ನನ್ನ ಪೋಷಕರ ಜೊತೆ ಯಾವುದೇ ರೀತಿಯ ಮನಸ್ತಾಪ ಇಲ್ಲ, ಸುಳ್ಳು ಸುದ್ದಿ ಹರಡಿದವರ ವಿರುದ್ಧ ಕ್ರಮ: ಪಿವಿ ಸಿಂಧು

ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ತಮ್ಮ ಪೋಷಕರ ಜೊತೆ ಮನಸ್ತಾಪ ಮಾಡಿಕೊಂಡಿದ್ದು ಹೀಗಾಗಿ ಅವರು ನ್ಯಾಷನಲ್ ಕ್ಯಾಂಪ್ ತೊರೆದು ಇಂಗ್ಲೆಂಡ್ ಗೆ ತೆರಳಿದ್ದಾರೆ ಎನ್ನುವ ವಿಚಾರ ಸಾಕಷ್ಟು ಚರ್ಚೆಯಾಗಿದೆ.

Published: 20th October 2020 03:13 PM  |   Last Updated: 20th October 2020 03:24 PM   |  A+A-


Sindhu

ಪಿವಿ ಸಿಂಧು

Posted By : Vishwanath S
Source : PTI

ಹೈದರಾಬಾದ್: ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ತಮ್ಮ ಪೋಷಕರ ಜೊತೆ ಮನಸ್ತಾಪ ಮಾಡಿಕೊಂಡಿದ್ದು ಹೀಗಾಗಿ ಅವರು ನ್ಯಾಷನಲ್ ಕ್ಯಾಂಪ್ ತೊರೆದು ಇಂಗ್ಲೆಂಡ್ ಗೆ ತೆರಳಿದ್ದಾರೆ ಎನ್ನುವ ವಿಚಾರ ಸಾಕಷ್ಟು ಚರ್ಚೆಯಾಗಿದೆ. ಇದರ ಮಧ್ಯೆ ಇದೆಲ್ಲಾ ಸುಳ್ಳು ಸುದ್ದಿ ಎಂದು ಸಿಂಧು ಸ್ಪಷ್ಟನೆ ನೀಡಿದ್ದಾರೆ. 

ಪಿವಿ ಸಿಂಧು ಅವರು ಕೋಚ್ ಪುಲ್ಲೇಲಾ ಗೋಪಿಚಂದ್ ಜೊತೆ ಹಾಗೂ ಪೋಷಕರ ಜೊತೆ ಮನಸ್ತಾಪ ಇದೆ ಎನ್ನುವ ಸುದ್ದಿ ಹರಿದಾಡಿತ್ತು. ಹೀಗಾಗಿ ಇಂದು ಸ್ಪಷ್ಟನೆ ನೀಡಿರುವ ಅವರು, ನಾನು ಕೆಲ ದಿನಗಳ ಹಿಂದೆ ಲಂಡನ್ ಗೆ ಬಂದಿದ್ದೇನೆ. ಪುನಶ್ಚೇತನ ಹಾಗೂ ಪೌಷ್ಠಿಕ ವೃದ್ಧಿ ಕೇಂದ್ರಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಇನ್ನು ನನಗಾಗಿ ಎಲ್ಲವನ್ನು ತ್ಯಾಗಿ ಮಾಡಿರುವ ಪೋಷಕರ ವಿರುದ್ಧ ನಾನು ಯಾಕೆ ಮುನಿಸಿಕೊಳ್ಳಲಿ ಎಂದು ಸಿಂಧು ಪ್ರಶ್ನಿಸಿದ್ದಾರೆ. 

ವಿಶ್ವ ಚಾಂಪಿಯನ್ ಪಿ.ವಿ. ಸಿಂಧೂ ಒಲಿಂಪಿಕ್ ರಾಷ್ಟ್ರೀಯ ಶಿಬಿರ ತ್ಯಜಿಸಿ ದಿಢೀರ್  ಇಂಗ್ಲೆಂಡ್‌ಗೆ ತೆರಳಿರುವುದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. 

ಒಲಿಂಪಿಕ್ ಕ್ರೀಡಾಕೂಟಕ್ಕಾಗಿ ನಡೆಯುತ್ತಿರುವ ರಾಷ್ಟ್ರೀಯ ಶಿಬಿರವನ್ನು ತ್ಯಜಿಸಿರುವ ಸಿಂಧೂ ಈಗ ಲಂಡನ್‍ನಲ್ಲಿದ್ದಾರೆ. ತಮ್ಮ ಈ ನಿರ್ಧಾರಕ್ಕೆ ವೈಯಕ್ತಿಕ ಕಾರಣವನ್ನು ಸಿಂಧೂ ನೀಡಿದ್ಧಾರೆ. 

ಚೇತರಿಕೆ ಮತ್ತು ಪುಷ್ಟಿಗಾಗಿ ತಾವು ಇಂಗ್ಲೆಂಡ್‌ಗೆ ತೆರಳಿರುವುದಾಗಿ ಇನ್‍ಸ್ಟಾಗ್ರಾಂ ಹಾಗೂ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ. ಅವರು 10 ವಾರಗಳ ಕಾಲ ಬ್ರಿಟನ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಇನ್ನೊಂದು ಮೂಲಗಳ ಪ್ರಕಾರ ಅವರು ಮುಂದಿನ ಎರಡು ತಿಂಗಳ ಕಾಲ ಇಂಗ್ಲೆಂಡ್‌ನಲ್ಲಿ ಇರಬೇಕಾಗುತ್ತದೆ.

ಇನ್ನು ಇಂತಹ ಸುಳ್ಳು ಸುದ್ದಿ ಹರಡುತ್ತಿರುವ ಕೆಲ ಮಾಧ್ಯಮಗಳ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ. 

Stay up to date on all the latest ಕ್ರೀಡೆ news
Poll

ಎನ್‌ಡಿಎ ಆಡಳಿತದಲ್ಲಿ ಭಯೋತ್ಪಾದಕ ದಾಳಿಯಿಂದ ಭಾರತ ಸುರಕ್ಷಿತವಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp