಿದೆ.

Published: 16th October 2020 05:02 PM  |   Last Updated: 16th October 2020 05:02 PM   |  A+A-


Sultan Azlan Shah Cup Hockey Tournament

ಸಾಂದರ್ಭಿಕ ಚಿತ್ರ

Posted By : Lingaraj Badiger
Source : PTI

ನವದೆಹಲಿ: ಆನ್‌ಲೈನ್‌ನಲ್ಲಿ ಕೋಚಿಂಗ್ ಎಜುಕೇಶನ್ ಪಾತ್‌ವೇ ಲೆವೆಲ್ 'ಬೇಸಿಕ್' ಕೋರ್ಸ್ ಆರಂಭಿಸುವುದಾಗಿ ಹಾಕಿ ಇಂಡಿಯಾ ಶುಕ್ರವಾರ ಪ್ರಕಟಿಸಿದೆ.

ಹಾಕಿ ಇಂಡಿಯಾ ಇದೇ ಮೊದಲ ಬಾರಿಗೆ ಮುಕ್ತ ವೇದಿಕೆಯ ಮೂಲಕ ಅರ್ಜಿ ಆಹ್ವಾನಿಸಿದ್ದು, ಆಸಕ್ತ ತರಬೇತುದಾರರು ಅರ್ಜಿ ಸಲ್ಲಿಸಬಹುದಾಗಿದೆ.

ಆನ್‌ಲೈನ್ ಕೋರ್ಸ್‌ಗೆ ಕೇವಲ 60 ಸೀಟ್ ಗಳು ಮಾತ್ರಲಭ್ಯವಿದ್ದು, ಮೊದಲು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು ಎಂದು ಹಾಕಿ ಇಂಡಿಯಾ ತಿಳಿಸಿದೆ.

ಅರ್ಜಿ ಸಲ್ಲಿಸಲು, ಆಸಕ್ತ ಅರ್ಜಿದಾರರಿಗೆ ಕನಿಷ್ಠ 3 ವರ್ಷಗಳ ಕಾಲ ಜಿಲ್ಲೆ, ಶಾಲೆ ಅಥವಾ ವಿಶ್ವವಿದ್ಯಾಲಯದ ಮಟ್ಟದಲ್ಲಿ ಹಾಕಿ ತಂಡವನ್ನು ತರಬೇತುಗೊಳಿಸಿರಬೇಕು ಅಥವಾ ರಾಷ್ಟ್ರೀಯ ಮಟ್ಟದಲ್ಲಿ ಆಡಿರಬೇಕು/ ಅಖಿಲ ಭಾರತ ವಿಶ್ವವಿದ್ಯಾಲಯ ಮಟ್ಟದಲ್ಲಿ ಕನಿಷ್ಠ 3 ವರ್ಷಗಳವರೆಗೆ ಆಡಿರಬೇಕು ಎಂದು ಮಾಧ್ಯಮ ಪ್ರಕಟಣೆ ತಿಳಿಸಿದೆ.

Stay up to date on all the latest ಕ್ರೀಡೆ news
Poll
Rohit Sharma

ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯು ಟೀಮ್ ಇಂಡಿಯಾದ ಸಾಧನೆಯ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp